ಸುಖಾನಂದ ಶೆಟ್ಟಿ, ಪ್ರೇಮ್ ಪೂಜಾರಿ, ದಿನೇಶ್ ಪೂಜಾರಿ ಸಂಸ್ಮರಣೆ 

ಮೂಲ್ಕಿ: ಸಂಘಟನೆಗೆ ಹಾಗೂ ಹಿಂದುತ್ವದ ಬದ್ಧತೆಗೆ ಆದರ್ಶರಾಗಿದ್ದ ಸುಖಾನಂದ ಶೆಟ್ಟಿಯವರು ಅಗಲಿದ ನಂತರವು ಅವರ ನೆನಪು ಶಾಶ್ವತ, ಬಪ್ಪನಾಡಿನಲ್ಲಿ ಮೂಲ್ಕಿ ಪಟ್ಟಣ ಪಂಚಾಯಿತಿಯಿಂದ ಅವರ ಸ್ಮರಣಾರ್ಥದ ಉದ್ಯಾನವನ ನಿರ್ಮಾಣ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು, ಅವರ ಸಾಮಾಜಿಕ ಕ್ಷೇತ್ರದಲ್ಲಿನ ಸೇವಾ ಮನೋಭಾವನೆಯನ್ನು ಮುಂದುವರಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಮೂಲ್ಕಿಯ ಸ್ವಾಗತ್ ಸಭಾಂಗಣದಲ್ಲಿ ಮಂಗಳವಾರ ಒಂಭತ್ತು ವರ್ಷದ ಹಿಂದೆ ದುಷ್ಕರ್ಮಿಗಳಿಂದ ಹತರಾದ ಸುಖಾನಂದ ಶೆಟ್ಟಿ, ಹಾಗೂ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಪ್ರೇಮ್ ಪೂಜಾರಿ ಚಿತ್ರಾಪು, ದಿನೇಶ್ ಪೂಜಾರಿ ಬಪ್ಪನಾಡುರವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲ್ಕಿಯ ಕಾರ್ನಾಡು ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಸ್ಮರಣಾರ್ಥ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಉಪಾಧ್ಯಕ್ಷೆ ಸವಿತಾ ಭಂಡಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುನಿಲ್ ಆಳ್ವಾ, ಸದಸ್ಯರಾದ ಪುರುಷೋತ್ತಮ ರಾವ್, ಶೈಲೇಶ್ ಕುಮಾರ್, ರಾಧಿಕಾ ಕೋಟ್ಯಾನ್, ಉಮೇಶ್ ಮಾನಂಪಾಡಿ, ವಿಠಲ, ಬಿಜೆಪಿಯ ಭುವನಾಭಿರಾಮ ಉಡುಪ, ಈಶ್ವರ ಕಟೀಲು, ಕಸ್ತೂರಿ ಪಂಜ, ದೇವಪ್ರಸಾದ ಪುನರೂರು, ಲೀಲಾ ಬಂಜನ್, ಉದಯ ಅಮಿನ್ ಮಟ್ಟು, ನಗರ ಅಧ್ಯಕ್ಷ ಸತ್ಯೇಂದ್ರ ಶೆಣೈ, ಕಾರ್ಯದರ್ಶಿ ನರಸಿಂಹ ಪೂಜಾರಿ, ಇನ್ನಿತರರು ಹಾಜರಿದ್ದರು.

Mulki-02121502

Comments

comments

Comments are closed.

Read previous post:
Mulki-02121501
ಬ್ರಹ್ಮಶ್ರೀ ನಾರಾಯಣಗುರು ಸಂದೇಶ ರಥ

ಮೂಲ್ಕಿ: ಕರ್ನಾಟಕ ರಾಜ್ಯ ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘಟನೆಯ ವತಿಯಿಂದ ಕರ್ನಾಟಕ ರಾಜ್ಯದಾಂದ್ಯಂತ ಸಂಚರಿಸುವ ಗುರು ಸಂದೇಶ ರಥವನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ...

Close