ಸಿ.ಎಸ್.ಐ ಸಮೂಹ ವಿದ್ಯಾ ಸಂಸ್ಥೆ ಕ್ರೀಡೋತ್ಸವ

ಮೂಲ್ಕಿ: ವಿದ್ಯಾರ್ಥಿಗಳು ಗೆಲುವಿಗಾಗಿ ಏಕಾಗ್ರತೆಯಿಂದ ಶ್ರಮಿಸುವುದರೊಂದಿಗೆ ಸೋಲು ಗೆಲುವುಗಳನ್ನು ಕ್ರೀಡಾ ಸ್ಪೂರ್ತಿಯಿಂದ ಸಮಾನವಾಗಿ ಸ್ವೀಕರಿಸಬೇಕು ಎಂದು ಮೂಲ್ಕಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ವಾಣಿ ಆಳ್ವಾ ರವರು ಹೇಳಿದರು.
ಮೂಲ್ಕಿ ಕಾರ್ನಾಡು ಗಾಂಧೀ ಮೈದಾನದಲ್ಲಿ ನಡೆದ ಸಿ.ಎಸ್.ಐ ಸಮೂಹ ವಿದ್ಯಾ ಸಂಸ್ಥೆಗಳ ವಾರ್ಷಿಕ ಕ್ರೀಡೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಲ್ಕಿ ಪಟ್ಟಣ ಪಂಚಾಯತಿ ಸದಸ್ಯ ಬಿ.ಎಂ.ಆಸೀಪ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಗೆ ಸಮನಾಗಿ ಕ್ರೀಡೆಯಲ್ಲಿಯೂ ಸಾಧಕರಾದರೆ ಉನ್ನತ ವಿದ್ಯಾಬ್ಯಾಸಕ್ಕೆ ಸರ್ಕಾರದ ವತಿಯಿಂದ ಸಹಾಯ ಸಹಕಾರ ಪಡೆಯಲು ಸಾಧ್ಯವಾಗಿ ಜೀವನದಲ್ಲಿ ಉನ್ನತಿಗಳಿಸಬಹುದು ವಿದ್ಯಾರ್ಥಿಗಳು ಈ ಬಗ್ಗೆ ಗಮನವಿರಿಸಿಕೊಂಡು ಶಾಲಾ ದಿನಗಳಲ್ಲಿ ಶೈಕ್ಷಣಿಕ ಹಾಗೂ ಕ್ರೀಡೆಗಾಗಿ ವಿನಿಯೋಗಿಸಿ ಉತ್ತಮ ಸಾಧಕರಾಗಿ ಮೂಡಿಬರಬೇಕು ಎಂದರು.
ಕ್ರೀಡಾ ಜ್ಯೋತಿಯನ್ನು ಶಾಲೆಯ ವಿದ್ಯಾರ್ಥಿನಿ ಕರಾಟೆಯ ರಾಷ್ಟ್ರೀಯ ಚಾಂಪಿಯನ್ ಶ್ರಾವ್ಯಾ ಪ್ರತಿಭಾನ್ವಿತ ಕ್ರೀಡಾ ಪಟುಗಳೊಂದಿಗೆ ಮುನ್ನಡೆಸಿದರು ಉದ್ಯಮಿ ನೂತನ್ ಕೆ, ಶೆಟ್ಟಿ ಕ್ರೀಡಾ ಜ್ಯೋತಿ ಉದ್ಘಾಟಿಸಿದರು.
ಮಂಗಳೂರು ಉತ್ತರ ವಲಯ ಶಿಕ್ಷಣ ಸಂಯೋಜಕ ರಘುನಾಥ್,ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ರೆ,ಸಂತೋಷ್ ಕುಮಾರ್,ಸಂಚಾಲಕ ರಂಜನ್ ಜತ್ತನ್ನಾ,ಸಿಎಸ್‌ಐ ಶಾಲೆಯ ಮುಖ್ಯ ಶಿಕ್ಷಕ ನೀರಜ್ ಪುನೀತ್ ಮತ್ತು ಯುಬಿಎಂಸಿ ಶಾಲೆಯ ಮುಖ್ಯ ಶಿಕ್ಷಕಿ ಗ್ಲಾಡಿಸ್ ಸುಕುಮಾರಿ ಉಪಸ್ಥಿತರಿದ್ದರು.
ನೀರಜ್ ಪುನೀತ್ ಸ್ವಾಗತಿಸಿದರು,ಶಿಕ್ಷಕಿಯರಾದ ಝೀಟಾ ಮೆಂಡೋನ್ಸಾ ಮತ್ತು ಐರಿನ್ ಕ್ರಿಸ್ತಬೆಲ್ ನಿರೂಪಿಸಿದರು. ಗ್ಲಾಡಿಸ್ ಸುಕುಮಾರಿ ವಂದಿಸಿದರು.

Bhagyavan Sanil 

Mulki-04121502

Comments

comments

Comments are closed.

Read previous post:
Mulki01121504
ಉತ್ತಮ ಗುಣ ಮಟ್ಟದ ಮಧ್ಯಾಹ್ನದ ಊಟ

ಮೂಲ್ಕಿ: ಆಧುನಿಕ ಯುಗದ ಧಾವಂತದಲ್ಲಿ ಬೆಳೆಯುವ ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಮಧ್ಯಾಹ್ನದ ಊಟದ ವ್ಯವಸ್ಥೆ ಇಂದಿನ ಶೆಕ್ಷಣಿಕ ಮೂಲ ಸೌಕರ್ಯಗಳಲ್ಲಿ ಒಂದಾಗಿದೆ ಎಂದು ಮೂಲ್ಕಿ ಸೀಮೆ...

Close