ಬಸ್ಸು ಚಾಲಕರ-ನಿರ್ವಾಹಕರ ಸಂಘ ವಾರ್ಷಿಕೋತ್ಸವ

ಕಿನ್ನಿಗೋಳಿ: ಬಸ್ ಚಾಲಕರು-ನಿರ್ವಾಹಕರು ಗ್ರಾಮೀಣ ಭಾಗದ ಜನರ ಬಗ್ಗೆ ಕಾಳಜಿ ಹೊಂದಿ ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಬೇಕು. ಎಂದು ಇಂಟಕ್ ಸ್ಟೇಟ್ ವರ್ಕಿಂಗ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು.
ಶನಿವಾರ ಕಿನ್ನಿಗೋಳಿ ಬಸ್ ನಿಲ್ಧಾಣದಲ್ಲಿ ನಡೆದ ಕಿನ್ನಿಗೋಳಿ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಸಂಘದ 2ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭ ಚಾಲಕ ಹಾಗೂ ನಿರ್ವಾಹಕರ 5 ಲಕ್ಷದ ವಿಮಾ ಯೋಜನೆ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಸಂಚಾರಿ ವಿಭಾಗದ ಎಸಿಪಿ ಉದಯ ನಾಯ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಚಾಲಕ ನಿರ್ವಾಹಕರಿಗೆ ಗುರುತು ಪತ್ರ ನೀಡಿದರು.
ಈ ಸಂದರ್ಭ ಅನಾರೋಗ್ಯದಿಂದ ಬಳಲುತ್ತಿರುವ ಬಾಲಕ ವಿಶಾಲ್ ಎಳತ್ತೂರು ಕುಟುಂಬಕ್ಕೆ 25,000 ರೂಪಾಯಿಗಳನ್ನು ಹಸ್ತಾಂತರಿಸಲಾಯಿತು. ನಿರ್ವಾಹಕ ಬಾಲಕೃಷ್ಣ ಎಡಪದವು, ಹುಸೈನ್ ಯಾನೆ ಅಬ್ಬು , ಚಾಲಕರಾದ ಮಹಮ್ಮದ್ ಹುಸೈನ್ , ಯಾದವ ಪಿ. ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ದ.ಕ. ಜಿ. ಪಂ. ಸದಸ್ಯ ಈಶ್ವರ್ ಕಟೀಲು, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಬಸ್ಸು ಚಾಲಕರ ಹಾಗೂ ನಿರ್ವಾಹಕರ ಸಂಘದ ಸಂಘದ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ, ಕಾನೂನು ಸಲಹೆಗಾರ ಶಶಿಧರ ಅಡ್ಕತ್ತಾಯ, ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ ಉಪಸ್ಥಿತರಿದ್ದರು.
ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು. ಕೋನಿ ವರದಿ ವಾಚಿಸಿದರು.
ಕಿನ್ನಿಗೋಳಿ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಸಂಘದ ಆಶ್ರಯದಲ್ಲಿ ನಡೆದ ಹಗ್ಗ ಜಗ್ಗಾಟ ಸ್ಪರ್ಧಾ ವಿಜೇತರಾದ ಜೋಕುಲ ಕಂಬಳ ಪಟ್ಟೆ ಮತ್ತು ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾದ ಬಟ್ಟಕೋಡಿ ಪ್ರೆಂಡ್ಸ್ ಮತ್ತು ಫ್ರೆಂಡ್ಸ್ ಪಕ್ಷಿಕೆರೆ ತಂಡಗಳಿಗೆ ಇದೇ ಸಂದರ್ಭ ಬಹುಮಾನಗಳನ್ನು ವಿತರಿಸಲಾಯಿತು.

ಬಸ್ಸು ಚಾಲಕರ ಹಾಗೂ ನಿರ್ವಾಹಕರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಫ್ರೆಂಡ್ಸ್ ಪಕ್ಷಿಕೆರೆ ತಂಡದವರು ಅನಾರೋಗ್ಯ ಪೀಡಿತ ಬಾಲಕ ವಿಶಾಲ್ ಚಿಕಿತ್ಸೆಗಾಗಿ ಪ್ರಶಸ್ತಿ ಮೊತ್ತದ ಹಣವನ್ನು ನೀಡಿ ಮಾನವೀಯತೆ ಮೆರೆದರು

Kinnigoli-14121506

Comments

comments

Comments are closed.

Read previous post:
Kinnigoli-14121505
ಅಭಿವೃದ್ಧಿಗೆ ಪಾಠ್ಯ-ಪಾಠ್ಯೇತರ ಚಟುವಟಿಕೆಗಳು ಮುಖ್ಯ

ಕಿನ್ನಿಗೋಳಿ: ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ಧಿಗೆ ಪಾಠ್ಯ ಮತ್ತು ಪಾಠ್ಯೇತರ ಚಟುವಟಿಕೆಗಳು ಮುಖ್ಯ ಎಂದು ಏಳಿಂಜೆ ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲಾ ಸಂಚಾಲಕ ಫಾ. ವಿಕ್ಟರ್ ಡಿಮೆಲ್ಲೊ ಹೇಳಿದರು. ಭಾನುವಾರ...

Close