ಉತ್ತಮ ಪ್ರಜೆಗಳಾಗಿ ನಾಡಿಗೆ ಕೀರ್ತಿ ತರಬೇಕು

ಕಿನ್ನಿಗೋಳಿ: ಮಕ್ಕಳು ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗಳಿಗೂ ಗಮನ ನೀಡಿ ಕಲಿತು ಭವಿಷ್ಯದ ಉತ್ತಮ ಪ್ರಜೆಗಳಾಗಿ ಶಾಲೆ ಮತ್ತು ನಾಡಿಗೆ ಕೀರ್ತಿ ತರಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು ಹೇಳಿದರು.
ಭಾನುವಾರ ಕಿನ್ನಿಗೋಳಿ ಸಮೀಪದ ಉಲ್ಲಂಜೆ ದ.ಕ.ಜಿ.ಪಂ.ಸ.ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಾತನಾಡಿದರು.

ಕೊಡೆತ್ತೂರು ದೇವಸ್ಯಮಠದ ವೇದವ್ಯಾಸ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರುಗಳಾದ ಹರೀಶ್ಚಂದ್ರ ಶೆಟ್ಟಿ, ದಯಾನಂದ ಶೆಟ್ಟಿ, ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಟೀಲು ಕಲಾ ಕನ್‌ಸ್ಟ್ರಕ್ಷನ್ ಮಾಲಕ ಲೋಕಯ್ಯ ಸಾಲ್ಯಾನ್, ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಜಾಕ್ಸನ್ ಸಲ್ಡಾನ್ಹ, ಕೊಡೆತ್ತೂರು ಆದರ್ಶ ಬಳಗ ಅಧ್ಯಕ್ಷ ದಾಮೋದರ ಶೆಟ್ಟಿ, ಉಲ್ಲಂಜೆ ಯುವಶಕ್ತಿ ಫ್ರೆಂಡ್ಸ್ ಅಧ್ಯಕ್ಷ ವಿನೀತ್ ಅಂಚನ್, ಸಿಆರ್‌ಪಿ ಜಗದೀಶ್ ನಾವಡ, ಉಪನ್ಯಾಸಕ ಹರಿಪ್ರಸಾದ್, ಶಾಲಾ ವಿದ್ಯಾರ್ಥಿ ನಾಯಕ ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ ಶೆಟ್ಟಿ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಮಂಗಳಾ ಎಸ್.ಭಟ್ ವಾರ್ಷಿಕ ವರದಿ ನೀಡಿದರು. ಸಹ ಶಿಕ್ಷಕಿ ಜೆಸಿಂತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-14121509

Comments

comments

Comments are closed.

Read previous post:
Kinnigoli-14121508
ರಾಮಾಯಣದಲ್ಲಿ ವಿಭೀಷಣನ ಆದರ್ಶ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಪ್ರಯುಕ್ತ ಪ್ರತಿ ತಿಂಗಳು ನಡೆಯುವ ರಾಮಾಯಣ ಕಥಾ ಮಾಲಿಕೆಯಲ್ಲಿ ವಿಭೀಷಣನ ಪಾತ್ರ ಹಾಗೂ ಸತ್ಯ,...

Close