94ಸಿ ಯನ್ನು 94ಸಿಸಿ ಯಾಗಿ ಪರಿವರ್ತನೆ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡೆಮೂಲ, ನಡುಗೋಡು ಮತ್ತು ಕಿಲೆಂಜೂರು ಗ್ರಾಮಗಳ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಬಗ್ಗೆ ಪಂಚಾಯಿತಿ ಆವರಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದರು.
ಅಕ್ರಮ ಸಕ್ರಮದ 94ಸಿ ಅರ್ಜಿಗಳನ್ನು ಸಲ್ಲಿಸಿದ 138 ಅಕ್ರಮ ಸಕ್ರಮ ನಿವೇಶನಗಳ ಸೂಕ್ತ ದಾಖಲೆಗಳ ಪರಿಶೀಲನೆಯನ್ನು ಮಾಡಿದ ಮುಲ್ಕಿಯ ವಿಶೇಷ ತಹಶೀಲ್ದಾರ್ ಎ.ಜಿ. ಖೇಣಿ ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಈಗಾಗಲೇ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದವರ ಬಗ್ಗೆ ಸ್ಥಳ ತನಿಖೆ ನಡೆಸಿ ಪ್ರಸ್ತುತ ನಿವಾಸಿಗಳಿಗೆ ನೂತನ ಕಾನೂನು ಬದ್ದ ಹಕ್ಕು ಪತ್ರಗಳನ್ನು ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಅಕ್ರಮ ಸಕ್ರಮದ ಕಾನೂನು ಪ್ರಸ್ತುತ ನಗರವಾಸಿಗಳಿಗೆ ಮಾತ್ರ ಸೀಮಿತವಾಗಿದ್ದು ಈದೀಗ ನಗರ ಪ್ರದೇಶದ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯ ಗ್ರಾಮಗಳಿಗೆ 94 ಸಿ ಕಾನೂನು ಅನ್ವಯವಾಗುವುದಿಲ್ಲ ಹಾಗಾಗಿ ಆ ಭಾಗದ ಗ್ರಾಮಗಳಿಗೆ  94ಸಿ ಅರ್ಜಿಗಳನ್ನು ಬದಲಾಯಿಸಿ, 94ಸಿಸಿ ಅರ್ಜಿಗಳಾಗಿ ಪರಿವರ್ತನೆ ಮಾಡಿ ವರದಿಯನ್ನು ತಹಶೀಲ್ದಾರ್ ಮೂಲಕ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು.
ಹಲವಾರು ವರ್ಷಗಳಿಂದ ಸರಕಾರಿ ನಿವೇಶನದಲ್ಲಿ ಮನೆ ಮಾಡಿಕೊಂಡು ಕುಳಿತಿರುವವರಿಗೆ ಈ ಸೌಲಭ್ಯ ಅನುಕೂಲ ಆಗಲಿದೆ. ಪಂಚಾಯಿತಿಗಳಿಗೆ ಮನೆ ನಂಬ್ರ, ತೆರಿಗೆ, ನೀರಿನ ಸೌಕರ್ಯ ನೀಡಲು ಅಲ್ಲದೆ ಇನ್ನಿತರ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಸುಲಭ ಸಾಧ್ಯವಾಗುತ್ತದೆ.
ಈ ಸಂದರ್ಭ ಮೂಲ್ಕಿಯ ವಿಶೇಷ ತಹಶೀಲ್ದಾರ್ ಎ.ಜಿ.ಖೇಣಿ, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್, ಕಟೀಲು ಗ್ರಾಮಕರಣಿಕ ಪ್ರದೀಪ್ ಶೆಣೈ, ಪಿಡಿಒ ಪ್ರಕಾಶ್ ಬಿ., ಕಾರ್ಯದರ್ಶಿ ನಾಗೇಶ್ ಸುವರ್ಣ ಉಪಸ್ಥಿತರಿದ್ದರು.

Kateel-11121501

Comments

comments

Comments are closed.

Read previous post:
Kinnigoli
View of Namma Kinnigoli

Aerial view of Namma Kinnigoli 2005 & 2015 Pic By: Rudolf Dsouza

Close