ಯಕ್ಷಗಾನ ಮುಖವರ್ಣಿಕೆ ಕಾರ್ಯಗಾರ

ಕಿನ್ನಿಗೋಳಿ: ಪರಂಪರೆಯ ಕೆಲವು ವೇಷಗಳ ಮುಖವರ್ಣಿಕೆ ತೆರೆ ಮರೆಗೆ ಸರಿಯುತ್ತಿರುವ ಇಂದಿನ ಕಾಲದಲ್ಲಿ ನಾವು ಮಕ್ಕಳಿಗೆ ವೇಷಗಳ ಮಾಹಿತಿಯನ್ನು ನೀಡಿ ಉಳಿಸಿ ಬೆಳಸಬೇಕಾಗಿದೆ ಎಂದು ಯಕ್ಷಗಾನ ಕಲಾವಿದ ಯಶೋದರ ಪಂಜ ಹೇಳಿದರು.
ಕೆರೆಕಾಡು ಶ್ರೀ ವಿನಾಯಕ ಮಕ್ಕಳ ಮೇಳ (ರಿ ) ಆಶ್ರಯದಲ್ಲಿ ಮಂಗಳವಾರ ನಡೆದ ಯಕ್ಷಗಾನ ಮುಖವರ್ಣಿಕೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಒಂದು ದಿನದ ಕಾರ್ಯಗಾರ ಅವರು ನಡೆಸಿಕೊಟ್ಟರು.
ಈ ಸಂದರ್ಭ ಶ್ರೀ ವಿನಾಯಕ ಮಕ್ಕಳ ಮೇಳದ ಅಧ್ಯಕ್ಷ ಜಯಂತ್ ಅಮೀನ್, ಪ್ರೇಮಲತಾ, ಅಭಿಜಿತ್, ತಾರಾನಾಥ ಶೆಟ್ಟಿಗಾರ್, ರೇಷ್ಮಾ , ಅಶೋಕ್, ಉಮೇಶ್ ಆಚಾರ್ಯ, ಗಣೇಶ್ ಬಂಗೇರ ಉಪಸ್ಥಿತರಿದ್ದರು.

Kinnigoli-30101505

Comments

comments

Comments are closed.

Read previous post:
Kinnigoli-30101503
ಕೊಡಗು ಜಿಲ್ಲೆ ಹಾಗೂ ದ.ಕ ಜಿಲ್ಲೆಗೆ ಪ್ರಶಸ್ತಿಯ ಗರಿ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಆಡಳಿತ ಮಂಗಳೂರು, ಕ್ಷೇತ್ರ ಶಿಕ್ಷಣಾಕಾರಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ, ಅನುದಾನಿತ ಶ್ರೀ ದುರ್ಗಾ...

Close