ಮೌಲ್ಯಾಧಾರಿತ ಜ್ಞಾನಾರ್ಜನೆ ಮಕ್ಕಳ ಭವಿಷ್ಯ

ಕಿನ್ನಿಗೋಳಿ: ಮೌಲ್ಯಾಧಾರಿತ ಜ್ಞಾನಾರ್ಜನೆ ಮಕ್ಕಳ ಭವಿಷ್ಯದ ತಳಹದಿಯಾಗಿ ಪ್ರಭುದ್ಧ ನಾಗರಿಕರನ್ನಾಗಿ ಮಾಡುತ್ತದೆ ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರ ಹೇಳಿದರು.
ಸೋಮವಾರ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಪೊಂಪೈ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಪೊಂಪೈ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ. ವಿಕ್ಟರ್ ಡಿಮೆಲ್ಲೊ ಅಧ್ಯಕ್ಷತೆ ವಹಿಸಿದ್ದರು.
ಪೊಂಪೈ ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಪ್ಯಾಟ್ರಿಕ್ ಮಿನೇಜಸ್, ಉಪನ್ಯಾಸಕ ಯೋಗೀಂದ್ರ, ಕಿರೆಂ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಮಾಕ್ಸಿಂ ಪಿಂಟೋ, ಸಿ.ಆರ್.ಪಿ ಜಗದೀಶ್ ನಾವಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ರಶ್ಮಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಫಿಲೋಮಿನಾ ಸಿಕ್ವೇರಾ ಸ್ವಾಗತಿಸಿ ಶಿಕ್ಷಕಿ ಡೈನಾ ಡಿಸೋಜ ವಾರ್ಷಿಕ ವರದಿ ಮಂಡಿಸಿದರು. ರೇಶ್ಮಾ ಕಾರ್ಯಕ್ರಮ ನಿರೂಪಿಸಿದರು.

Kinnigoli-141215010

Comments

comments

Comments are closed.

Read previous post:
Kinnigoli-14121509
ಉತ್ತಮ ಪ್ರಜೆಗಳಾಗಿ ನಾಡಿಗೆ ಕೀರ್ತಿ ತರಬೇಕು

ಕಿನ್ನಿಗೋಳಿ: ಮಕ್ಕಳು ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗಳಿಗೂ ಗಮನ ನೀಡಿ ಕಲಿತು ಭವಿಷ್ಯದ ಉತ್ತಮ ಪ್ರಜೆಗಳಾಗಿ ಶಾಲೆ ಮತ್ತು ನಾಡಿಗೆ ಕೀರ್ತಿ ತರಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ...

Close