ಧೀರ ಯೋಧರ ಸಂಸ್ಮರಣೆ

ಮೂಲ್ಕಿ: ರಾಷ್ಟ್ರದ ಹಾಗೂ ಜನಸಾಮಾನ್ಯರ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡುವಧೀರ ಸಿಪಾಯಿಗಳ ಬಗ್ಗೆ ಗೌರವ ಹಾಗೂ ಅವರ ಸಂಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಲಯನ್ಸ್ ವಲಯಾಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು.
ಮೂಲ್ಕಿ ಹೋಂಗಾರ್ಡ್ ಕಛೇರಿಯಲ್ಲಿ ಮುಂಬೈ ಭಯೋತ್ಪಾದಕರ ಧಾಳಿಗೀಡಾಗಿ ಹುತಾತ್ಮರಾದ ಧೀರ ಯೋಧರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೋಂಗಾರ್ಡ್ ಮೂಲ್ಕಿ ಘಟಕದ ಅಧಿಕಾರಿ ಮನ್ಸೂರ್ ಪ್ರಸ್ತಾವಿಸಿ, ಮುಂಬೈ ಧಾಳಿಯಲ್ಲಿ ಸೇನೆಯ ಸಿಪಾಯಿಗಳು ಅಧಿಕಾರಿಗಳು ಪೋಲೀಸ್ ಅಧಿಕಾರಿಗಳು ಹಾಗೂ ಹೋಂಗಾರ್ಡ್ ಸದಸ್ಯರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಬಲಿದಾನವನ್ನು ನೆನಪಿಸುವ ಈ ದಿನದಂದು ಕಳೆ 7ವರ್ಷಗಳಿಂದ ಸಂಸ್ಮರಣ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.
ಮೂಲ್ಕಿ ನಗರ ಪಂಚಾಯತಿ ಮುಖ್ಯಾಧಿಕಾರಿ ವಾಣಿ ಆಳ್ವಾ ದೀಪ ಬೆಳಗಿಸಿ ಪುಷ್ಪಗೌರವ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಸುನಿಲ್ ಆಳ್ವಾಮ ಹೋಂಗಾರ್ಡ್ ಹಿರಿಯ ಸಿಬ್ಬಂದಿಗಳಾದ ಅಬೂಬಕ್ಕರ್,ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Bhagyavan Sanil

Mulki01121501

Comments

comments

Comments are closed.

Read previous post:
Kinnigoli-29111502
ಕೆರೆಕಾಡು : ಸಂರ್ಪೂಣ ಶ್ರೀದೇವಿ ಮಹಾತ್ಮೆ ಶತ ಸಂಭ್ರಮ

ಕಿನ್ನಿಗೋಳಿ : ಯಕ್ಷಗಾನ ಸಂಸ್ಕಾರ ಸಂಸ್ಕ್ರತಿ ಅಧ್ಯಯನ ಶೀಲತೆಯನ್ನು ಸಾರುವ ಪರಂಪರೆಯ ಕಲೆಯಾಗಿದೆ. ಅಚ್ಚಕನ್ನಡದ ಮಾತು, ನಾಟ್ಯದ ಯಕ್ಷಗಾನ ಶ್ರೀಮಂತ ಕಲೆಯಾಗಿದೆ. ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ...

Close