ಅಭಿವೃದ್ಧಿಗೆ ಪಾಠ್ಯ-ಪಾಠ್ಯೇತರ ಚಟುವಟಿಕೆಗಳು ಮುಖ್ಯ

ಕಿನ್ನಿಗೋಳಿ: ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ಧಿಗೆ ಪಾಠ್ಯ ಮತ್ತು ಪಾಠ್ಯೇತರ ಚಟುವಟಿಕೆಗಳು ಮುಖ್ಯ ಎಂದು ಏಳಿಂಜೆ ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲಾ ಸಂಚಾಲಕ ಫಾ. ವಿಕ್ಟರ್ ಡಿಮೆಲ್ಲೊ ಹೇಳಿದರು.
ಭಾನುವಾರ ಏಳಿಂಜೆ ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ನಿವೃತ್ತ ಶಿಕ್ಷಕ ಕೃಷ್ಣ ಶೆಟ್ಟಿ ಉಳೆಪಾಡಿ ಅವರನ್ನು ಸನ್ಮಾನಿಸಲಾಯಿತು. ಏಳಿಂಜೆ ದೇವಳ ಪ್ರಧಾನ ಅರ್ಚಕ ಗಣೇಶ್ ಭಟ್ ಏಳಿಂಜೆ, ಕಿರೆಂ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಮ್ಯಾಕಿಂ ಪಿಂಟೋ, ಏಳಿಂಜೆ ಶ್ರೀ ಜಾರಾಂದಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಸದಾನಂದ ಎಂ. ಶೆಟ್ಟಿ, ಮುಂಬೈ ಉದ್ಯಮಿ ಅಶೋಕ್ ಎಂ. ಶೆಟ್ಟಿ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಕಟೀಲು ಪ್ರೌಢ ಶಾಲಾ ಶಿಕ್ಷಕ ಸಾಯಿನಾಥ ಶೆಟ್ಟಿ , ಸಿಆರ್‌ಪಿ ಜಗದೀಶ ನಾವಡ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಿರ್ಚಡ್ ಮಿರಾಂದ ಮತ್ತಿತರರು ಉಪಸ್ಥಿತರಿದ್ದರು.
ಲಕ್ಷ್ಮಣ್ ಬಿ. ಬಿ. ಏಳಿಂಜೆ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಜುಲಿಯಾನ ವರದಿ ವಾಚಿಸಿದರು. ಸುರೇಖಾ ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-14121505

Comments

comments

Comments are closed.

Read previous post:
Kinnigoli-14121504
ಪಂಜ-ಕೊಯಿಕುಡೆ ವಾರ್ಷಿಕ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಪಂಜ-ಕೊಯಿಕುಡೆ ಶ್ರೀವಿಠೋಭ ಭಜನಾ ಮಂಡಳಿಯ 57 ನೇ ವರ್ಷದ ವಾರ್ಷಿಕ ಭಜನಾ ಮಂಗಲೋತ್ಸವ ಶನಿವಾರ ನಡೆಯಿತು.

Close