ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆ

ಕಿನ್ನಿಗೋಳಿ: ಕಿನ್ನಿಗೋಳಿ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಸಂಘದ 2 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆ ಶನಿವಾರ ಕಿನ್ನಿಗೋಳಿ ರಾಜರತ್ನಪುರ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಸಮೀಪ ನಡೆಯಿತು. ಕಿನ್ನಿಗೋಳಿ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಸಂಘದ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆಗೆ ಚಾಲನೆ ನೀಡಿದರು. ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಮೊಕ್ತೇಸರ ಸಂತೋಷ್‌ಕುಮಾರ್ ಹೆಗ್ಡೆ, ಜಿ. ಪಂ. ಸದಸ್ಯ ಈಶ್ವರ್ ಕಟೀಲು, ಮಾಜಿ ತಾ. ಪಂ. ಸದಸ್ಯ ತಿಮ್ಮಪ್ಪ ಕೋಟ್ಯಾನ್, ಕಿನ್ನಿಗೋಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಸಂಘದ ಕಾನೂನು ಸಲಹೆಗಾರ ಶಶಿಧರ ಆಡ್ಕತ್ತಾಯ , ಅರಸು ಕುಂಜಿರಾಯ ದೈವಸ್ಥಾನ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮೆನ್ನಬೆಟ್ಟು ಗ್ರಾ. ಪಂ. ಉಪಾಧ್ಯಕ್ಷ ಮೊರ್ಗನ್ ವಿಲಿಯಂ, ಕಟೀಲು ಗ್ರಾ. ಪಂ. ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ಲೋಕು ಕೋಡಿಕೆರೆ, ಮನೋಜ್ ಕೋಡಿಕೆರೆ, ಸಂತೋಷ್ ಬಲ್ಲಾಳ್ ಬಾಗ್, ಉದಯ ಪೂಜಾರಿ ಬಲ್ಲಾಳ್‌ಬಾಗ್, ಪ್ರಮೋದ್ ಬಲ್ಲಾಳ್‌ಬಾಗ್, ಕಿಲ್ಪಾಡಿ ಗ್ರಾ. ಪಂ. ಸದಸ್ಯ ನಾಗರಾಜ ಕುಲಾಲ್, ಶ್ರೀ ಕಟೀಲು ವಿವಿಧೋಶ ಬ್ಯಾಂಕ್‌ನ ಉಪಾಧ್ಯಕ್ಷ ಸ್ಟೇನಿ ಪಿಂಟೊ, ಕೆಮ್ರಾಲ್ ಗ್ರಾ. ಪಂ. ಸದಸ್ಯ ಮಯ್ಯದ್ದಿ , ಸಂತೋಷ್ ಶೆಟ್ಟಿ, ಚಂದ್ರಹಾಸ್ ಅಂಚನ್, ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ, ಧನಂಜಯ ರೈ, ಮತ್ತಿತರರು ಉಪಸ್ಥಿತರಿದ್ದರು.

Kinnigoli-06121501

Comments

comments

Comments are closed.

Read previous post:
Mulki-05121501
ನಿಶಿಕಾಂತ ಸನಿಲ್ ಗೆ ಜೀಪ್ ಡಿಕ್ಕಿ ಮೃತ್ಯು

ಮೂಲ್ಕಿ: ಕಾರ್ನಾಡು ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ಪಾದಾಚಾರಿ ಯುವಕ ನಿಗೆ ಜೀಪ್ ಡಿಕ್ಕಿಯಾಗಿ ಆಸ್ಪತ್ರೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಕಾರ್ನಾಡು ಹರಿಹರ ಕ್ಷೇತ್ರದ...

Close