ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ

ಮೂಲ್ಕಿ: ಮೂಲ್ಕಿಯ ಹಿಂದೂ ಯುವ ಸೇನೆ ಘಟಕದ ಆಶ್ರಯದಲ್ಲಿ ಮೂಲ್ಕಿಯ ಪುನರೂರು ಕಾಂಪ್ಲೆಕ್ಸ್ ಬಳಿಯ ಶಿವಾಜಿ ಮಂಟಪದಲ್ಲಿ ನಡೆಯುತ್ತಿರುವ 17 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆಯವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಹಿಂದೂ ಯುವ ಸೇನೆಯ ಕೇಂದ್ರೀಯ ಮಂಡಳಿಯ ಗೌರವಾಧ್ಯಕ್ಷ ಭಾಸ್ಕರ ಚಂದ್ರ ಶೆಟ್ಟಿ ವಹಿಸಿದ್ದು ದ.ಕ. ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ನ ಅಧ್ಯಕ್ಷ ಯಶ್ ಪಾಲ್ ಸುವರ್ಣ,ಹಿಂದೂ ಯುವ ಸೇನೆಯ ಕೇಂದ್ರೀಯ ಮಂಡಳಿಯ ಅಧ್ಯಕ್ಷ ಯಶೋಧರ ಚೌಟ,ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು,,ಮೂಲ್ಕಿಯ ಕಾರು ಚಾಲಕ-ಮಾಲಕರ ಸಂಘದ ಅಧ್ಯಕ್ಷ ಜಗದೀಶ್ ದೇವಾಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಸೇನೆಯ ಅಧ್ಯಕ್ಷ ಸಂಪತ್ ಕೋಟ್ಯಾನ್, ಸ್ಥಾಪಕಾಧ್ಯಕ್ಷ ಗೋವಿಂದ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಲಕುಮಿ ತಂಡದಿಂದ ರಡ್ಡೆಟ್ ಏರೆಡ್ಡೆ ತುಳು ಹಾಸ್ಯ ನಾಟಕ ಪ್ರದರ್ಶಿಸಲ್ಪಟ್ಟಿತು.

Prakash Suvarna

Kinnigoli-26101501

Comments

comments

Comments are closed.

Read previous post:
Kinnigoli24101506
ಶಿವಪ್ಪ ರಾಣ್ಯ (39ವರ್ಷ)

ಕಿನ್ನಿಗೋಳಿ: ಮೂರುಕಾವೇರಿ ಶ್ರೀ ಮಹಮ್ಮಾಯಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಿವಪ್ಪ ರಾಣ್ಯ (39ವರ್ಷ) ಹೃದಯಘಾತದಿಂದ ಶುಕ್ರವಾರ ನಿಧನ ಹೊಂದಿದರು. ಮೃತರಿಗೆ ಪತ್ನಿ ಹಾಗೂ ಮೂವರು ಸಹೋದರರು ಮತ್ತು ಇಬ್ಬರು...

Close