ಸಂಸ್ಮರಣಾ ಕಾರ್ಯಕ್ರಮ

ಮೂಲ್ಕಿ: ಗ್ರಾಮೀಣ ಪ್ರದೇಶದಲ್ಲಿ ತಮ್ಮ ಅತ್ಯುತ್ತಮ ನಾಯಕತ್ವ ಗುಣಗಳಿಂದ ಜನ ಮನ್ನಣೆ ಗಳಿಸಿದ ಸುಖಾನಂದ ಶೆಟ್ಟಿಯವರ ಆದರ್ಶ ಯುವ ಸಮಾಜಕ್ಕೆ ದಾರಿದೀಪ ಎಂದು ಬಿಜೆಪಿ ತೋಕೂರು ಸಮಿತಿ ಅಧ್ಯಕ್ಷ ದಾಮೋದರ ಶೆಟ್ಟಿ ಹೇಳಿದರು.
ಹಿಂದೂ ಜಾಗರಣ ವೇದಿಕೆ ಕೆರೆಕಾಡು ಮತ್ತು ಬೆಳ್ಳಾಯೂರು ಘಟಕದ ಸಂಯೋಜನೆಯಲ್ಲಿ ಕೆರೆಕಾಡಿನಲ್ಲಿ ಒಂಭತ್ತು ವರ್ಷದ ಹಿಂದೆ ದುಷ್ಕರ್ಮಿಗಳಿಂದ ಹತರಾದ ಹಿಂದೂ ನಾಯಕ ಸುಖಾನಂದ ಶೆಟ್ಟಿ, ಹಾಗೂ ಈ ಸಂದರ್ಭ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಪ್ರೇಮ್ ಪೂಜಾರಿ ಚಿತ್ರಾಪು, ದಿನೇಶ್ ಪೂಜಾರಿ ಬಪ್ಪನಾಡುರವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಮೂಲ್ಕಿ ಮೂಡಬಿದ್ರಿ ಕಾರ್ಯದರ್ಶಿ ವಿನೋದ್ ಸಾಲ್ಯಾನ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಯುವ ಸಮಾಜವನ್ನು ಸಂಘಟಿಸಿ ಪ್ರದೇಶದ ಅಭಿವೃದ್ಧಿಗೆ ಕಾರಣವಾಗಿದ್ದ ದಿ,ಸುಖಾನಂದ ಶೆಟ್ಟಿಯವರ ಕಾರ್ಯ ಸ್ಮರಣೀಯವಾಗಿದ್ದು ಹಿಂದೂ ಸಮಾಜದ ಅಭಿವೃದ್ಧಿಯೊಂದಿಗೆ ಪ್ರದೇಶದ ಅಭಿವೃದ್ಧಿಯ ಹರಿಕಾರರಾಗಿದ್ದ ದಿ.ಸುಖಾನಂದ ಶೆಟ್ಟಿಯವರು ನೀಡಿದ ಸೇವೆ ಸದಾ ನೆನೆಪಿಸುವಂತ ಕಾರ್ಯವಾಗಿದೆ ಎಂದರು.
ಈ ಸಂದರ್ಭ ಕೆರೆಕಾಡು ಗ್ರಾಮ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ಕಾರ್ಯದರ್ಶಿ ದಿವ್ಯೇಶ್ ದೇವಾಡಿಗಾ, ದಿನೇಶ್ ದೇವಾಡಿಗ, ಕರುಣಾಕರ, ಗಣೇಶ್ ಕೋಟ್ಯಾನ್, ರಾಜೇಶ್ ಎನ್, ದೇವಾಡಿಗಾ, ಸತೀಶ್ ಆಚಾರ್ಯ, ಪಿಆರ್ ರಾಜೇಶ್, ಕೃಷ್ಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Mulki-02121503

Comments

comments

Comments are closed.

Read previous post:
Mulki-02121502
ಸುಖಾನಂದ ಶೆಟ್ಟಿ, ಪ್ರೇಮ್ ಪೂಜಾರಿ, ದಿನೇಶ್ ಪೂಜಾರಿ ಸಂಸ್ಮರಣೆ 

ಮೂಲ್ಕಿ: ಸಂಘಟನೆಗೆ ಹಾಗೂ ಹಿಂದುತ್ವದ ಬದ್ಧತೆಗೆ ಆದರ್ಶರಾಗಿದ್ದ ಸುಖಾನಂದ ಶೆಟ್ಟಿಯವರು ಅಗಲಿದ ನಂತರವು ಅವರ ನೆನಪು ಶಾಶ್ವತ, ಬಪ್ಪನಾಡಿನಲ್ಲಿ ಮೂಲ್ಕಿ ಪಟ್ಟಣ ಪಂಚಾಯಿತಿಯಿಂದ ಅವರ ಸ್ಮರಣಾರ್ಥದ ಉದ್ಯಾನವನ ನಿರ್ಮಾಣ...

Close