ಬಾಲ್ ಬ್ಯಾಡ್ಮಿಂಟನ್ 2015-16

ಕಿನ್ನಿಗೋಳಿ: ಕಲಿಯುವಿಕೆಯೊಂದಿಗೆ ಕ್ರೀಡೆಗೂ ಉತ್ತೇಜನ ನೀಡಬೇಕು. ಕ್ರೀಡೆಯಿಂದ ದೇಹ ಸ್ಥಿತಿ ಕಾಪಾಡಲು ಸಾದ್ಯ , ಕ್ರೀಡೆಗೆ ಉತ್ತೇಜನ ಕೊಡುವ ದ್ರಷ್ಟಿಯಿಂದ ಮೂಡಬಿದ್ರೆಯಲ್ಲಿ ಐದು ಕೋಟಿ ರೂ ವೆಚ್ಚದಲ್ಲಿ ಸಿಂಥೆಟಿಕ್ ಟ್ರಾಕ್ ನಿರ್ಮಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಆಡಳಿತ ಮಂಗಳೂರು, ಕ್ಷೇತ್ರ ಶಿಕ್ಷಣಾಕಾರಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ, ಅನುದಾನಿತ ಶ್ರೀ ದುರ್ಗಾ ಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆ ಕಟೀಲು, ಮತ್ತು ಶತಮಾನೋತ್ಸವ ಸಮಿತಿ ಸಹಬಾಗಿತ್ವದಲ್ಲಿ ಶತಮಾನೋತ್ಸವ ವರ್ಷಚರಣೆ ಸಂಭ್ರಮದ ಅಂಗವಾಗಿ ಅನುದಾನಿತ ಕಟೀಲು ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಿಭಾಗಿಯ ಮಟ್ಟದ ಪ್ರೌಡ ಶಾಲಾ ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಟನ್ ಸ್ಪರ್ಧೆ 2015-16ರ ಉದ್ಘಾಟನಾ ಸಮಾರಂಭದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಪರ್ಧೆಯ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನೆರವೇರಿಸಿದರು. ಕಟೀಲು ದೇವಳದ ಅರ್ಚಕ ಹರಿ ನಾರಾಯಣ ಅಸ್ರಣ್ಣ ಶುಭಾಶಂಸನೆಗೈದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಕಟೀಲು ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾದ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಪಂಚಾಯಿತಿ ಸದಸ್ಯ ರಮಾನಂದ ಪೂಜಾರಿ, ದ.ಕ.ಎ.ಪಿ.ಎಂ,ಸಿ ಅದ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಕಟೀಲು ಕಾಲೇಜು ಪ್ರಿನ್ಸ್‌ಪಾಲ್ ಎಂ. ಬಾಲಕ್ರಷ್ಣ ಶೆಟ್ಟಿ, ಪದವಿ ಪೂರ್ವ ಕಾಲೇಜು ಪ್ರಿನ್ಸ್‌ಪಾಲ್ ಜಯರಾಮ ಪೂಂಜ, ಪ್ರೌಢ ಶಾಲಾ ವೈಸ್ ಪ್ರಿನ್ಸ್‌ಪಾಲ್ ಸೋಮಪ್ಪ ಅಲಂಗಾರ್, ಪದ್ಮನೂರು ಕ್ಲಸ್ಟರ್ ಸಿ.ಆರ್.ಪಿ ಜಗದೀಶ್ ನಾವಡ, ಮಂಗಳೂರು ಉತ್ತರ ದೈಹಿಕ ಶಿಕ್ಷಣ ಪರಿವೀಕ್ಷಕ ರಘನಾಥ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಕೆ.ಬಿ ಕೇಶವ, ಹಿರಿಯ ಕ್ರೀಡಾಕಾರಿ ಕರ್ತಲ, ಹರೀಶ ರೈ, ಕಟೀಲು ಹಿ.ಪ್ರಾ.ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೆಂಕಟ ರಮಣ ಹೆಗ್ದೆ ಉಪಸ್ಥಿತರಿದ್ದರು.
ಕಟೀಲು ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ವೈ. ಗೋಪಾಲ ಶೆಟ್ಟಿ, ಸ್ವಾಗತಿಸಿ, ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಫೋಟೊ-೨೬ಕಿನ್ನಿಕಟೀಲು

Kinnigoli-26101518 Kinnigoli-26101519 Kinnigoli-26101520 Kinnigoli-26101521 Kinnigoli-26101522 Kinnigoli-26101523

Comments

comments

Comments are closed.

Read previous post:
Kinnigoli-26101517
ಕಟೀಲು ಕನ್ನಡಕ ವಿತರಣೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ಎಂ.ಸಿ.ಎಫ್. ವತಿಯಿಂದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ...

Close