ಕಟೀಲಿನಲ್ಲಿ ಮೂರು ದಿನಗಳ ಕಲಾ ಪರ್ವ ಆರಂಭ

ಕಟೀಲು : ಗಂಡುಕಲೆಯೆನಿಸಿದ ಯಕ್ಷಗಾನದ ಬಗ್ಗೆ ಪುರುಷರಲ್ಲಿ ಮಾತ್ರವಲ್ಲ, ಮಹಿಳೆಯರಲ್ಲೂ ಅಲ್ಲದೆ ಮಕ್ಕಳಲ್ಲೂ ಆಸಕ್ತಿ ಮೂಡಿ, ಎಲ್ಲಡೆ ಯಕ್ಷಗಾನದ ಕಂಪು ಹೆಚ್ಚುತ್ತಿರುವುದು ಅಭಿನಂದನೀಯ. ಸಮಾಧಾನದ, ಸಂತಸದ ಸಂಗತಿಯೂ ಆಗಿದೆ ಎಂದು ಖ್ಯಾತ ಭಾಗವತ ಅಗರಿ ರಘುರಾಮ ಭಾಗವತರು ಹೇಳಿದರು.
ಅವರು ಶುಕ್ರವಾರ ಕಟೀಲಿನ ಸರಸ್ವತೀ ಸದನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಶ್ರೀ ದುರ್ಗಾ ಮಕ್ಕಳ ಮೇಳದ ಏಳನೇ ವರ್ಷದ ಕಲಾಪರ್ವ ಕಾರ‍್ಯಕ್ರಮದ ಮೊದಲ ದಿನ ಗೌರವ ಸಂಮಾನ ಸ್ವೀಕರಿಸಿ ಮಾತನಾಡಿದರು.
ಕಟೀಲು ಮೇಳದ ಹಿರಿಯ ಕಲಾವಿದ ಐತಪ್ಪ ಗೌಡರನ್ನು ಶ್ರೀ ದುರ್ಗಾನುಗ್ರಹ ಪ್ರಶಸ್ತಿಯೊಂದಿಗೆ ಸಂಮಾನಿಸಲಾಯಿತು.
ಮೂಡುಬದ್ರೆಯ ಉದ್ಯಮಿ ಎಂ. ನಾರಾಯಣ, ಕಟೀಲಿನ ಅನಂತಪದ್ಮನಾಭ ಆಸ್ರಣ್ಣ, ಖ್ಯಾತ ವೈದ್ಯ ಡಾ. ಪದ್ಮನಾಭ ಕಾಮತ್, ಮಾತಾ ಡೆವಲಪ್ಪರ‍್ಸ್‌ನ ಸಂತೋಷ್ ಶೆಟ್ಟಿ, ಮಧೂರು ನಾರಾಯಣ ರಂಗಾಭಟ್, ಮುಂಬೈ ಉದ್ಯಮಿ ಗಣೇಶ ಶೆಟ್ಟಿ ಐಕಳ, ಭುಜಂಗ ಎಂ. ಶೆಟ್ಟಿ ನಲ್ಯಗುತ್ತು, ಪುರುಷೋತ್ತಮ ಶೆಟ್ಟಿ ಕೊಡೆತ್ತೂರು, ಪೆರ್ಮುದೆ ಶಾರದಾ ಯಕ್ಷಗಾನ ಮಂಡಳಿಯ ಶೇಖರ ಶೆಟ್ಟಿ, ಬೆಳ್ತಂಗಡಿಯ ಧರಣೇಂದ್ರ ಕುಮಾರ್ ಮತ್ತಿತರರಿದ್ದರು.
ಮಧೂರು ವೆಂಕಟರಕೃಷ್ಣರ ಚಂದ್ರಕಾಂತಿ ಪ್ರಸಂಗ ಕೃತಿ ಬಿಡುಗಡೆಗೊಳಿಸಲಾಯಿತು. ಮಕ್ಕಳ ಮೇಳದ ಯಕ್ಷಗಾನ ಗುರುಗಳಾದ ರಾಜೇಶ್ ಐ ಕಟೀಲು, ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯರನ್ನು ಗೌರವಿಸಲಾಯಿತು. ದೇವಿಪ್ರಕಾಶ್ ಸಂಮಾನ ಪತ್ರವನ್ನು ಹಾಡಿದರು.
ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ ಕಾರ‍್ಯಕ್ರಮ ನಿರೂಪಿಸಿದರು. ವಾಸುದೇವ ಶೆಣೈ ವಂದಿಸಿದರು.
ದಿನವಿಡೀ ದುರ್ಗಾಮಕ್ಕಳ ಮೇಳದ ಕಲಾವಿದರು ತಾ.30ರಂದು ಬೆಳಿಗ್ಗೆ ಚೌಕಿ ಪೂಜೆಯ ಬಳಿಕ ಕೋಡಂಗಿ, ಬಾಲಗೋಪಾಲ, ಚಂದಭಾಮಾ, ಷಣ್ಮುಖ ಸುಬ್ರಾಯ, ಅರ್ಧನಾರೀಶ್ವರ, ರಂಗ ರಂಗಿ ಅರೆಪಾವಿನಾಟ, ಕೃಷ್ಣ ಒಡ್ಡೋಲಗ ಪ್ರದರ್ಶಿಸಿದರೆ ಮಂಗಳೂರಿನ ಶಾರದಾ ಯಕ್ಷಕಲಾ ಕೇಂದ್ರದವರಿಂದ ಕುಮಾರ ವಿಜಯ, ಬಾಯಾರು ಪಂಚಲಿಂಗೇಶ್ವರ ಬಾಲಯಕ್ಷಕಲಾವೃಂದದವರಿಂದ ಶ್ಯಮಂತಕಮಣಿ, ಸುರತ್ಕಲ್ ವಿದ್ಯಾದಾಯಿನಿ ಯಕ್ಷಕಲಾ ಮಕ್ಕಳ ಮೇಳದವರಿಂದ ಸುದರ್ಶನ ಗರ್ವಭಂಗ, ಪ್ರಗತಿ ಹರಿಯ ಪ್ರಾಥಮಿಕ ಶಾಲೆ ಇರಾದವರಿಂದ ಭಾರ್ಗವ ವಿಜಯ ಪ್ರಸಂಗಗಳನ್ನು ಪ್ರದರ್ಶಿಸಿದರು.
ಇಂದು (31)ದುರ್ಗಾ ಮಕ್ಕಳ ಮೇಳದವರಿಂದ ಚೌಕಿ ಪೂಜೆ ಚಪ್ಪರ ಮಂಚ ಕೋಲಾಟ, ಮುಖ್ಯ ಸ್ತ್ರೀ ವೇಷ, ಕಾರ್ತವೀರ್ಯನ ಒಡ್ಡೋಲಗ, ರಾವಣನ ಒಡ್ಡೋಲಗ, ಹನೂಮಂತನ ಒಡ್ಡೋಲಗ, ಗಂಧರ್ವ ಕನ್ಯೆ ಯಕ್ಷಗಾನ, ಪೊರ್ಕೋಡಿ ಸೋಮನಾಥೇಶ್ವರ ಯಕ್ಷನಿಧಿ ಟ್ರಸ್ಟ್‌ನವರಿಂದ ದಾಶರಥಿ ದರ್ಶನ, ಸುಳ್ಯ ವಿದ್ಯಾಸಾಗರ ಯಕ್ಷಗಾನ ಕಲಾಶಾಲೆಯವರಿಂದ ಭುವನಭಾಗ್ಯ, ಬಂಟ್ವಾಳ ಚಿಣ್ಣರಲೋಕ ಸೇವಾ ಟ್ರಸ್ಟ್‌ನವರಿಂದ ಅಭಿಮನ್ಯು ಕಾಳಗ ನಡೆಯಲಿದೆ. ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳಿಗೆ ಕೃಷ್ಣ ಆಸ್ರಣ್ಣ ಪ್ರಶಸ್ತಿ ಪ್ರದಾನ ಹಾಗೂ ಬನ್ನಂಜೆ ಸಂಜೀವ ಸುವರ್ಣರಿಗೆ ಗೌರವಾರ್ಪಣೆ ನಡೆಯಲಿದೆ.

Comments

comments

Comments are closed.

Read previous post:
Kateel-30101501
ಶ್ರೀ ದುರ್ಗಾ ಮಕ್ಕಳ ಮೇಳದ 7ನೆಯ ಕಲಾಪರ್ವ

ಕಟೀಲು : ಶುಕ್ರವಾರ ಶ್ರೀ ದುರ್ಗಾ ಮಕ್ಕಳ ಮೇಳದ 7ನೆಯ ಕಲಾಪರ್ವದಲ್ಲಿ ಮೇಳದ ಕಲಾವಿದರಿಂದ ಕ್ರಷ್ಣನ ಒಡ್ಡೋಲಗ ನಡೆಯಿತು.  

Close