ಪಕ್ಷಿಕೆರೆ ಸಮುದಾಯ ಭವನ ಶಿಲನ್ಯಾಸ

ಕಿನ್ನಿಗೋಳಿ: ಕೆಮ್ರಾಲ್ ಪಂಚಾಯಿತಿ ವ್ಯಾಪ್ತಿಯ ಪಕ್ಷಿಕೆರೆ ಹೊಸಕಾಡು ಬಬ್ಬುಸ್ವಾಮಿ ದೈವಸ್ಥಾನದ ಬಳಿ 10 ಲಕ್ಷ ವೆಚ್ಚದ ಅನುದಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಸಮುದಾಯ ಭವನ ಕಾಮಗಾರಿಗೆ ಶನಿವಾರ ಶಿಲನ್ಯಾಸವನ್ನು ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ನೆರವೇರಿಸಿದರು. ಈ ಸಂದರ್ಭ ಪಕ್ಷಿಕೆರೆ ಚರ್ಚ್ ಧರ್ಮಗುರು ಆಂಡ್ರ್ಯೂ ಲಿಯೋ ಡಿಸೋಜ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಮ್. ಅಂಚನ್, ಪಂಚಾಯಿತಿ ಸದಸ್ಯರಾದ ಮಯದ್ದಿ, ದೀಪಕ್ ಕೋಟ್ಯಾನ್, ಸುಮಲತಾ, ಲೀಲಾ ಪೂಜಾರ್ತಿ, ಪಕ್ಷಿಕೆರೆ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಸತೀಶ್, ಶೀನ ಸ್ವಾಮಿ, ಮುಲ್ಕಿ ಒಂಬತ್ತು ಮಾಗಣೆ ಮುಂಡಾಲ ಶಿವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಮಾಧವ ಕಾರ್ಯದರ್ಶಿ ಸಚ್ಚಿದಾನಂದ, ಸುಕುಮಾರ್, ಶ್ರೀಧರ್, ಜಾಕ್ಸನ್ ಸಲ್ಡಾನ, ಸಂದೇಶ ಸಿಕ್ವೇರಾ, ನವೀನ್ ಪಂಜ ಮತ್ತಿತರರು ಉಪಸ್ಥಿತರಿದ್ದರು.

Kinnigoli-26101514

Comments

comments

Comments are closed.

Read previous post:
Mulki-26101513
ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ

ಮೂಲ್ಕಿ: ವಿದ್ಯಾರ್ಥಿಗಳಿಗೆ ಜೀವನಾವಶ್ಯವಾಗಿ ಅಗತ್ಯವಿರುವ ಅಪೂರ್ವ ಮಾಹಿತಿಗಳು ಹಾಗೂ ಪ್ರತ್ಯಕ್ಷ ಅನುಭವಗಳು ಗ್ರಾಮೀಣ ಪ್ರದೇಶದ ಶಿಭಿರಗಳಿಂದ ಸಾಧ್ಯವಾಗುತ್ತದೆ ಎಂದು ಮಂಗಳೂರು ಶಾರದಾ ಕಾಲೇಜು ಪ್ರಾಂಶುಪಾಲ ಡಾ. ಕಬ್ಬಿನಾಲೆ...

Close