ನಿಶಿಕಾಂತ ಸನಿಲ್ ಗೆ ಜೀಪ್ ಡಿಕ್ಕಿ ಮೃತ್ಯು

ಮೂಲ್ಕಿ: ಕಾರ್ನಾಡು ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ಪಾದಾಚಾರಿ ಯುವಕ ನಿಗೆ ಜೀಪ್ ಡಿಕ್ಕಿಯಾಗಿ ಆಸ್ಪತ್ರೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ.
ಕಾರ್ನಾಡು ಹರಿಹರ ಕ್ಷೇತ್ರದ ಹರಿ ದೇವಾಲಯ ಸಮೀಪದ ನಿವಾಸಿ ನಿಶಿಕಾಂತ ಸನಿಲ್(25) ಎಂದಿನಂತೆ ಗ್ಯಾರೆಜ್ ಕೆಲಸಕ್ಕಾಗಿ ಮನೆಯಿಂದ ಹೊರಟು ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ಸಂದರ್ಭ ಮಂಗಳೂರು ಕಡೆಯಿಂದ ಬಹಳ ವೇಗವಾಗಿ ಬಂದ ಬೊಲೆರೋ ಜೀಪ್ ಡಿಕ್ಕಿಯಾದ ಪರಿಣಾಮ ತೀವೃ ಗಾಯಗೊಂಡ ನಿಶಿಕಾಂತನನ್ನು ತಕ್ಷಣ ಆಸ್ಪತ್ರೆ ಸಾಗಿಸುತ್ತಿರುವ ಸಂದರ್ಭ ದಾರಿ ಮಧ್ಯ ಮೃತಪಟ್ಟಿದ್ದಾನೆ. ಮಂಗಳೂರು ಉತ್ತರ ವಲಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರದೇಶದಲ್ಲಿ ವಾಹನಗಳು ಶರವೇಗದಲ್ಲಿ ಸಂಚರಿಸುತ್ತಿದ್ದು ಬ್ಯಾರೀಕೇಡ್ ಹಾಕಿ ವೇಗ ನಿಯಂತ್ರಿಸಬೇಕು ಎಂದು ಪೋಲೀಸರಿಗೆ ತಿಳಿಸಿದ್ದರೂ ಗಣನೆಗೆ ತೆಗೆದುಕೊಂಡಿಲ್ಲ ಸೂಕ್ತ ಸಮಯದಲ್ಲಿ ಸ್ಪಂದಿಸಿದ್ದರೆ ಜೀವ ಉಳಿಯುತ್ತಿತ್ತು ಎಂದು ಮೂಲ್ಕಿ ನಗರ ಪಂಚಾಯತಿ ಸದಸ್ಯ ಹರ್ಷರಾಜ ಶೆಟ್ಟಿ ಜಿಎಂ ಆರೋಪಿಸಿದ್ದಾರೆ.

Bhagyavan Sanil

Mulki-05121501

Comments

comments

Comments are closed.

Read previous post:
Kateel-04121509
“ಪಿಲಿಬೈಲ್ ಯಮುನಕ್ಕ” ತುಳು ಚಿತ್ರ ಮುಹೂರ್ತ

ಕಟೀಲು: ತುಳು ಭಾಷೆಯನ್ನು ವಿಶ್ವದಲ್ಲಿ ಪಸರಿಸಲು ತುಳು ಸಿನಿಮಾ ಉತ್ತಮ ವೇದಿಕೆ ಆಗಿದ್ದು ತುಳು ಭಾಷಿಗರು ಮತ್ತು ಸಿನಿಮಾಭಿಮಾನಿಗಳು ಪ್ರೋತ್ಸಾಹಿಸಿ ತುಳು ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು...

Close