ಮೆರಿಟ್ ಅವಾರ್ಡ್-2015

ಮೂಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ವಿದ್ಯಾರ್ಜನೆಯಿಂದ ಸ್ವತಂತ್ರರಾಗಿ ಬದುಕಲು ಸಾದ್ಯವಿದ್ದು ಪ್ರತಿಯೊಬ್ಬರೂ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತಿಯನ್ನು ಪಡೆದಾಗ ಸಮಾಜವು ಅಭಿವೃದ್ಧಿ ಹೊಂದಲು ಸಾಧ್ಯವೆಂದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ ಸುವರ್ಣ ಹೇಳಿದರು.
ಮೂಲ್ಕಿಯ ಬಿಲ್ಲವ ಮಹಾ ಮಂಡಲದ ಸಭಾಭವನದಲ್ಲಿ ಮುಂಬೈ ಬಿಲ್ಲವರ ಎಸೋಸಿಯೇಶನ್‌ನ ಅಮೃತನಿಧಿಯಿಂದ ಜರಗಿದ ಮೆರಿಟ್ ಅವಾರ್ಡ್-2015 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮವನ್ನು ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್ ಉದ್ಘಾಟಿಸಿದರು.ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಾದ ಮುಕ್ಕಗುತ್ತು ಜಯಾನಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಅವಿಭಜಿತ ದ.ಕ ಜಿಲ್ಲೆಯ ಬಿಲ್ಲವ ಸಮಾಜದ 10ನೇ ತರಗತಿಯಿಂದ ಉನ್ನತ ವ್ಯಾಸಂಗದವರೆಗಿನ 390 ವಿದ್ಯಾರ್ಥಿಗಳಿಗೆ ಸುಮಾರು 8 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು.ಅಧ್ಯಕ್ಷತೆಯನ್ನು ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ವಹಿಸಿದ್ದು ಗುರು ಚ್ಯಾರಿಟೇಬಲ್ ಉಪಾಧ್ಯಕ್ಷ ಚಂದ್ರಶೇಕರ್ ನಾನಿಲ್, ರಾಜಾ ಬಿ. ಸಾಲ್ಯಾನ್, ಆರ್‌ಡಿ ಪೂಜಾರಿ, ಮಹೇಶ್ ಪೂಜಾರಿ ಕಾರ್ಕಳ, ಶ್ರೀನಿವಾಸ ಕರ್ಕೇರಾ, ಶಂಕರ್ ಸುವರ್ಣ, ಎಂಎನ್ ಸನಿಲ್, ಜಗನ್ನಾಥ ಕೋಟ್ಯಾನ್, ವಿಶ್ವನಾಥ ಕೋಟ್ಯಾನ್, ಭಾಸ್ಕರ್ ಸಾಲ್ಯಾನ್, ನೀಲೇಶ್ ಪೂಜಾರಿ, ಗೋಪಾಲ ಪಾಲನ್ ಉಪಸ್ತಿತರಿದ್ದರು.
ವಿದ್ಯಾ ಉಪಸಮಿತಿಯ ಅಧ್ಯಕ್ಷ ಭಾಸ್ಕರ ಬಂಗೇರಾ ಸ್ವಾಗತಿಸಿದರು. ಧರ್ಮಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

Prakash Suvarna

Mulki-26101502 Mulki-26101503

Comments

comments

Comments are closed.

Read previous post:
Kinnigoli-26101501
ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ

ಮೂಲ್ಕಿ: ಮೂಲ್ಕಿಯ ಹಿಂದೂ ಯುವ ಸೇನೆ ಘಟಕದ ಆಶ್ರಯದಲ್ಲಿ ಮೂಲ್ಕಿಯ ಪುನರೂರು ಕಾಂಪ್ಲೆಕ್ಸ್ ಬಳಿಯ ಶಿವಾಜಿ ಮಂಟಪದಲ್ಲಿ ನಡೆಯುತ್ತಿರುವ 17 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ...

Close