ಕಾರ್ನಾಡು ಸಿಎಸ್‌ಐ ಶಾಲಾ ವಾರ್ಷಿಕೋತ್ಸವ

ಮೂಲ್ಕಿ: ಪೋಷಕರು ಎಳವೆಯಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಟ್ಟರೆ ಸಮಾಜದಲ್ಲಿ ಸಾಮರಸ್ಯ ಶಿಸ್ತು ಜೀವನದಲ್ಲಿ ಅಭಿವೃದ್ಧಿ ಕಾಣಲು ಸಾದ್ಯ ಎಂದು ಮೂಲ್ಕಿ ವಿಜಯಕಾಲೇಜಿನ ಪ್ರಾಂಶುಪಾಲೆ ಪಮಿದಾ ಬೇಗಂ ಹೇಳಿದರು.

ಕಾರ್ನಾಡು ಸಿಎಸ್‌ಐ ಶಾಲೆಯ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರೆ. ಸಂತೋಷ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭ ಕರಾಟೆ ಶಿಕ್ಷಕರಿಗೆ ಹಾಗೂ ಪ್ರತಿಭಾನ್ವಿತ ಆಂಗ್ಲ ಮಾದ್ಯಮ ವಿದ್ಯಾರ್ಥಿಗಳಾದ ಮರಿಯಂ ರಾಝ್ಮಾ, ಸ್ವಾತಿ.ಜಿ, ಮಲ್ವಿನಾ, ವಿನುತಾ ಭಾರ್ಗವಿ, ಸಲಿಮಾ ಸುರಯ್ಯಾ, ಕನ್ನಡ ಮಾದ್ಯಮದ ಪ್ರತಿಭಾನ್ವಿತ ನಿದ್ಯಾರ್ಥಿಗಳಾದ ಶಿವರಾಜ್ ಕುಮಾರ‍್ಮಚೈತ್ರಾ, ಪ್ರಜ್ಞಾ, ಸನ್ಮಾನಿಸಲಾಯಿತು. ಕರಾಟೆ ಶಿಕ್ಷಕ ಮೋರ್ಗನ್ ವಿಲಿಯಂ, ನೃತ್ಯ ಶಿಕ್ಷಕ ನಿತಿನ್ ರವರನ್ನು ಗೌರವಿಸಲಾಯಿತು.

ಮೂಲ್ಕಿ ನ.ಪಂ. ಅಧ್ಯಕ್ಷೆ ಮೀನಾಕ್ಷಿ ಬಂಗೇರಾ, ಟಿ.ವಿ ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್, ಶಾಲಾ ಹಳೆವಿದ್ಯಾರ್ಥಿ ಹಾಗೂ ಉದ್ಯಮಿ ಪುರಂಧರ ಸಾಲ್ಯಾನ್, ಶಾಲಾಭಿವೃದ್ಧಿ ಸಮಿಟಿಯ ಮುಖ್ಯಸ್ಥರಾದ ಡಾ| ಅಚ್ಯುತ ಕುಡ್ವ, ಹರ್ಷರಾಜ ಶೆಟ್ಟಿಜಿಎಂ, ಸದಸ್ಯ ಇಬ್ರಾಹಿಂ ಸಂಚಾಲಕ ರಂಜನ್ ಜತ್ತನ್ನಾ, ಸಿ.ಎಸ್.ಐ ಮುಖ್ಯೋಪಾದ್ಯಾಯ ನೀರಜ್ ಪುನಿತ್, ಯುಬಿಎಂಸಿ ಶಾಲೆಯ ಮುಖ್ಯೋಪಾದ್ಯಾಯಿನಿ ಗ್ಲಾಡಿಸ್ ಸುಕುಮಾರಿ ಉಪಸ್ಥಿತರಿದ್ದರು.

ಶಾಲೆಯ ಶಿಕ್ಷಕಿ ಎಲಿಜಬೆತ್ ಪುಷ್ಪಲತ ಸ್ವಾಗತಿಸಿದರು. ಶಿಕ್ಷಕಿ ಉಮಾವತಿ ಧನ್ಯವಾದ ಅರ್ಪಿಸಿದರು ಝೀಟಾ ಮೆಂಡೋನ್ಸಾ, ಐರಿನ್ ಕ್ರಿಸ್ತಬೆಲ್ ಕಾರ‍್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು.

Bhagyavan Sanil

Mulki-14121501

Comments

comments

Comments are closed.

Read previous post:
Mulkil-11121504
ಕುಂಜಾರುಗಿರಿ ಮಹಾಲಿಂಗೇಶ್ವರ ಸೀಯಾಳ ಅಭಿಷೇಕ

ಮೂಲ್ಕಿ:  ಕೊಲಕಾಡಿ ಕುಂಜಾರುಗಿರಿ ಮಹಾಲಿಂಗೇಶ್ವರ ಶಾಸ್ತಾವು ದೇವಸ್ಥಾನದ ವರ್ಷಾವಧಿ ದೀಪೋತ್ಸವದ ಪ್ರಯುಕ್ತ ಶ್ರೀ ದೇವರಿಗೆ ಸೀಯಾಳ ಅಭಿಷೇಕ ನಡೆಯಿತು.

Close