ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ

ಮೂಲ್ಕಿ: ವಿದ್ಯಾರ್ಥಿಗಳಿಗೆ ಜೀವನಾವಶ್ಯವಾಗಿ ಅಗತ್ಯವಿರುವ ಅಪೂರ್ವ ಮಾಹಿತಿಗಳು ಹಾಗೂ ಪ್ರತ್ಯಕ್ಷ ಅನುಭವಗಳು ಗ್ರಾಮೀಣ ಪ್ರದೇಶದ ಶಿಭಿರಗಳಿಂದ ಸಾಧ್ಯವಾಗುತ್ತದೆ ಎಂದು ಮಂಗಳೂರು ಶಾರದಾ ಕಾಲೇಜು ಪ್ರಾಂಶುಪಾಲ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಹೇಳಿದರು.
ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮಂಗಳೂರು ಶಾರದಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ ನಡೆದ ವಾರ್ಷಿಕ ಶಿಭಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣದ ವಿದ್ಯಾರ್ಥಿಗಳು ತಿಳಿದು ಕೊಳ್ಳಬೇಕಾದ ಮೌಲ್ಯಾಧಾರಿತ ಶಿಕ್ಷಣದಲ್ಲಿ ಬಹಳ ಅಮೂಲ್ಯವಾದ ಪ್ರಕೃತಿ,ವಾತಾವರಣ ಶುದ್ದತೆ ಜೀವ ಪ್ರಭೇಧಗಳ ಪರಿಚಯ ಹಾಗೂ ಪ್ರಗತಿಪರ ಮತ್ತು ಸಾಂಪ್ರದಾಯಿಕ ಕೃಷಿ ಪದ್ದತಿಯ ಬಗ್ಗೆ ಸಮಗ್ರ ಅಧ್ಯಯನ ಹಾಗೂ ಮಾಹಿತಿ ಕ್ರೋಡೀಕರಣವು ಈ ಬಾರಿಯ ಶಿಭಿರದಲ್ಲಿ ಸಾಕಷ್ಟು ನಡೆದಿದೆ ಎಂದರು
ಲಯನ್ಸ್ ವಲಯಾಧ್ಯಕ್ಷ ದೇವಪ್ರಸಾದ್ ಪುನರೂರು ಮಾತನಾಡಿ ಪಟ್ಟಣದ ವಿದ್ಯಾರ್ಥಿಗಳಾಗಿದ್ದರೂ ವಿದ್ಯಾರ್ಥಿಗಳ ಶಿಸ್ತು ಹಾಗೂ ಮಾಹಿತಿ ಕ್ರೋಡೀಕರಣದ ಬಗ್ಗೆ ಅವರಿಗಿರುವ ಆಸಕ್ತಿ ಶ್ಲಾಘನೀಯ ಎಂದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೇ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ ಬಾಲಕೃಷ್ಣ ಶೆಟ್ಟಿ ಸಮಾರೋಪ ಭಾಷಣ ಮಾಡಿದರು.
ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಪಟೇಲ್ ವಾಸುದೇವ ರಾವ್,ಶಾರದಾ ವಿದ್ಯಾ ಸಂಸ್ಥೆಯ ಟ್ರಸ್ಟಿ ಪ್ರದೀಪ್ ಕುಮಾರ್ ಕಲ್ಕೂರಾ, ಕಿನ್ನಿಗೋಲೀ ಉದ್ಯಮಿ ಶ್ರೀಕಾಂತ ಶೆಟ್ಟಿ, ಮಂಗಳೂರು ಉದ್ಯಮಿ ನವೀನಚಂದ್ರ ಬಿ, ಕಿಲ್ಪಾಡಿ ಜ್ಯೋತಿಷಿ ವಿಶ್ವನಾಥ ಭಟ್ ಮತ್ತು ಉಷಾ ಭಟ್,ಪುನರೂರು ವಿಪ್ರಸಂಪದ ಅಧ್ಯಕ್ಷ ಸುರೇಶ್ ರಾವ್ ಅತಿಥಿಗಳಾಗಿದ್ದರು.
ಸಹ ಯೋಜನಾಧಿಕಾರಿ ದೀಕ್ಷಿತಾ ಸ್ವಾಗತಿಸಿದರು,ಯೋಜನಾಧಿಕಾರಿ ಸೂರಜ್.ಎಂ ದೇವಾಡಿಗ ವಂದಿಸಿದರು, ಕಾರ್ಯದರ್ಶಿ ವರ್ಷಾ ವಿ ನಿರೂಪಿಸಿದರು.Mulki-26101513

Comments

comments

Comments are closed.

Read previous post:
Mulki-26101512
ತೋಕೂರು ಯೋಗ ಶಿಬಿರ

ಹಳೆಯಂಗಡಿ: ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ತೋಕೂರು ಯುವಕ ಸಂಘ, ಮಹಿಳಾ ಸಂಘ ಹಾಗೂ ಶ್ರಿ ಸುಬ್ರಹ್ಮಣ್ಯ ಕ್ರಿಕೇಟರ‍್ಸ್ ನ ಜಂಟಿ ಸಂಯೋಜನೆಯಲ್ಲಿ ನಡೆದ...

Close