ಸುರಗಿರಿ ವೈದ್ಯಕೀಯ ಶಿಬಿರ

ಕಿನ್ನಿಗೋಳಿ: ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್ ಗಾಂಧಿನಗರ ಮಂಗಳೂರು, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸುರಗಿರಿ ಯುವಕ, ಮಹಿಳಾ ಮಂಡಲ , ಯುವತಿ ಮಂಡಲ, ಮಂಗಳೂರು ಕೆ. ಎಂ. ಸಿ ಆಸ್ಪತ್ರೆ, ಯೆನೆಪೋಯ ದಂತ ವೈದ್ಯಕೀಯ ಆಸ್ಪತ್ರೆ ಜಂಟೀ ಆಶ್ರಯದಲ್ಲಿ ವೈದ್ಯಕೀಯ ಶಿಬಿರ, ದಂತ ತಪಾಸಣೆ, ಹಾಗೂ ಚಿಕಿತ್ಸಾ ಶಿಬಿರ ಭಾನುವಾರ ಸುರಗಿರಿ ದೇವಳ ಸಭಾಂಗಣದಲ್ಲಿ ನಡೆಯಿತು. ದೇವಳದ ಅರ್ಚಕ ಅನಂತರಾಮ ರಾವ್ ಶಿಬಿರ ಉದ್ಘಾಟಿಸಿದರು. ಶ್ರೀ ಸತ್ಯಸಾಯಿ ಸೇವಾಸಮಿತಿಯ ವಿನಯ ಕುಮಾರ್ ಶೇಟ್, ಸುರೇಶ್ ಬೈಲೂರು, ದೇವಾನಂದ ರೈ, ಜಿ. ಪಂ. ಸದಸ್ಯ ಈಶ್ವರ್ ಕಟೀಲು, ಜಯರಾಮ ಆಚಾರ್ಯ, ಸುರಗಿರಿ ಯುವಕ ಮಂಡಲದ ಸಚಿನ್ ಶೆಟ್ಟಿ , ಮಹಿಳಾ ಮಂಡಲದ ನಿರ್ಮಲಾ ನಾಯಕ್, ದಿವಾಕರ ಶೆಟ್ಟಿ, ಡಾ. ಉಪಾ, ಡಾ. ನಿಶಾರ್, ಲವಿನಾ, ಭರತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-06121504

Comments

comments

Comments are closed.

Read previous post:
Kinnigoli-06121503
ಗಿಡಿಗೆರೆ ರಾಮಕ್ಕ ಅವರಿಗೆ ಪೌರ ಸಮ್ಮಾನ

ಕಿನ್ನಿಗೋಳಿ: ಗಿಡಿಗೆರೆ ರಾಮಕ್ಕ ಮಾತಿನಲ್ಲಿಯೇ ತುಳು ಕಾವ್ಯ ಕಟ್ಟುವ ಕವಿ, ತುಳು ಪಾಡ್ದನಗಳನ್ನು ನಿರರ್ಗಳವಾಗಿ ಪೋಣಿಸಿ ಹೆಣೆಯಬಲ್ಲ ಜಾಣೆ. ಇಂತಹ ಮೌಕಿಕ ಸಾಹಿತ್ಯ ಮುಂದಿನ ಪೀಳಿಗೆಗೆ ತಲುಪಿಸಲು ಸರಕಾರ...

Close