ಸೋಲನ್ನು ಗೆಲುವಿನ ಮೆಟ್ಟಿಲು ಎಂದು ತಿಳಿಯಬೇಕು

ಮೂಲ್ಕಿ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಸಮಾನವಾಗಿ ಕ್ರೀಡೆಯೂ ಅವಶ್ಯಕವಾಗಿದ್ದು ಮಕ್ಕಳು ಕ್ರೀಡಾ ಮನೋಭಾವನೆಯಿಂದ ಸೋಲನ್ನು ಗೆಲುವಿನ ಮೆಟ್ಟಿಲು ಎಂದು ತಿಳಿಯಬೇಕು ಎಂದು ನಿವೃತ್ತ ಸೇನಾನಿ ಮೂಲ್ಕಿ ಕೆನರಾ ಬ್ಯಾಂಕ್ ಹಿರಿಯ ಪ್ರಭಂದಕ ಜನಾರ್ಧನ ಭಕ್ತ ಹೇಳಿದರು.
ಮೂಲ್ಕಿ ವ್ಯಾಸ ಮಹರ್ಷಿ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪೂರಕವಾದ ಬೌದ್ಧಿಕ ಬೆಳವಣಿಗೆಗೆ ಕ್ರೀಡೆಯು ಬಹಳ ಸಹಕಾರಿಯಾಗಿದ್ದು ವಿದ್ಯಾರ್ಥಿಯ ಆರೋಗ್ಯ ರಕ್ಷಣೆಗೆ ಸಹಕಾರಿಯಾಗುತ್ತದೆ ಶೈಕ್ಷಣಿಕ ಉನ್ನತಿಗಳಿಸಿದ ಕ್ರೀಡಾ ಸಾಧಕ ವಿದ್ಯಾರ್ಥಿಗೆ ಭವಿಷ್ಯ ಜೀವನದಲ್ಲಿ ವಿಫುಲ ಅವಕಾಶಗಳಿವೆ ಎಂದರು.
ಕಾರ್ಯಕ್ರಮದ ಶಾಲೆಯ ಸಂಚಾಲಕ ಜಿ.ಜಿ.ಕಾಮತ್ ಮಾತನಾಡಿ, ಶೈಕ್ಷಣಿಕ ಒತ್ತಡದ ನಡುವೆ ಕ್ರೀಡೆಗಳಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳ ಭಾಗವಹಿಸುವಿಕೆ ಸಂತಸ ತಂದಿದೆ ವಿದ್ಯಾರ್ಥಿಗಳು ಉತ್ತಮ ಸಾಧಕರಾಗಿ ಮೂಡಿ ಬರಬೇಕು ಎಂದರು.
ಸಮಾರಂಭದ ಅದ್ಯಕ್ಷತೆಯನ್ನು ವ್ಯಾಸ ಮಹರ್ಷಿ ವಿದ್ಯಾ ಪೀಠದ ಅಧ್ಯಕ್ಷ ಕೆ.ನಾರಾಯಣ ಶೆಣೈ ವಹಿಸಿದ್ದರು.
ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಪ್ರೊ.ಯು.ನಾಗೇಶ್ ಶೆಣೈ ಶಾಲಾ ದ್ವಜಾರೋಹಣ ಗೈದರು, ಮೂಲ್ಕಿ ಕೆನರಾ ಬ್ಯಾಂಕ್ ಹಿರಿಯ ಪ್ರಭಂದಕ ಜನಾರ್ಧನ ಭಕ್ತ ವಿದ್ಯಾರ್ಥಿ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ ಕಾರ್ಯದರ್ಶಿ ಕೆ.ನರಸಿಂಹ ಪೈ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಆಡಳಿತ ಮಂಡಳಿ ಸದಸ್ಯ ಎಚ್.ರಾಮದಾಸ್ ಕಾಮತ್, ಮುಖ್ಯೋಪಾದ್ಯಾಯಿನಿ ಚಂದ್ರಿಕಾ ಭಂಡಾರಿ ಉಪಸ್ಥಿತರಿದ್ದರು.
ಚಂದ್ರಿಕಾ ಭಂಡಾರಿ ಸ್ವಾಗತಿಸಿದರು, ಶರಣಪ್ಪ ನಿರೂಪಿಸಿದರು ಜಯಲಕ್ಷ್ಮಿ ವಂದಿಸಿದರು.

Mulki-08121501

Comments

comments

Comments are closed.

Read previous post:
Kinnigoli-06121504
ಸುರಗಿರಿ ವೈದ್ಯಕೀಯ ಶಿಬಿರ

ಕಿನ್ನಿಗೋಳಿ: ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್ ಗಾಂಧಿನಗರ ಮಂಗಳೂರು, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸುರಗಿರಿ ಯುವಕ, ಮಹಿಳಾ ಮಂಡಲ , ಯುವತಿ ಮಂಡಲ, ಮಂಗಳೂರು...

Close