150ಕ್ಕೂ ಹೆಚ್ಚು ಮಕ್ಕಳಿಂದ ಯಕ್ಷಗಾನ

ಕಟೀಲು :  ಶ್ರೀ ದುರ್ಗಾ ಮಕ್ಕಳ ಮೇಳದ ಏಳನೇ ವರ್ಷದ ಕಲಾಪರ್ವ ತಾ.30,31 ಹಾಗೂ ನವೆಂಬರ್ 1ರಂದು ಕಟೀಲಿನ ಸರಸ್ವತೀ ಸದನದಲ್ಲಿ ನಡೆಯಲಿದೆ ಎಂದು ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.
ಮೂರು ದಿನಗಳ ಕಾಲ ವಿವಿಧ ಮಕ್ಕಳ ತಂಡಗಳು ಯಕ್ಷಗಾನ ಪ್ರದರ್ಶನಗಳನ್ನು ನೀಡಲಿದ್ದು, ಶ್ರೀ ದುರ್ಗಾ ಮಕ್ಕಳ ಮೇಳದ ಕಲಾಔಇದರು ವಿವಿಧ ಒಡ್ಡೋಲಗಳನ್ನು, ಪ್ರಸಂಗಗಳನ್ನು ಪ್ರದರ್ಶಿಸಲಿದ್ದಾರೆ.
ದುರ್ಗಾಮಕ್ಕಳ ಮೇಳದ ಕಲಾವಿದರು ತಾ.30ರಂದು ಬೆಳಿಗ್ಗೆ ಚೌಕಿ ಪೂಜೆಯ ಬಳಿಕ ಕೋಡಂಗಿ, ಬಾಲಗೋಪಾಲ, ಚಂದಭಾಮಾ, ಷಣ್ಮುಖ ಸುಬ್ರಾಯ, ಅರ್ಧನಾರೀಶ್ವರ, ರಂಗ ರಂಗಿ ಅರೆಪಾವಿನಾಟ, ಕೃಷ್ಣ ಒಡ್ಡೋಲಗ ಪ್ರದರ್ಶಿಸಿದರೆ, ತಾ.31ರಂದು ಚೌಕಿ ಪೂಜೆ ಚಪ್ಪರ ಮಂಚ ಕೋಲಾಟ, ಮುಖ್ಯ ಸ್ತ್ರೀ ವೇಷ, ಕಾರ್ತವೀರ್ಯನ ಒಡ್ಡೋಲಗ, ರಾವಣನ ಒಡ್ಡೋಲಗ, ಹನೂಮಂತನ ಒಡ್ಡೋಲಗ, ಗಂಧರ್ವ ಕನ್ಯೆ ಯಕ್ಷಗಾನ, ತಾ.1ರಂದು ಚೌಕಿಪೂಜೆ, ಪೀಠಿಕಾ ಸ್ತ್ರೀ ವೇಷ, ಪಾಂಡವರ ಒಡ್ಡೋಲಗ, ಹೆಣ್ಣು ಬಣ್ಣದ ಒಡ್ಡೋಲಗ, ಯಕ್ಷಗಾನ ಗಾನ ವೈಭವ, ರಾಮನ ಒಡ್ಡೋಲಗ ಸಮಾರೋಪದಲ್ಲಿ ರಾಣಿ ಶಶಿಪ್ರಭೆ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ.
ಈ ಮೂರು ದಿನಗಳಲ್ಲಿ ಮಂಗಳೂರಿನ ಶಾರದಾ ಯಕ್ಷಕಲಾ ಕೇಂದ್ರದವರಿಂದ ಕುಮಾರ ವಿಜಯ, ಬಾಯಾರು ಪಂಚಲಿಂಗೇಶ್ವರ ಬಾಲಯಕ್ಷಕಲಾವೃಂದದವರಿಂದ ಶ್ಯಮಂತಕಮಣಿ, ಸುರತ್ಕಲ್ ವಿದ್ಯಾದಾಯಿನಿ ಯಕ್ಷಕಲಾ ಮಕ್ಕಳ ಮೇಳದವರಿಂದ ಸುದರ್ಶನ ಗರ್ವಭಂಗ, ಪ್ರಗತಿ ಹರಿಯ ಪ್ರಾಥಮಿಕ ಶಾಲೆ ಇರಾದವರಿಂದ ಭಾರ್ಗವ ವಿಜಯ, ಪೊರ್ಕೋಡಿ ಸೋಮನಾಥೇಶ್ವರ ಯಕ್ಷನಿಧಿ ಟ್ರಸ್ಟ್‌ನವರಿಂದ ದಾಶರಥಿ ದರ್ಶನ, ಸುಳ್ಯ ವಿದ್ಯಾಸಾಗರ ಯಕ್ಷಗಾನ ಕಲಾಶಾಲೆಯವರಿಂದ ಭುವನಭಾಗ್ಯ, ಬಂಟ್ವಾಳ ಚಿಣ್ಣರಲೋಕ ಸೇವಾ ಟ್ರಸ್ಟ್‌ನವರಿಂದ ಅಭಿಮನ್ಯು ಕಾಳಗ, ಎಲ್ಲೂರು ಪಂಚಾಕ್ಷರಿ ಮಕ್ಕಳ ಮೇಳದವರಿಂದ ಶ್ರೀ ಮಹಾಗಣಪತಿ ಲಲಿತೋಪಖ್ಯಾನ, ಹಳುವಳ್ಳಿ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಟಾನದವರಿಂದ ಮೋಕ್ಷ ಸಂಗ್ರಾಮ, ಪಾಣಾಜೆ ಸುಬ್ರಹ್ಮಣ್ಯೇಶ್ವರ ಯಕ್ಷಕಲಾ ಸಂಘದವರಿಂದ ಭಕ್ತ ಸುಧನ್ವ ನಡೆಯಲಿದೆ.
ಖ್ಯಾತ ಕಲಾವಿದರಾದ ಐತಪ್ಪ ಗೌಡ, ಅಗರಿ ರಘುರಾಮ ಭಾಗವತರು, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಬನ್ನಂಜೆ ಸಂಜೀವ ಸುವರ್ಣ, ಸೂರಿಕುಮೇರು ಗೋವಿಂದ ಭಟ್, ನಂದಳಿಕೆ ಬಾಲಚಂದ್ರ ರಾವ್ ಇವರಿಗೆ ಸಂಮಾನವಿದೆ. ದುರ್ಗಾಮಕ್ಕಳ ಮೇಳದಲ್ಲಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರವಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-27101503
ಪಕ್ಷಿಕೆರೆ ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಯುವಜನಾಂಗವನ್ನು ಧಾರ್ಮಿಕ ಶಿಸ್ತು ಸಂಸ್ಕಾರ ನೀಡಿ ಬೆಳೆಸುವ ಕರ್ತವ್ಯ ನಮ್ಮದಾಗಬೇಕು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಅವರಿಗೆ ಜೀವನದ ಯಶಸ್ಸಿನ ದಾರಿ ತೋರಿಸಿದಲ್ಲಿ ಭಗವಂತನ ಕೃಪಕಟಾಕ್ಷ...

Close