ಕೊಡಗು ಜಿಲ್ಲೆ ಹಾಗೂ ದ.ಕ ಜಿಲ್ಲೆಗೆ ಪ್ರಶಸ್ತಿಯ ಗರಿ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಆಡಳಿತ ಮಂಗಳೂರು, ಕ್ಷೇತ್ರ ಶಿಕ್ಷಣಾಕಾರಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ, ಅನುದಾನಿತ ಶ್ರೀ ದುರ್ಗಾ ಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆ ಕಟೀಲು, ಮತ್ತು ಶತಮಾನೋತ್ಸವ ಸಮಿತಿ ಸಹಬಾಗಿತ್ವದಲ್ಲಿ ಶತಮಾನೋತ್ಸವ ವರ್ಷಚರಣೆ ಸಂಭ್ರಮದ ಅಂಗವಾಗಿ ಅನುದಾನಿತ ಕಟೀಲು ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಿಭಾಗಿಯ ಮಟ್ಟದ ಪ್ರೌಡ ಶಾಲಾ ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಟನ್ ಸ್ಪರ್ಧೆ 2015-16 ಬಾಲಕರ ವಿಭಾಗದಲ್ಲಿ ಕೊಡಗು ಜಿಲ್ಲೆ ಪ್ರಥಮ ಹಾಗೂ ಮಂಡ್ಯ ಜಿಲ್ಲೆ ದ್ವಿತೀಯ ಪ್ರಶಸ್ತಿ ಪಡೆದು ಕೊಂಡಿತು. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಹಾಗೂ ಮಂಡ್ಯ ಜಿಲ್ಲೆ ದ್ವಿತೀಯ ಪ್ರಶಸ್ತಿ ಪಡೆದು ಕೊಂಡಿತು.
ಮಂಗಳೂರು ಉತ್ತರ Pತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ ಪ್ರಶಸ್ತಿಗಳನ್ನು ವಿತರಿಸಿದರು. ಈ ಸಂದರ್ಭ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಕೆ.ಬಿ ಕೇಶವ, ಹಿರಿಯ ಕ್ರೀಡಾಧಿಕಾರಿ ಕರ್ತಲ, ಹರೀಶ ರೈ, ಕಟೀಲು ಪ್ರಾ.ಶಾಲಾ ಮುಖ್ಯ ಶಿಕ್ಷಕ ವೈ. ಗೋಪಾಲ ಶೆಟ್ಟಿ, ದಯಾನಂದ ಮಾಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೆಂಕಟರಮಣ ಹೆಗಡೆ, ಕಟೀಲು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೇಶವ ಕಟೀಲು, ಉಲ್ಲಂಜೆ ಯುವಶಕ್ತಿ ಫೆಂಡ್ಸ್‌ನ ವಿನೀತ್, ಕಲ್ಲಕುಮೇರು ಲವ್ಲಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಾಬುರಾಜೇಂದ್ರ ಪ್ರಸಾದ್, ನಂದಿನಿ ಯುವಕ ಮಂಡಲದ ಅನಿಲ್, ಭ್ರಾಮರೀ ಫ್ರೆಂಡ್ಸ್ ಕ್ಲಬ್‌ನ ಗಣೇಶ್, ವಿಜಯ ಯುವ ಸಂಗಮದ ಚೇತನ್, ಕೊಂಡೇಲ ಫ್ರೆಂಡ್ಸ್ ಕ್ಲಬ್‌ನ ಪ್ರವೀಣ್ ದೇವಾಡಿಗ, ದೇವರಗುಡ್ಡೆ ಫ್ರೆಂಡ್ಸ್‌ನ ದುರ್ಗಾಪ್ರಸಾದ್, ಕೊಂಡೇಲ ತರುಣವೃಂದ ತಾರಾನಾಥ ಶೆಟ್ಟಿ , ಚೇತನಾ ಯುವಕ ಮಂಡಲದ ಪ್ರಸಾದ್, ದುರ್ಗಾಂಬಿಕಾ ಯುವಕ ಮಂಡಲದ ಕೃಷ್ಣ ಬಲ್ಲಣ, ದುರ್ಗಾಕ್ರಿಕೆಟರ‍್ಸ್ ಅಧ್ಯಕ್ಷ ದುರ್ಗೇಶ, ಕಾಯ್ದಂಡ ಯುವಕ ಮಂಡಲದ ಚಂದ್ರಹಾಸ್, ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಅನಿಲ್, ಕೆಎಫ್‌ಸಿಯ ಪ್ರವೀಣ್ , ವಿಜಯಕುಮಾರ್ ಶೆಟ್ಟಿ , ಕೃಷ್ಣ, ರಾಜೇಶ್ ಐ, ಪಂಡಲೀಕ ಕೊಟ್ಟಾರಿ ಸಂತೋಷ್ ಉಪಸ್ಥಿತರಿದ್ದರು.

Kinnigoli-30101501
ಬಾಲಕರ ವಿಭಾಗ
ಕೊಡಗು ಜಿಲ್ಲೆ ಪ್ರಥಮ

Kinnigoli-30101502

ಮಂಡ್ಯ ಜಿಲ್ಲೆ ದ್ವಿತೀಯ

Kinnigoli-30101503

ಬಾಲಕಿಯರ ವಿಭಾಗ
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ

Kinnigoli-30101504

ಮಂಡ್ಯ ಜಿಲ್ಲೆ ದ್ವಿತೀಯ

Comments

comments

Comments are closed.

Read previous post:
ಕಟೀಲಿನಲ್ಲಿ ಮೂರು ದಿನಗಳ ಕಲಾ ಪರ್ವ ಆರಂಭ

ಕಟೀಲು : ಗಂಡುಕಲೆಯೆನಿಸಿದ ಯಕ್ಷಗಾನದ ಬಗ್ಗೆ ಪುರುಷರಲ್ಲಿ ಮಾತ್ರವಲ್ಲ, ಮಹಿಳೆಯರಲ್ಲೂ ಅಲ್ಲದೆ ಮಕ್ಕಳಲ್ಲೂ ಆಸಕ್ತಿ ಮೂಡಿ, ಎಲ್ಲಡೆ ಯಕ್ಷಗಾನದ ಕಂಪು ಹೆಚ್ಚುತ್ತಿರುವುದು ಅಭಿನಂದನೀಯ. ಸಮಾಧಾನದ, ಸಂತಸದ ಸಂಗತಿಯೂ...

Close