ಉತ್ತಮ ಗುಣ ಮಟ್ಟದ ಮಧ್ಯಾಹ್ನದ ಊಟ

ಮೂಲ್ಕಿ: ಆಧುನಿಕ ಯುಗದ ಧಾವಂತದಲ್ಲಿ ಬೆಳೆಯುವ ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಮಧ್ಯಾಹ್ನದ ಊಟದ ವ್ಯವಸ್ಥೆ ಇಂದಿನ ಶೆಕ್ಷಣಿಕ ಮೂಲ ಸೌಕರ್ಯಗಳಲ್ಲಿ ಒಂದಾಗಿದೆ ಎಂದು ಮೂಲ್ಕಿ ಸೀಮೆ  ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು.
ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅರ್ಹ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಬಿಸಿಯೂಟ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ಮಸ್ಕತ್ ಮಿಲಿಟರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬೋಳ ರಾಜೇಂದ್ರ ಕಾಮತ್‌ ಅವರು ಮಧ್ಯಾಹ್ನ ಊಟದ ಯೋಜನೆಗಾಗಿ ರೂ50 ಸಾವಿರ ನೀಡಿರುವ ಬಗ್ಗೆ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಡಾ.ಬೋಳ ರಾಜೇಂದ್ರ ಕಾಮತ್‌ರವರು ಯೋಜನೆ ಉದ್ಘಾಟಿಸಿದರು. ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಸಿದ ಕಾಲೇಜು ಪ್ರಾಂಶುಪಾಲ ಪ್ರೊ.ವಿಷ್ಣುಮೂರ್ತಿ ಮಾತನಾಡಿ, ಬಹಳಷ್ಟು ಮಕ್ಕಳು ಮದ್ಯಾಹ್ನದ ಊಟತರದೆ ಉಪವಾಸ ಅಥವಾ ಮನೆಗೆ ಹೋಗುವುದರಿಂದ ಪಾಠ ಪ್ರವಚನದಲ್ಲಿ ಬಹಳಷ್ಟು ಆಡ್ಡಿ ಆಗುತ್ತಿತ್ತು ಇದೀಗ ಸಧ್ಯ 50 ವಿದ್ಯಾರ್ಥಿಗಳನ್ನು ಗುರುತಿಸಿ ಮಧ್ಯಾಹ್ನದ ಊಟ ನೀಡಲಾಗುತ್ತಿದೆ ಇನ್ನೂ ಹೆಚ್ಚಿನ ದಾನಿಗಳು ಸಹಕರಿಸಿದಲ್ಲಿ ಯೋಜನೆಯನ್ನು ವಿಸ್ತರಿಸಲಾಗುವುದು ಎಂದರು.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬೋಳ ಸುರೇಂದ್ರ ಕಾಮತ್,ಸದಸ್ಯ ಡಾ.ಎಂ.ಎ.ಆರ್.ಕುಡ್ವಾ, ಕಾಲೇಜು ಪ್ರಾಂಶುಪಾಲ ಪ್ರೊ.ವಿಷ್ಣುಮೂರ್ತಿಉಪಸ್ಥಿತರಿದ್ದರು.ಉಪಸ್ಯಾಸಕ ರಮಾನಂದ,ಕೆ, ನಿರೂಪಿಸಿದರು. ಸುಮನಾ ಗಾಂವ್ಕರ್ ವಂದಿಸಿದರು.

Mulki01121504

Comments

comments

Comments are closed.

Read previous post:
Mulki-04121501
ಪ್ರಕೃತಿ ಎಸ್ ಡಾಕ್ಟರೇಟ್ ಪದವಿ

ಮೂಲ್ಕಿ: ಸುರತ್ಕಲ್ ಎನ್‌ಐಟಿಕೆಯ ಡಿಪಾರ್ಟ್‌ಮೆಂಟ್ ಆಫ್ ಮೆಟಲರ್ಜಿಕಲ್ ಆಂಡ್ ಮೆಟೀಯಲ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಪ್ರಕೃತಿ ಎಸ್ ರವರು ಪ್ರಿಕ್ಷನ್ ಸ್ಟೇರ್ ಪ್ರೊಸೆಸಿಂಗ್ ಆಫ್ ಅಲುಮೀನಿಯಂ ವಿದ್...

Close