ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ

ಕಿನ್ನಿಗೋಳಿ: ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲನ್ನು ಒದಗಿಸುವಲ್ಲಿ ಹೈನುಗಾರರು ಉತ್ತಮ ಸ್ಪಂದನೆ ನೀಡುತ್ತದ್ದಾರೆ ಹಾಲು ಹಾಳಾಗದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಾಂದ್ರ ಶೀತಲೀಕರಣ ಘಟಕನ್ನು ಸ್ಥಾಪಿಸಲಾಗಿದೆ ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಹೇಳಿದರು.
ಶುಕ್ರವಾರ ಕರ್ನಿರೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನ ೮೩ನೇ ಸಾಂದ್ರ ಶೀತಲೀಕರಣ ಘಟಕ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕರ್ನಿರೆ ಹಲು ಉತ್ಪದಕರ ಸಹಕಾರ ಸಂಘದ ಅದ್ಯಕ್ಷರುಗಳಾದ ಚಂದ್ರಶೇಖರ ಶೆಟ್ಟಿ, ಪ್ರಕಾಶ್ ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ, ಪ್ರಸ್ತುತ ಕಾರ್ಯದರ್ಶಿ ದಯಾನಂದ ವಿ. ಶೆಟ್ಟಿ, ಹಾಲು ಪರೀವೀಕ್ಷರಾದ ಸುನೀತಾ ಹರೀಶ್ ಶೆಟ್ಟಿ, ಸನತ್ ಕುಮಾರ್ ಅಜಿಲ ಮತ್ತಿತರರನ್ನು ಗೌರವಿಸಲಾಯಿತು.
ಕರ್ನಿರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ದ. ಕ. ಹಾಲು ಒಕ್ಕೂಟದ ನಿರ್ವಾಹಕ ನಿರ್ದೇಶಕ ಡಾ. ಬಿ. ವಿ. ಸತ್ಯನಾರಾಯಣ, ನಿರ್ದೇಶಕರಾದ ಕೆ. ಪಿ. ಸುಚರಿತ ಶೆಟ್ಟಿ, ಡಾ. ಕೆ. ಎಂ. ಕೃಷ್ಣ ಭಟ್, ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ತಾ. ಪಂ. ಸದಸ್ಯ ನೆಲ್ಸನ್ ಲೋಬೊ, ಗ್ರಾ. ಪಂ. ಸದಸ್ಯರಾದ ಪ್ರಭಾಕರ ಶೆಟ್ಟಿ , ಜಯಲಕ್ಷ್ಮೀಕರುಣಾಕರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಕರ್ನಿರೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಹರೀಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ದಯಾನಂದ ವಿ. ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-30111501

Comments

comments

Comments are closed.

Read previous post:
Kinnigoli-30101505
ಸಹೃದಯಸ್ಥರ ಸಹಾಯ ಹಸ್ತ ಬೇಕಾಗಿದೆ

ಕಿನ್ನಿಗೋಳಿ: ಪುಟ್ಟ ಮಕ್ಕಳೊಂದಿಗೆ ಶಾಲೆಯಲ್ಲಿ ಪಾಠ ಓದಿ ಆಟವಾಡಿ ತಾಯಿಯ ಮಡಿಲಲ್ಲಿ ಕುಳಿತು ತೊದಲು ನುಡಿಯಬೇಕಾಗಿದ್ದ ಗಂಡು ಮಗುವೊಂದು ವಿಧಿಯ ಲೀಲೆಯಿಂದ ತನ್ನ ಬಾಲ್ಯದ 6 ವರ್ಷ ಕಳೆದರೂ...

Close