“ಪಿಲಿಬೈಲ್ ಯಮುನಕ್ಕ” ತುಳು ಚಿತ್ರ ಮುಹೂರ್ತ

ಕಟೀಲು: ತುಳು ಭಾಷೆಯನ್ನು ವಿಶ್ವದಲ್ಲಿ ಪಸರಿಸಲು ತುಳು ಸಿನಿಮಾ ಉತ್ತಮ ವೇದಿಕೆ ಆಗಿದ್ದು ತುಳು ಭಾಷಿಗರು ಮತ್ತು ಸಿನಿಮಾಭಿಮಾನಿಗಳು ಪ್ರೋತ್ಸಾಹಿಸಿ ತುಳು ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶುಕ್ರವಾರ ಲಕುಮಿ ಸಿನಿ ಕ್ರಿಯೇಶನ್ ಹಾಗೂ ಶ್ರೀ ದುರ್ಗಾ ಎಂಟರ್‌ಟೈನ್‌ಮೆಂಟ್‌ನ ಪಿಲಿಬೈಲ್ ಯಮುನಕ್ಕ ತುಳು ವಿಭಿನ್ನ ರೀತಿಯ ಸಿನಿಮಾದ ಮುಹೂರ್ತದಲ್ಲಿ ಶುಭಾಶಂಸನೆಗೈದು ಮಾತನಾಡಿದರು.
ಪಿಲಿಬೈಲ್ ಯಮುನಕ್ಕ ತುಳು ಸಿನಿಮಾದ ಆರಂಭ ಫಲಕವನ್ನು ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಚಾಲನೆ ನೀಡಿದರು. ಮಂಗಳೂರು ನಗರಪಾಲಿಕೆ ಕಾರ್ಪೋರೇಟರ್ ತಿಲಕ್‌ರಾಜ್ ಕಾಟಿಪಳ್ಳ ಕ್ಯಾಮರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ತಂತ್ರಿ, ಲಕುಮಿ ತಂಡದ ಸಂಘಟಕ ಹಾಗೂ ಎಕ್ಕಸಕ್ಕ ಚಿತ್ರದ ನಿರ್ಮಾಪಕ ಕಿಶೋರ್ ಡಿ. ಶೆಟ್ಟಿ, ಚಿತ್ರದ ನಿರ್ಮಾಪಕ ರೋಹನ್ ಶೆಟ್ಟಿ, ಸಹ ನಿರ್ಮಾಪಕ ಹರೀಶ್ ರಾವ್, ನಿರ್ದೇಶಕ ಸೂರಜ್ ಶೆಟ್ಟಿ, ಮೈಮ್ ರಾಮದಾಸ್, ರಾಜೇಶ್ ಡಿ. ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸತೀಶ್ ಆಚಾರ್ಯ, ನೀಲಯ್ಯ ಕೋಟ್ಯಾನ್ ಕಟೀಲು, ಪದ್ಮನಾಭ ಶೆಟ್ಟಿ, ನವೀನ್ ಶೆಟ್ಟಿ, ಸಂದೇಶ್ ಆರ್. ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸೂರಜ್ ಶೆಟ್ಟಿ ಎಕ್ಕಸಕ್ಕ ಯಶಸ್ಸಿನ ಪ್ರೇರಣೆಯಿಂದ ಪಿಲಿಬೈಲ್ ಯಮುನಕ್ಕ ಚಿತ್ರದ ನಿರ್ದೇಶನಕ್ಕೆ ಅವಕಾಶ ಸಿಕ್ಕಿದೆ. ಯಮುನಕ್ಕನ ಪಾತ್ರ ಕಾಲ್ಪನಿಕ ಕಥಾನಕದ ಮೂಲಕ ಸಮಾಜದಲ್ಲಿ ಮಹಿಳೆಯರು ಹೆಮ್ಮೆ ಪಡುವ ಸಾರದೊಂದಿಗೆ ಹಾಸ್ಯ, ಪ್ರಣಯ ಸೇರಿ ನವರಸದ ಭಾವನೆಗಳನ್ನು ಚಿತ್ರದಲ್ಲಿರುವಂತೆ ಕಥೆ, ಚಿತ್ರ ಕಥೆ ಸಂಭಾಷಣೆಯನ್ನು ರೂಪಿಸಲಾಗಿದೆ. ಕನ್ನಡ ಚಿತ್ರರಂಗದ ಅನುಭವವನ್ನು ತುಳು ಭಾಷೆಗೆ ನೀಡುವ ಅಚಲ ವಿಶ್ವಾಸದಿಂದ ಚೊಚ್ಚಲ ಪ್ರಯತ್ನ ಇದು. ಎಂದರು.

ಚಿತ್ರದ ನಿರ್ಮಾಪಕ ರೋಹನ್ ಶೆಟ್ಟಿ ಮಾತನಾಡಿ ಸೀಮಿತ ಮಾರುಕಟ್ಟೆಯುಳ್ಳ ತುಳು ಚಿತ್ರರಂಗಕ್ಕೆ ಪಿಲಿಬೈಲ್ ಯಮುನಕ್ಕೆ ಒಂದು ಸಿನಿಮಾ ಆಗಿ ಮೂಡಲಿದ್ದು ಉತ್ತಮ ಸಿನಿಮಾಗಳನ್ನು ತುಳು ಅಭಿಮಾನಿಗಳು ಸ್ವೀಕರಿಸಲಿದ್ದಾರೆ. 30 ದಿನದ ಒಂದೇ ಶೆಡ್ಯೂಲ್‌ನಲ್ಲಿ ಕರಾವಳಿ ಭಾಗದಲ್ಲಿಯೇ ಚಿತ್ರೀಕರಣ ನಡೆಸುವ ಇರಾದೆ ಇದೆ. ಅನುಭವಿ ತಂತ್ರಜ್ಞರ ಹಾಗೂ ಹೊಸತನದ ಕಲಾವಿದರಿಗೆ ಅವಕಾಶ ನೀಡಲಿದ್ದು ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದರು.
ಸಹ ನಿರ್ಮಾಪಕರಾಗಿ ಉತ್ಸಾಹಿ ಯುವಕ ಹರೀಶ್ ರಾವ್ ಮತ್ತು ಸಂದೇಶ್ ಆರ್. ಬಂಗೇರ ಇದ್ದಾರೆ. ಮುಂಬಯಿಯಲ್ಲಿ ಆಲ್ಬಂ ಸಂಗೀತದಲ್ಲಿ ಹೆಸರಾಗಿರುವ ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ನೀಡಲಿದ್ದಾರೆ. ಗೀತಾ ಸಾಹಿತ್ಯ ಮಯೂರ್ ಶೆಟ್ಟಿ ನೀಡಿದ್ದಾರೆ. ಛಾಯಾಗ್ರಹಣವನ್ನು ಅನುಭವಿ ಕೀರ್ತನ್ ಪೂಜಾರಿ ಬೆಂಗಳೂರು, ಸಂಕಲನ ಕೆ. ಲಿಂಗರಾಜು ನಿರ್ವಹಿಸಲಿದ್ದಾರೆ.
ಯಮುನಕ್ಕ ಪಾತ್ರಧಾರಿಯಾಗಿ ಪ್ರಖ್ಯಾತ ನಟಿಯೋರ್ವರು ಅಭಿನಯಿಸಲಿದ್ದಾರೆ. ನಾಯಕರಾಗಿ ನಾಗರಾಜ್ ಅಂಬರ್, ನಾಯಕಿಯಾಗಿ ಸೋನಾಲಿ ಮೊಂತೇರೋ, ನವೀನ್ ಡಿ. ಪಡೀಲ್, ಭೊಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸತೀಶ್ ಬಂದಲೆ, ದೀಪಕ್ ರೈ, ಉಮೇಶ್ ಮಿಜಾರು, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಉದಯ ಶೆಟ್ಟಿ ಇನ್ನಾ, ರೂಪ ವರ್ಕಾಡಿ, ನಮಿತಾ ಮತ್ತಿತರರು ಅಭಿನಯಿಸಲಿದ್ದಾರೆ.
ಶುಕ್ರವಾರ ಕಟೀಲು, ಅಜಾರು, ನಿಡ್ಡೋಡಿ, ಮುಚ್ಚೂರಿನಲ್ಲಿ ಪರಿಸರದಲ್ಲಿ ಚಿತ್ರೀಕರಣ ನಡೆಯಿತು.

Kateel-04121504 Kateel-04121505 Kateel-04121506 Kateel-04121507 Kateel-04121508 Kateel-04121509

Comments

comments

Comments are closed.

Read previous post:
Mulki-04121503
ಶ್ರೀ ಜಾರಂದಾಯ ದೈವಸ್ಥಾನ ತಂಬಿಲ ಸೇವೆ

ಮೂಲ್ಕಿ: ಮೂಲ್ಕಿಯ ಕೊಳಚಿಕಂಬಳದ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ತಂಬಿಲ ಸೇವೆ ಸಂದರ್ಭದಲ್ಲಿ ಶ್ರೀ ಜಾರಂದಾಯ ಹಾಗೂ ಧೂಮಾವತಿ ದೈವಗಳ ದರ್ಶನ ಸೇವೆ ನಡೆಯಿತು.

Close