ಎನ್.ಎಸ್.ಎಸ್ 15ನೇ ವರ್ಷದ ವಾರ್ಷಿಕ ಶಿಬಿರ

ಕಿನ್ನಿಗೋಳಿ: ವಿದ್ಯಾರ್ಥಿಗಳು ಎನ್.ಎಸ್.ಎಸ್. ವಿಶೇಷ ಶಿಬಿರದಲ್ಲಿ ಭಾಗವಹಿಸುವ ಮೂಲಕ ಸಮಾಜವನ್ನು ಅರಿಯಲು ಮತ್ತು ಜನರ ಮಧ್ಯೆ ಬೆರೆತು ಗ್ರಾಮಾಂತರ ಜೀವನ ಪದ್ದತಿಯನ್ನು ತಿಳಿದುಕೊಳ್ಳಲು ಸಾಧ್ಯ ಎಂದು ನಿಟ್ಟೆ ಇಂಜಿನಿಯರಿಂಗ್ ಕಾಲೇಜು ರೆಸಿಡೆಂಟ್-ಇಂಜಿನಿಯರ್ ಪುಪ್ಪರಾಜ್ ಎ. ನಾಕ್ ಹೇಳಿದರು.
ತೋಕೂರು ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಘಟಕದ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್. ಸಾಲ್ಯಾನ್ ಅಧ್ಯಕ್ಷತೆ ವಹಿಸಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಅವರು ಧ್ವಜಾರೋಹಣ ಗೈದು ಶಿಬಿರಕ್ಕೆ ಚಾಲನೆ ನೀಡಿದರು.
ಘಟಕದ ಶಿಭಿರಾಧಿಕಾರಿಯಾದ ರಘುರಾಮ ರಾವ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ದ.ಕ.ಜಿ.ಪಂ ಸದಸ್ಯೆ ಆಶಾ ರತ್ನಾಕರ ಸುವರ್ಣ, ಮಂಗಳೂರು ತಾ.ಪಂ. ಸದಸ್ಯ ರಾಜು ಕುಂದರ್, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ವಿನೋದ್ ಎಸ್. ಸಾಲ್ಯಾನ್, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿದಾಸ್ ಭಟ್, ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರಾದ ಎಲ್.ಕೆ. ಸಾಲ್ಯಾನ್, ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ದಾಮೋದರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ರಘುರಾಮ ರಾವ್ ಸ್ವಾಗತಿಸಿದರು ಸಹ ಶಿಬಿರಾಧಿಕಾರಿ ಹರಿ ಎಚ್. ವಂದಿಸಿದರು. ಲಕ್ಷ್ಮೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

Kinnigoli-03121502 Kinnigoli-03121503

Comments

comments

Comments are closed.

Read previous post:
Kinnigoli-03121501
ಯಕ್ಷಲಹರಿ – ಪಿ. ಸತೀಶ್ ರಾವ್ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ಯಕ್ಷಲಹರಿ ಇದರ ಅಧ್ಯಕ್ಷರಾಗಿ ಪಿ. ಸತೀಶ್ ರಾವ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಪಶುಪತಿ ಶಾಸ್ತ್ರೀ, ಕಾರ್ಯದರ್ಶಿ ವಸಂತ ದೇವಾಡಿಗ, ಜೊತೆಕಾರ್ಯದರ್ಶಿ ರಘುನಾಥ ಕಾಮತ್ ಕೆಂಚನಕೆರೆ, ಕೋಶಾಧಿಕಾರಿ ಜಗದೀಶ...

Close