ಹನುಮಾನ್ ಚಾಲೀಸ ಪಠಣ

ಮೂಲ್ಕಿ: ಸಂತ ತುಲಸೀದಾಸರು ರಚಿಸಿರುವ ಹನುಮಾನ್ ಚಾಲೀಸಾ ಪದ್ಯ ಗುಛ್ಛವು ಅತ್ಯಂತ ಪ್ರಭಾವಶಾಲಿಯಾಗಿದ್ದು ಭಯ ನಾಶಕ್ಕಾಗಿ ವಿಶ್ವ ಮಾನ್ಯತೆಗಳಿಸಿದೆ ಎಂದು ಹಿರಿಯ ಸಾಹಿತಿ ಪತಂಜಲಿಯೋಗ ತಜ್ಞ ಎನ್.ಪಿ.ಶೆಟ್ಟಿ ಹೇಳಿದರು.
ಯೋಗ ಗುರು ಕೆಂಚನಕೆರೆ ಜಯ ಮುದ್ದು ಶೆಟ್ಟಿಯವರ ನೇತ್ರತ್ವದಲ್ಲಿ ಕಾರ್ನಾಡಿನಲ್ಲಿ ನಡೆದ ಹನುಮಾನ್ ಚಾಲೀಸ ಪಠಣ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಸಂತ ತುಳಸಿ ದಾಸನು ಹನುಮಂತನನ್ನು ಪ್ರತ್ಯಕ್ಷ ನೋಡಿ ಬರೆದು ಹಾಡಿದೆನ್ನಲಾದ ಹನುಮಾನ್ ಚಾಲಿಸ ಅತ್ಯಂತ ಪ್ರಭಾವಶಾಲಿ ಅದರ ಪಠಣ ಈಗ ದೇಶದ ಹೆಚ್ಚಿನ ಕಡೆಗಳಲ್ಲಿ ನಡೆಯುತ್ತಿದ್ದು ಅಮೇರಿಕಾ ಇಂಗ್ಲೆಂಡ್ ಜರ್ಮನಿ ಮುಂತಾದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ನಡೆಯುತ್ತಿದೆ ಎಂದರು.
ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ. ವಿಷ್ಣು ಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೋಗ ಗುರು ಜಯ ಮುದ್ದು ಶೆಟ್ಟಿಯವರು ಅಗ್ನಿಹೋತ್ರ ನಡೆಸಿ ಹನುಮಾನ್ ಚಾಲೀಸಾ ಪಠಣ ನಡೆಸಿದರು.
ವಿಶ್ವನಾಥ ನಾಯಕ್ , ಗಣೇಶ್, ವಸಂತ, ವೈ.ಎನ್.ಸಾಲಿಯಾನ್ ರವಿರಾಜ ಶೆಟ್ಟಿ, ಪ್ರೊ.ನಾಗರಾಜ ನಾಯಕ್ ಅತಿಥಿಗಳಾಗಿದ್ದರು. ಮೂಲ್ಕಿ ಪರಿಸರದ ಬಹಳಷ್ಟು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗಿಗಳಾದರು.

Bhagyavan Sanil

Mulki01121503

Comments

comments

Comments are closed.

Read previous post:
Mulki01121502
ಮೂಲ್ಕಿ ಎಂ.ಸತ್ಯೇಂದ್ರ ಶೆಣೈ ಆಯ್ಕೆ

ಮೂಲ್ಕಿ: ಬಿಜೆಪಿ ಮೂಲ್ಕಿ ನಗರ ಸಮಿತಿ ಅಧ್ಯಕ್ಷರಾಗಿ ಎಂ.ಸತ್ಯೇಂದ್ರ ಶೆಣೈ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್, ರಾಧಿಕಾ ವೈ.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ನರಸಿಂಹ ಪೂಜಾರಿ, ಕಾರ್ಯದರ್ಶಿಗಳಾಇ ಪ್ರದೀಪ್...

Close