ಡಾ. ಎಂ. ರಾಮಣ್ಣ ಶೆಟ್ಟಿ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕು ಎಳವೆಯಲ್ಲಿಯೇ ಗುರುತಿಸಿ ಅದಕ್ಕೆ ನೀರುಣಿಸಿ, ಅವರಿಗೆ ಸರಿಯಾದ ವೇದಿಕೆಯನ್ನು ಒದಗಿಸಿಕೊಟ್ಟಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುವುದು ಎಂದು ಕ್ರಾಸ್ ಲ್ಯಾಂಡ್ ಕಾಲೇಜು ಬ್ರಹ್ಮಾವರದ ಅಸೋಸಿಯೇಟ್ ಪ್ರೊಫೆಸರ್ ಡಾ.ಜಿ.ರಾಬರ್ಟ್ ಕ್ಲೈವ್ ಹೇಳಿದರು.
ನಿಟ್ಟೆ ವಿದ್ಯಾ ಸಂಸ್ಥೆಯ ಅಧೀನಕ್ಕೆ ಒಳ ಪಟ್ಟ ಸಂಸ್ಥೆಯಾದ ತಪೋವನ, ತೋಕೂರು ಡಾ|| ಎಂ. ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ನಿಟ್ಟೆಯ ಎನ್ ಎಮ್ ಎ ಎಮ್ ತಂತ್ರಜ್ಞಾನ ಸಂಸ್ಥೆಯ ಪ್ರಿನ್ಸಿಪಾಲ್ ಪ್ರೊ.ನಿರಂಜನ್. ಎನ್ ಚಿಪ್ಲೂನ್‌ಕರ್ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಶಾಲಾನಾಯಕ ನಹುಷ್ ಎಂ ಹೆಗ್ಡೆ, ಶಾಲಾ ನಾಯಕಿ ಅಮಿಷಾ ಶೆಟ್ಟಿ ಹಾಗೂ ಶಾಲಾ ಪ್ರಿನ್ಸಿಪಾಲ್ ಶ್ರೀಲತಾ ರಾವ್ ಉಪಸ್ಥಿತರಿದ್ದರು.
ಅಮಿಷಾ ಶೆಟ್ಟಿ ಸ್ವಾಗತಿಸಿ ನಹುಷ್ ಎಂ ಹೆಗ್ಡೆ ವಂದಿಸಿದರು. ಧನುಷ್ ಆರ್ ಹೆಗ್ಡೆ, ಅಬ್ದುಲ್ ಶದೀದ್ ಹೆಜಮಾಡಿ ಮತ್ತು ನೀಲನ್ ಡಿಸೋಜಾ ರವರು ಕಾರ್ಯಕ್ರಮ ನಿರೂಪಿಸಿದರು.

Kinnigoli-03121504 Kinnigoli-03121505

Comments

comments

Comments are closed.

Read previous post:
Kinnigoli-03121503
ಎನ್.ಎಸ್.ಎಸ್ 15ನೇ ವರ್ಷದ ವಾರ್ಷಿಕ ಶಿಬಿರ

ಕಿನ್ನಿಗೋಳಿ: ವಿದ್ಯಾರ್ಥಿಗಳು ಎನ್.ಎಸ್.ಎಸ್. ವಿಶೇಷ ಶಿಬಿರದಲ್ಲಿ ಭಾಗವಹಿಸುವ ಮೂಲಕ ಸಮಾಜವನ್ನು ಅರಿಯಲು ಮತ್ತು ಜನರ ಮಧ್ಯೆ ಬೆರೆತು ಗ್ರಾಮಾಂತರ ಜೀವನ ಪದ್ದತಿಯನ್ನು ತಿಳಿದುಕೊಳ್ಳಲು ಸಾಧ್ಯ ಎಂದು ನಿಟ್ಟೆ ಇಂಜಿನಿಯರಿಂಗ್...

Close