ಕಿನ್ನಿಗೋಳಿ ವಿಶೇಷ ಗ್ರಾಮ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನವಾಗುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ಹಾಗೂ ಇತರ ಯೋಜನೆಗಳ ಬಗ್ಗೆ ವಿಶೇಷ ಗ್ರಾಮ ಸಭೆ ಗುರುವಾರ ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರರವರ ಅಧ್ಯಕ್ಷತೆಯಲ್ಲಿ ಗಾ. ಪಂ. ಸಭಾಂಗಣದಲ್ಲಿ ನಡೆಯಿತು. ಮಂಗಳೂರು ತಾಲೂಕು ಸಂಯೋಜಕ ರಾಜು ಸಾಲ್ಯಾನ್ ಮಾಹಿತಿ ನೀಡಿದರು. ಪಿಡಿಒ ಅರುಣ್ ಪ್ರದೀಪ್ ಡಿಸೋಜಾ ಕ್ರಿಯಾ ಯೋಜನೆಯ ಪಟ್ಟಿ ನೀಡಿದರು. ಪಂ. ಕಾರ್ಯದರ್ಶಿ ಒಲಿವರ್ ಓಸ್ವಾಲ್ಡ್ ಪಿಂಟೋ, ಉಪಾಧ್ಯಕ್ಷೆ ಸುಜಾತಾ ಪೂಜಾರಿ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Kinnigoli-30101506

Comments

comments

Comments are closed.

Read previous post:
Kinnigoli-30101505
ಯಕ್ಷಗಾನ ಮುಖವರ್ಣಿಕೆ ಕಾರ್ಯಗಾರ

ಕಿನ್ನಿಗೋಳಿ: ಪರಂಪರೆಯ ಕೆಲವು ವೇಷಗಳ ಮುಖವರ್ಣಿಕೆ ತೆರೆ ಮರೆಗೆ ಸರಿಯುತ್ತಿರುವ ಇಂದಿನ ಕಾಲದಲ್ಲಿ ನಾವು ಮಕ್ಕಳಿಗೆ ವೇಷಗಳ ಮಾಹಿತಿಯನ್ನು ನೀಡಿ ಉಳಿಸಿ ಬೆಳಸಬೇಕಾಗಿದೆ ಎಂದು ಯಕ್ಷಗಾನ ಕಲಾವಿದ ಯಶೋದರ...

Close