ಸಹೃದಯಸ್ಥರ ಸಹಾಯ ಹಸ್ತ ಬೇಕಾಗಿದೆ

ಕಿನ್ನಿಗೋಳಿ: ಪುಟ್ಟ ಮಕ್ಕಳೊಂದಿಗೆ ಶಾಲೆಯಲ್ಲಿ ಪಾಠ ಓದಿ ಆಟವಾಡಿ ತಾಯಿಯ ಮಡಿಲಲ್ಲಿ ಕುಳಿತು ತೊದಲು ನುಡಿಯಬೇಕಾಗಿದ್ದ ಗಂಡು ಮಗುವೊಂದು ವಿಧಿಯ ಲೀಲೆಯಿಂದ ತನ್ನ ಬಾಲ್ಯದ 6 ವರ್ಷ ಕಳೆದರೂ ಚಾಪೆಯಲ್ಲಿಯೇ ಜೀವನ ಕಳೆಯುವಂತ ಪರಿಸ್ಥಿತಿ ಕಿನ್ನಿಗೋಳಿ ಸಮೀಪದ ಏಳತ್ತೂರು ನೆಲಗುಡ್ಡೆಯಲ್ಲಿ ವಾಸಿಸುವ ಕುಟುಂಬಕ್ಕೊದಗಿದೆ.
ಮುದ್ದು ಮುದ್ದಾಗಿ ಕಾಣುವ ಈ ಮಗು ವಿಶಾಲ್. ಈ ಪ್ರಾಯದಲ್ಲಿ ಪರಿಸರದ ಎಳೆಯ ಮಕ್ಕಳೊಂದಿಗೆ ಆಟವಾಡಬೇಕಾದ ಕಾಲ, ಆದರೆ ವಿಧಿಯ ವಿಪರ್ಯಾಸದಿಂದ ನಾಲ್ಕು ಗೋಡೆಗಳ ಮಧ್ಯೆ ಹಾಸಿಗೆಯಲ್ಲಿಯೇ ಮಲಗುವ ಪರಿಸ್ಥಿತಿ ಬಂದಿದೆ.
ವಿನಯ ಮತ್ತು ಶಂಕರ ಪೂಜಾರಿ ದಂಪತಿಗಳ ಮಗು ವಿಶಾಲ್‌ಗೆ ಈಗ 6 ವರ್ಷ, ವಿನಯ ಅವರ ಚೊಚ್ಚಲ ಹೆರಿಗೆಗಾಗಿ ಕಾರ್ಕಳದ ಸರಕಾರಿ ಆಸ್ಪತ್ರೆಯಲ್ಲಿ ದಾಖಾಲಾಗಿದ್ದು ಆ ಸಂದರ್ಭ ವೈದ್ಯರ ನಿರ್ಲಕ್ಷವೋ ಅಥವಾ ಕಾಲದ ವಿಧಿಯೋ ಮಗು ಜನಿಸುವ ಸಂದರ್ಭ ಮಗುವಿನ ಕಾಲಿನ ಬಲ ಕಳೆದುಕೊಂಡಿದ್ದು ಮಗು ಈಗ ನಡೆಯಲಾಗದೆ ಮಲಗಿದ ಸ್ಥಿತಿಯಲ್ಲಿಯೇ ಇರುವ ಪರಿಸ್ಥಿತಿ ಬಂದೊಗಗಿದೆ. ಆದರೆ ಪ್ರಾರಂಭಿಕ ಹಂತದಲ್ಲಿ ಮಗುವಿಗೆ ತೊಂದರೆ ಇದೆ ಎಂದು ಗೊತ್ತಾಗಿಲ್ಲ, ಮಗು ತಿಂಗಳಾದರೂ ಸರಿಯಾಗಿ ಅಳದಿದ್ದಾಗ ಸಂಶಯ ಬಂದು ಬೇರೆ ವೈದ್ಯರ ಬಳಿ ತಪಾಸಣೆ ಮಾಡಿದಾಗ ಮಗುವಿನ ಸಮಸ್ಯೆ ಅರಿವಿಗೆ ಬಂದಾಗ ಹೆರಿಗೆ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷದಿಂದಾಗಿದೆ ಎಂದು ತಿಳಿಯಿತು.
ಬೇಸತ್ತ ದಂಪತಿಗಳು ಅನೇಕ ವೈದ್ಯರಲ್ಲಿ ತೋರಿಸಿದ್ದು ಅವರು ಮಗುವಿಗೆ ಸರಿಯಾದ ಚಿಕಿತ್ಸೆ ದೊರಕಿದಲ್ಲಿ ಬಲ ಕಳೆದು ಕೊಂಡಿರುವ ಕಾಲುಗಳು ಸರಿ ಆಗುವ ಸಾದ್ಯತೆ ಹೆಚ್ಚಾಗಿದೆ ಎಂದಿದ್ದಾರೆ.
ಈಗಾಗಲೇ ಹೆತ್ತವರು ಸುಮಾರು 4 ಲಕ್ಷ ರೂಪಾಯಿಯಷ್ಟು ಮಗುವಿನ ಚಿಕಿತ್ಸೆಗಾಗಿ ಖರ್ಚು ಮಾಡಿದ್ದಾರೆ. ಈಗ ತಿಂಗಳಿಗೆ ಸುಮಾರು 5 ಸಾವಿರ ರೂಪಾಯಿ ಖರ್ಚು ಇದ್ದು ಇದುವರೆಗೆ ತಾಯಿ ವಿನಯ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದು, ತಂದೆ ಹೋಟೇಲೊಂದರಲ್ಲಿ ಕೆಲಸ ನಿರ್ವಹಿಸಿ ಮಗುವಿನ ಆರೈಕೆಗಾಗಿ ದುಡಿಯುತ್ತಿದ್ದಾರೆ. ಪ್ರಸ್ತುತ ಮಗುವಿಗೆ ಚಿಕಿತ್ಸೆಗಾಗಿ ಮಂಗಳೂರಿನಲ್ಲಿ ಪ್ರತಿ ವಾರಕ್ಕೆ ಎರಡು ಬಾರಿ ಫಿಯೋತೆರಪಿ ಮಾಡಬೇಕಾಗಿದ್ದು ದಂಪತಿಗಳು ಮಗುವಿನ ಮುಂದಿನ ಚಿಕಿತ್ಸೆಗಾಗಿ ಹಣ ಹೊಂದಿಸಲಾಗದೆ ಪರದಾಡುತ್ತಿದ್ದಾರೆ. ವಾರಕ್ಕೆ ಎರಡು ಬಾರಿ ಮಗುವನ್ನು ಮಂಗಳೂರಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕಾದ ಕಾರಣ ತಮ್ಮ ಕೆಲಸಕ್ಕೂ ರಜೆ ಮಾಡಬೇಕಾದ ಅನಿವಾರ್ಯತೆ ಅವರಲ್ಲಿದೆ. ಆರ್ಥಿಕವಾಗಿ ತೀರಾ ಹಿಂದುಳಿದ ಈ ಕುಟುಂಬಕ್ಕೆ ಸಹೃದಯಸ್ಥರ ಸಹಾಯ ಹಸ್ತ ಬೇಕಾಗಿದೆ. ಸಹಾಯ ಮಾಡಲಿಚ್ಚಿಸುವವರು ಮಗುವಿನ ತಾಯಿಯ ಖಾತೆಗೆ ಹಣ ಜಮಾ ಮಾಡಬಹುದು
ವಿನಯ
ಕೆನರಾ ಬ್ಯಾಂಕ್, ಕಿನ್ನಿಗೋಳಿ

IFSC CODE – CNRB0000635

Acc. No  0635108065797

Kinnigoli-30101505 Kinnigoli-30101506 Kinnigoli-30101507

 

Comments

comments

Comments are closed.

Read previous post:
Kinnigoli-30101507
ಅತ್ತೂರು ಮಾಗಣೆ , ಆಡಳಿತ ಮಂಡಳಿ

ಕಿನ್ನಿಗೋಳಿ : ಶ್ರೀ ಅರಸು ಕುಂಜಿರಾಯ ದೈವಸ್ಥಾನ ಅತ್ತೂರು ಮಾಗಣೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಚರಣ್ ಜೆ. ಶೆಟ್ಟಿ ಅತ್ತೂರು ಕೊಜಪಾಡಿಬಾಳಿಕೆ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಗಣೇಶ್ ವಿ ಶೆಟ್ಟಿ...

Close