ಎನ್.ಎಸ್.ಎಸ್. ಶಿಬಿರ

ಕಿನ್ನಿಗೋಳಿ: ಸಾಮಾಜಿಕ ಬದ್ದತೆ, ನಾಯಕತ್ವ, ವ್ಯಕ್ತಿತ್ವ ವಿಕಸನ ಹಾಗೂ ಸುಪ್ತ ಪ್ರತಿಭೆಯ ಅನಾವರಣ ಎನ್.ಎಸ್.ಎಸ್. ಶಿಬಿರಗಳಲ್ಲಿ ಮೂಡುತ್ತದೆ. ಎಂದು ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಭವನದಲ್ಲಿ ಮಂಗಳೂರು ಶಾರದಾ ಕಾಲೇಜು ಎನ್.ಎಸ್.ಎಸ್. ವಾರ್ಷಿಕ ಶಿಬಿರದಲ್ಲಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಥಮ ದರ್ಜೇ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಸಮಾಪನಾ ಭಾಷಣಗೈದರು.
ಈ ಸಂದರ್ಭ ಉದ್ಯಮಿ ಪಠೇಲ್ ವಾಸುದೇವ ರಾವ್, ಶ್ರೀಕಾಂತ್ ಶೆಟ್ಟಿ, ನವೀನಚಂದ್ರ ಬಿ, ಉಷಾ ವಿಶ್ವನಾಥ್ ಭಟ್, ಪುನರೂರು ವಿಪ್ರಸಂಪದ ಅಧ್ಯಕ್ಷ ಸುರೇಶ್ ರಾವ್
ಶಾರದಾ ಕಾಲೇಜು ಪ್ರಿನ್ಸಿಪಾಲ್ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಶಿಬಿರಾಧಿಕಾರಿ ಸೂರಜ್ ಎಂ. ದೇವಾಡಿಗ, ಸಹಶಿಬಿರಾಧಿಕಾರಿ ದೀಕ್ಷಿತಾ ಆರ್ ಉಪಸ್ಥಿತರಿದ್ದರು.

Kinnigoli-24101505

Comments

comments

Comments are closed.

Read previous post:
Kinnigoli-24101504
ಸುಸಂಸ್ಕೃತ ಸಮಾಜದ ನಿರ್ಮಾಣ

ಕಿನ್ನಿಗೋಳಿ: ಶಾಂತಿ, ಸೌಹಾರ್ಧ್ಯತೆ, ಸಹೃದಯತೆಯ ಜೀವನವೇ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಪ್ರೇರಣೆಯಾಗಬಲ್ಲುದು ಎಂದು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು. ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ...

Close