ಪಕ್ಷಿಕೆರೆ ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಯುವಜನಾಂಗವನ್ನು ಧಾರ್ಮಿಕ ಶಿಸ್ತು ಸಂಸ್ಕಾರ ನೀಡಿ ಬೆಳೆಸುವ ಕರ್ತವ್ಯ ನಮ್ಮದಾಗಬೇಕು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಅವರಿಗೆ ಜೀವನದ ಯಶಸ್ಸಿನ ದಾರಿ ತೋರಿಸಿದಲ್ಲಿ ಭಗವಂತನ ಕೃಪಕಟಾಕ್ಷ ಖಂಡಿತಾ ಸಿಗಲಿದೆ. ಎಂದು ಶಿವಮೊಗ್ಗ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಪ್ರಾನ್ಸಿಸ್ ಸೆರಾವೊ ಹೇಳಿದರು.
ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶೈಲೇಶ್ ಮೊಂತೆರೋ-ರಶ್ಮಿ ಡಿಸೋಜ, ಅರುಣ್ ಅಶೋಕ್ ವರೇಡಾ-ಅಂಜಲಿ ಮೇರಿ, ಜೋನ್ಸನ್ ಡಿಸೋಜ-ರೇಖಾ ಮೇರಿ ಮಾಡ್ತಾ, ರೋನಾಲ್ಡ್ ಡಿಸೋಜ-ಶರಲ್, ಲಾರೆನ್ಸ್ ಡಿಸೋಜ-ಶ್ರುತಿ, ಆಲ್ವಿನ್ ಡಿಸೋಜ-ಪ್ರಿಯಾಂಕ ವೇಗಸ್, ವಿನ್ಸೆಂಟ್ ಮೋರಾಸ್-ಸುನೀತಾ, ಹೆನ್ರಿ ಡಿಸೋಜ-ರೂಪಾ, ಸುನಿಲ್ ಕೊರೆಯ-ಗೀತಾ, ಡೊಲ್ಪಿ ರೊಡ್ರಿಗಸ್- ಜೆನೆಟ್ ಮೊಂತಿ ಡಿಸಿಲ್ವಾ, ಪಾವ್ಲ್ ಲಸ್ರಾದೊ-ಮೆಗಲ, ಅನಿಲ್ ಕ್ರಾಸ್ತಾ-ಜಸ್ಮಿನ್ ಕುಟಿನ್ಹಾ, ರಾಜೇಶ್ ಸಿಕ್ವೇರಾ- ರಮ್ಯ ಪೆರುಗೊಂಡ, ರೋಬರ್ಟ್ ಡಿಸೋಜ- ಮಂಜುಳ ಮರಿಯ, ಲಾರೆನ್ಸ್ ಪಿಂಟೊ-ಬಿನಿ, ರೋಹನ್ ನೊಯಲ್ ಡಿಸೋಜ-ಜಾನೆಟ್ ಡಿಸೋಜ, ಪ್ರಮೋದ್ ಕರ್ಕೇಟಾ-ಅನುಜಾ ಟಿಗಾ ಒಟ್ಟು 17 ಜೋಡಿಗಳು ದಾಂಪತ್ಯ ಜೀವನ ಸ್ವೀಕರಿಸಿದರು.
ಈ ಸಂದರ್ಭ ಸಚಿವ ಕೆ. ಅಭಯಚಂದ್ರ ಜೈನ್, ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಪ್ರಧಾನ ಧರ್ಮಗುರು ಫಾ. ಆಂಡ್ರ್ಯೂ ಲಿಯೋ ಡಿ ಸೋಜ ಪಕ್ಷಿಕೆರೆ, ಸಹಾಯಕ ಧರ್ಮ ಗುರು ಪ್ಯಾಟ್ರಿಕ್ ಸಿಕ್ವೇರಾ, ಕಿನ್ನಿಗೋಳಿ ವಲಯದ ಪ್ರಧಾನ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ ಸಹಿತ ಪರಿಸರದ ಹಾಗೂ ಹೊರ ರಾಜ್ಯದ ಚರ್ಚುಗಳ ಧರ್ಮಗುರುಗಳು, ಪಕ್ಷಿಕೆರೆ ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಲೂಸಿ ಡಿಸೋಜಾ ಹಾಗೂ ರಾಬರ್ಟ್ ಡಿಸೋಜ ಉಪಸ್ಥಿತರಿದ್ದರು.

Kinnigoli-27101501 Kinnigoli-27101502 Kinnigoli-27101503

Comments

comments

Comments are closed.

Read previous post:
Kinnigoli-26101522
ಬಾಲ್ ಬ್ಯಾಡ್ಮಿಂಟನ್ 2015-16

ಕಿನ್ನಿಗೋಳಿ: ಕಲಿಯುವಿಕೆಯೊಂದಿಗೆ ಕ್ರೀಡೆಗೂ ಉತ್ತೇಜನ ನೀಡಬೇಕು. ಕ್ರೀಡೆಯಿಂದ ದೇಹ ಸ್ಥಿತಿ ಕಾಪಾಡಲು ಸಾದ್ಯ , ಕ್ರೀಡೆಗೆ ಉತ್ತೇಜನ ಕೊಡುವ ದ್ರಷ್ಟಿಯಿಂದ ಮೂಡಬಿದ್ರೆಯಲ್ಲಿ ಐದು ಕೋಟಿ ರೂ ವೆಚ್ಚದಲ್ಲಿ ಸಿಂಥೆಟಿಕ್...

Close