ಜೋಡುಕರೆ ಅರಸು ಕಂಬಳ ಡಿಸೆಂಬರ್ 20

Kambala_1

ಮೂಲ್ಕಿ: ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಆಶ್ರಯದಲ್ಲಿ ಡಿಸೆಂಬರ್ 20 ರಂದು ಬೆಳಿಗ್ಗೆ ಮೂಲ್ಕಿ ಸೀಮೆ ಜೋಡುಕರೆ ಅರಸು ಕಂಬಳವು ಪಡಪಣಂಬೂರಿನ ಅರಸು ಕಂಬಳ ಗದ್ದೆಯಲ್ಲಿ ಜರಗಲಿದೆ.
ಬೆಳಿಗ್ಗೆ ಕಂಬಳವನ್ನು ಐಕಳ ಬಾವಾ ಗುಣಪಾಲ ಆರ್ ಶೆಟ್ಟಿ ಉದ್ಘಾಟಿಸಲಿದ್ದಾರೆ.ಸಂಜೆ ಜರಗಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಪಿ ಜಯರಾಮ ಭಟ್ ವಹಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಆರೋಗ್ಯ ಸಚಿವ ಯು ಟಿ ಖಾದರ್, ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ನಗರ ಪೋಲಿಸ್ ಆಯುಕ್ತ ಎಸ್ ಮುರುಗನ್, ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ, ಚಿಕ್ಕಮಗಳೂರು ವೇದ ವಿಜ್ಞಾನ ಮಂದರಿದ ಕೆ ಎಸ್ ನಿತ್ಯಾನಂದ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬಾರ್ಕೂರು ಶಾಂvರಾಮ ಶೆಟ್ಟಿ, ಮಂಗಳೂರು ಸಹಾಯಕ ಆಯುಕ್ತ ಡಾ ಆಶೋಕ್ ಡಿ ಆರ್, ಪಡಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ದಾಸ್, ಹಳೆಯಂಗಡಿ ಪಿ ಸಿ ಎ ಬ್ಯಾಂಕಿನ ಅಧ್ಯಕ್ಷ ಎಸ್ ಸತೀಶ್ ಭಟ್, ಮುಂಬೈ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮಾಜಿ ಅದ್ಯಕ್ಷ ಐಕಳ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯು ಮೋಹನ್ ದಾಸ್ ಶೆಟ್ಟಿ, ಮುಂಬೈ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್, ಮೂಲ್ಕಿ ಪೈಯೊಟ್ಟು ರತ್ನಾಕರ ಸಾಲ್ಯಾನ್, ಪಾದೆಮನೆ ಅಜಿತ್ ರೈ, ಯದುನಾರಾಯಣ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಪತ್ರಕರ್ತ ಲೋಕೇಶ್ ಸುರತ್ಕಲ್, ರುಕ್ಕಯ್ಯ ಮೂಲ್ಯ ಪಾವಂಜೆ, ಡಾ ದೇವಿಪ್ರಸಾದ್ ಶೆಟ್ಟಿ ಬೆಳಪು, ಎರ್ಮಾಳು ರೋಹಿತ್ ಹೆಗ್ಡೆಯವರನ್ನು ಗೌರವಿಸಲಾಗುವುದು.

ಕನೆಹಲಗೆ, ಹಗ್ಗ ಹಿರಿಯ ಮತ್ತು ಅಡ್ಡ ಹಲಗೆಯಲ್ಲಿ ಪ್ರಥಮ 1 ಪವನ್ ಚಿನ್ನ,

ದ್ವಿತೀಯ ಅರ್ಧ ಪವನ್ ಚಿನ್ನ,

ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯದಲ್ಲಿ ಪ್ರಥಮ ಅರ್ಧ ಪವನ್ ಚಿನ್ನ,

ದ್ವಿತೀಯ ಕಾಲು ಪವನ್ ಚಿನ್ನ ಬಹುಮಾನ ನೀಡಲಾಗುವುದೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Mulkil-11121503
ಮೂಲ್ಕಿ: ದೀಪೋತ್ಸವ ಹಾಗೂ ರಂಗಪೂಜೆ

ಮೂಲ್ಕಿ: ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶಿವ ದೇವಾಲಯ ಹಾಗೂ ವಿಷ್ಣು ದೇವಾಲಯದಲ್ಲಿ ದೀಪೋತ್ಸವ ಹಾಗೂ ರಂಗಪೂಜೆ ಗುರುವಾರ ಜರುಗಿತು. Bhagyavan Sanil

Close