ಗಿಡಿಗೆರೆ ರಾಮಕ್ಕ ಅವರಿಗೆ ಪೌರ ಸಮ್ಮಾನ

ಕಿನ್ನಿಗೋಳಿ: ಗಿಡಿಗೆರೆ ರಾಮಕ್ಕ ಮಾತಿನಲ್ಲಿಯೇ ತುಳು ಕಾವ್ಯ ಕಟ್ಟುವ ಕವಿ, ತುಳು ಪಾಡ್ದನಗಳನ್ನು ನಿರರ್ಗಳವಾಗಿ ಪೋಣಿಸಿ ಹೆಣೆಯಬಲ್ಲ ಜಾಣೆ. ಇಂತಹ ಮೌಕಿಕ ಸಾಹಿತ್ಯ ಮುಂದಿನ ಪೀಳಿಗೆಗೆ ತಲುಪಿಸಲು ಸರಕಾರ ಕೂಡಾ ಉತ್ತೇಜನ ನೀಡಲು ಸಹಕರಿಸಬೇಕಾಗಿದೆ ಎಂದು ಹಂಪಿ ಕನ್ನಡ ವಿ. ವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಎ. ವಿ. ನಾವಡ ಹೇಳಿದರು.
ಕಟೀಲು ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನದ ಆವರಣದಲ್ಲಿ ರಾಜೋತ್ಸವ ಪ್ರಶಸ್ತಿ ಪುರಸ್ಕೃತೆ ಗಿಡಿಗೆರೆ ರಾಮಕ್ಕ ಅವರ ಪೌರ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಳು ಸಾಹಿತ್ಯಗಳು ದಾಖಾಲಿಕರಣಗೊಳ್ಳುತ್ತದೆ. ಆದರೆ ಮೌಕಿಕ ಸಾಹಿತ್ಯಗಳ ಮೂಲೆ ಗುಂಪಾಗುತ್ತಿರುವುದನ್ನು ನಿಲ್ಲಿಸಲು ದಾಖಲೀಕರಣಗೊಳ್ಳಲು ಸಾಹಿತ್ಯಾಭಿಮಾನಿಗಳು ಪ್ರಯತ್ನಿಸಬೇಕು ಎಂದು ವಿಷಾದ ವ್ಯಕ್ತಪಡಿಸಿದರು.
ಯುವಜನ ಕ್ರೀಡಾಸಚಿವ ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ರಾಮಕ್ಕ ಅವರನ್ನು ಸಮ್ಮಾನಿಸಲಾಯಿತು. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಕಟೀಲು ದೇವಳ ಅರ್ಚಕ ವಾಸುದೇವ ಆಸ್ರಣ್ಣ , ಕಟೀಲು ಚರ್ಚ್ ಧರ್ಮಗುರು ಫಾ. ರೋನಾಲ್ದ್ ಕುಟಿನ್ಹೊ, ಕಟೀಲು ಗ್ರಾ. ಪಂ. ಅಧ್ಯಕ್ಷೆ ಗೀತಾ ಪೂಜಾರಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ , ಜಿ. ಪಂ. ಸದಸ್ಯ ಈಶ್ವರ್ ಕಟೀಲು, ಸಾಹಿತಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ, ಮುಗೇರ ಸಂಘದ ರಾಜ್ಯಾಧ್ಯಕ್ಷ ಸುಂದರ ಮೇರ, ಪತ್ರಕರ್ತ ಶರತ್ ಶೆಟ್ಟಿ , ಉದ್ಯಮಿ ಧನಂಜಯ ಶೆಟ್ಟಿಗಾರ್, ಡೋಲ್ಪಿ ಸಂತುಮಯೋರ್, ದ.ಸಂ.ಸ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸತೀಶ್ ಕೆ, ಜಗದೀಶ ಕೆದೂರು, ಡಾ. ಸೋಂದಾ ಭಾಸ್ಕರ ಭಟ್, ಲೋಕಯ್ಯ ಸಾಲ್ಯಾನ್, ಗ್ರಾ. ಪಂ. ಸದಸ್ಯರಾದ ರಮಾನಂದ ಪೂಜಾರಿ, ಪುಷ್ಪ, ರೋಟರ‍್ಯಾಕ್ಟ್ ಅಧ್ಯಕ್ಷ ಜಾಕ್ಸನ್ ಪಕ್ಷಿಕೆರೆ, ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನದ ಗುರಿಕಾರ ತಿಮ್ಮಪ್ಪ ಮೇಸ್ತ್ರಿ, ಅಧ್ಯಕ್ಷ ಗಿರಿಯಪ್ಪ, ಅರ್ಚಕ ಸದಾಶಿವ, ನಾರಾಯಣ,ತಂಗಡಿ ಸೇವಾ ಸಮಿತಿ ಅಧ್ಯಕ್ಷೆ ಕಮಲ, ದುರ್ಗಾಂಬಿಕಾ ಯುವತಿ ಮಂಡಲ ಅಧ್ಯಕ್ಷೆ ಮಿನಾಕ್ಷಿ , ದುರ್ಗಾಂಬಿಕ ಯುವಕ ಮಂಡಲ ಅಧ್ಯಕ್ಷ ಕೃಷ್ಣ ಬಲ್ಲಣ, ಅಭಿನಂದನಾ ಸಮಿತಿ ಅಧ್ಯಕ್ಷ ಸುಕುಮಾರ್, ಪದ್ಮಲತಾ ಮತ್ತಿತರರು ಉಪಸ್ಥಿತರಿದ್ದರು. ಸತೀಶ್ ಸ್ವಾಗತಿಸಿದರು. ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು. Kinnigoli-06121503

Comments

comments

Comments are closed.

Read previous post:
Kinnigoli-06121502
ಕಿನ್ನಿಗೋಳಿ : ಉಚಿತ ನೇತ್ರ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ: ಕಣ್ಣಿನ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು, ದೃಷ್ಟಿ ದೋಷದ ನಿವಾರಣೆಗೆ ಮುಂಜಾಗ್ರತೆ ವಹಿಸಿ ಕಾಲ ಕಾಲಕ್ಕೆ ತಪಾಸಣೆ ನಡೆಸಬೇಕು. ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ವಿನ್ಸೆಂಟ್ ಪ್ರಾನ್ಸಿಸ್...

Close