ಜಿಲ್ಲಾ ಲಿಯೋ ಕ್ಲಬ್‌ಗಳ ಲಿಯೋ ದಿನಾಚರಣೆ

ಮೂಲ್ಕಿ: ಲಯನ್ಸ್ ಕ್ಲಬ್ ಇಂಟರ್‌ನ್ಯಾಶನಲ್ ಜಿಲ್ಲೆ 317 ಡಿ ಯ ಜಿಲ್ಲಾ ಲಿಯೋ ಕ್ಲಬ್‌ಗಳ ನೇತೃತ್ವದಲ್ಲಿ ಲಿಯೋ ದಿನಾಚರಣೆಯನ್ನು ಬಾಟಲ್ ತೋಟಗಾರಿಕೆ ತರಬೇತಿ ಕಾರ್ಯಾಗಾರವನ್ನು ಸೈಂಟ್ ಅಲೋಶಿಯಸ್ ಕಾಲೇಜಿನ ಸುಮಾರು 400 ಮಂದಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುವ ಮೂಲಕ ಆಚರಿಸಲಾಯಿತು.
ಸೈಂಟ್ ಆಗ್ನೇಸ್‌ನ 20 ಮಂದಿ ವಿದ್ಯಾರ್ಥಿಗಳು ಸೈಂಟ್ ಅಲೋಶಿಯಸ್ ವಿದ್ಯಾರ್ಥಿಗಳಿಗೆ ಬಾಟಲ್ ತೋಟಗಾರಿಕೆ ಪ್ರಾತ್ಯಕ್ಷಿತೆಯನ್ನು ನಡೆಸಿ ಕೊಟ್ಟರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ರಾಜ್ಯಪಾಲರಾದ ಲಯನ್ ಕವಿತಾ ಶಾಸ್ತ್ರಿಯವರು ನಡೆಸಿ ಕೊಟ್ಟು ವಿದ್ಯಾರ್ಥಿಗಳಿಗೆ ಗೋ ಗ್ರೀನ್ ನ ಪ್ರ್ರಾಮುಖ್ಯತೆಯನ್ನು ತಿಳಿಸಿದರು. ಸೈಂಟ್ ಅಲೋಷಿಯಸ್‌ನ ಪ್ರಿನ್ಸಿಪಾಲ್ ರೆ.ಫಾ. ಮೆಲ್ವಿನ್ ಮೆಂಡೋನ್ಸ ಮತ್ತು ಸೈಂಟ್ ಅಗ್ನೇಸ್ ಕಾಲೇಜಿನ ಪಿ.ಜಿ. ಸ್ಟಡೀಸ್‌ನ ಕೋ-ಅರ್ಡಿನೇಟರ್ ಸಿಸ್ಟರ್ ಮೇರಿ ಎವ್‌ಲಿನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಜಿಲ್ಲೆ 317ಡಿ ಯ ಜಿಲ್ಲಾಧ್ಯಕ್ಷ ಲಿಯೋ ವಿಮರ್ಶ್ ವಿ. ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವಾಣಿ ವಿ. ಆಳ್ವ, ಲಿಯೋ ಕೋಶಾಧಿಕಾರಿ ಸಂಜೀತ್ ರೈ, ಸೈಂಟ್ ಅಲೋಶಿಯಸ್ ಕಾಲೇಜಿನ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಪ್ರಮೀಳಾ ಸೈಂಟ್ ಅಗ್ನೇಸ್ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕಿ ಮತ್ತು ಶ್ರೀಮತಿ ಸೋನಿಯಾ ಕರ್ಕೇರ ಉಪಸ್ಥಿತರಿದ್ದರು. ಪ್ರಾಂತ್ಯಾಧ್ಯಕ್ಷೆ ಜ್ಯೋತಿ ಕಿರಣ್ ಉಪಸ್ಥಿತರಿದ್ದರು.

Mulki-10121502

Comments

comments

Comments are closed.

Read previous post:
Mulki-10121501
ಪುತ್ತುಬಾವ ಕಾರ್ನಾಡು ಆಯ್ಕೆ

ಮೂಲ್ಕಿ: ಕಾರ್ನಾಡು ರಿಕ್ಷಾ ಚಾಲಕರ ಮಾಲಕ ಸಂಘದ ಅಧ್ಯಕ್ಷರಾಗಿ ಪುತ್ತುಬಾವ ಕಾರ್ನಾಡು ಆಯ್ಕೆಯಾಗಿದ್ದಾರೆ. ಕಾರ್ನಾಡು ಯುಬಿಎಂಸಿ ಶಾಲೆಯ ಸಭಾಂಗಣದಲ್ಲಿ ಉಪೇಂದ್ರ ಆಚಾರ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಮಹಾ...

Close