ಪಕ್ಷಿಕೆರೆ ಸಮುದಾಯ ಭವನ ಶಿಲನ್ಯಾಸ

ಕಿನ್ನಿಗೋಳಿ: ಕೆಮ್ರಾಲ್ ಪಂಚಾಯಿತಿ ವ್ಯಾಪ್ತಿಯ ಪಕ್ಷಿಕೆರೆ ಹೊಸಕಾಡು ಬಬ್ಬುಸ್ವಾಮಿ ದೈವಸ್ಥಾನದ ಬಳಿ 10 ಲಕ್ಷ ವೆಚ್ಚದ ಅನುದಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಸಮುದಾಯ ಭವನ ಕಾಮಗಾರಿಗೆ ಶನಿವಾರ ಶಿಲನ್ಯಾಸವನ್ನು ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ನೆರವೇರಿಸಿದರು. ಈ ಸಂದರ್ಭ ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಮ್. ಅಂಚನ್, ಪಕ್ಷಿಕೆರೆ ಚರ್ಚ್ ಧರ್ಮಗುರು ಆಂಡ್ರ್ಯೂ ಲಿಯೋ ಡಿಸೋಜ, ಪಂಚಾಯಿತಿ ಸದಸ್ಯರಾದ ಮಯದ್ದಿ, ದೀಪಕ್ ಕೋಟ್ಯಾನ್, ಸುಮಲತಾ, ಲೀಲಾ ಪೂಜಾರ್ತಿ, ಪಕ್ಷಿಕೆರೆ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಸತೀಶ್, ಮುಲ್ಕಿ ಒಂಬತ್ತು ಮಾಗಣೆ ಮುಂಡಾಲ ಶಿವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಮಾಧವ ಕಾರ್ಯದರ್ಶಿ ಸಚ್ಚಿದಾನಂದ, ಸುಕುಮಾರ್, ಶ್ರೀಧರ್, ಜಾಕ್ಸನ್ ಸಲ್ಡಾನ, ಸಂದೇಶ ಸಿಕ್ವೇರಾ, ನವೀನ್ ಪಂಜ ಮತ್ತಿತರರು ಉಪಸ್ಥಿತರಿದ್ದರು.

Kinnigoli24101505

Comments

comments

Comments are closed.

Read previous post:
Kinnigoli-24101505
ಎನ್.ಎಸ್.ಎಸ್. ಶಿಬಿರ

ಕಿನ್ನಿಗೋಳಿ: ಸಾಮಾಜಿಕ ಬದ್ದತೆ, ನಾಯಕತ್ವ, ವ್ಯಕ್ತಿತ್ವ ವಿಕಸನ ಹಾಗೂ ಸುಪ್ತ ಪ್ರತಿಭೆಯ ಅನಾವರಣ ಎನ್.ಎಸ್.ಎಸ್. ಶಿಬಿರಗಳಲ್ಲಿ ಮೂಡುತ್ತದೆ. ಎಂದು ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ...

Close