ಶಿಕ್ಷಣದಲ್ಲಿ ಕನ್ನಡ ಮಾದ್ಯಮಕ್ಕೆ ಮಹತ್ವ

ಮೂಲ್ಕಿ: ಜೀವನದಲ್ಲಿ ಶಿಸ್ತು ರೂಡಿಸಿಕೊಂಡು ಆಟೋಟಗಳ ಜತೆಗೆ ಶಿಕ್ಷಣಕ್ಕೂ ಮಹತ್ವ ನೀಡಿ ರಾಷ್ಟ್ರಕ್ಕೇ ಮಾದರಿಯಾಗಬೇಕು. ಶಿಕ್ಷಣದಲ್ಲಿ ಕನ್ನಡ ಮಾದ್ಯಮಕ್ಕೆ ಮಹತ್ವ ನೀಡುವುದರ ಜೊತೆಗೆ ಆಂಗ್ಲ ಬಾಷೆಯನ್ನು ಅರಗಿಸಿಕೊಳ್ಳಬೇಕು ಎಂದು ಮೂಲ್ಕಿ ಚರ್ಚ್‌ನ ಧರ್ಮಗುರು ರೆ.ಫಾ. ಕ್ಷೇವಿಯರ್ ಗೋಮ್ಸ್ ಹೇಳಿದರು. ಅವರು ಮೂಲ್ಕಿ ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಅತಿಥಿಗಳಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಮಾಜಸೇವಕಿ ವಂದನೀಯ ಭಗಿನಿ ಮಾರಿಯೋಲ ವಹಿಸಿದ್ದರು. ಅತಿಥಿಗಳಾಗಿ ಮಾತನಾಡಿದ ಉದ್ಯಮಿ ಅರವಿಂದ ಪೂಂಜಾ ಮಾತನಾಡಿ ಶಿಕ್ಷಣ ವ್ಯಾಪಾರೀಕರಣವಾಗುತ್ತಿದ್ದು ಕನ್ನಡ ಶಿಕ್ಷಣವನ್ನು ಉಳಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.ವೇದಿಕೆಯಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ವಲೇರಿಯನ್ ರೋಡ್ರಿಗಸ್, ಮೆಡಲಿನ್ ಸಂಸ್ಥೆಗಳ ಮೇಲ್ವಿಚ್ಛಾರಕಿ ವಂದನೀಯ ಭಗಿನಿ ನಂದಿತ,ಶಾಲಾ ಮುಖ್ಯೋಪಾದ್ಯಾಯಿನಿ ಗ್ರೇಸಿ ಮೋನಿಕ ಉಪಸ್ಥಿತರಿದ್ದರು.ಬಳಿಕ ಶಾಲಾ ಶೈಕ್ಷಣಿಕ ಚಟುವಟಿಕೆ ಹಾಗೂ ಕ್ರೀಡೆಯ ಸಾದಕರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವರ್ಣಮಯ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದವು.

Puneethakrishna

Mulki-09121503

Comments

comments

Comments are closed.

Read previous post:
Mulki-09121502
ಶ್ರೀ ವಿಠೋಭ ರುಕುಮಾಯಿ ಭಜನಾ ಮಂದಿರ

ಮೂಲ್ಕಿ: ಇಲ್ಲಿನ ಪಂಜಿನಡ್ಕ ಶ್ರೀ ವಿಠೋಭ ರುಕುಮಾಯಿ ಭಜನಾ ಮಂದಿರದಲ್ಲಿ ವರ್ಷಾವಧಿ ಭಜನಾ ಮಹೋತ್ಸವ ಹಾಗೂ ಮಂಗಲೋತ್ಸವ ವಿಜೃಂಭಣೆಯಿಂದ ನಡೆಯಿತು. Puneethakrishna

Close