ಸರಕಾರಿ ಮಾ.ಹಿ.ಪ್ರಾ.ಶಾ. ವಾರ್ಷಿಕೋತ್ಸವ

ಮೂಲ್ಕಿ: ಶತಮಾನೋತ್ತರ ವರ್ಷಗಳಿಂದ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಿದ ಶಾಲೆಗಳು ಕೂಡಾ ಆಧುನಿಕ ಶಿಕ್ಷಣದ ಭರಾಟೆಯಲ್ಲಿ ಮೂಲೆಗುಂಪಾಗುತ್ತಿರುವುದು ವಿಪರ್ಯಾಸ ಎಂದು ಹಿರಿಯ ವೈದ್ಯ ಡಾ.ಬಿ.ಎಚ್.ರಾಘವ ರಾವ್ ಹೇಳಿದರು.
ಅವರು ಮೂಲ್ಕಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಬೋರ್ಡು ಶಾಲೆ) ಯ119ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕನ್ನಡ ಶಾಲೆಗಳನ್ನು ಖಾಸಗೀ ಶಾಲೆಗಳಿಗೆ ಸಮಾನವಾಗಿ ಅಭಿವೃದ್ಧಿ ಪಡಿಸಿದಲ್ಲಿ ಮಾತ್ರ ಕನ್ನಡ ಶಾಲೆಗಳ ಬಗ್ಗೆ ಪೋಷಕರಿಗೆ ಆಸಕ್ತಿ ಉಂಟಾಗಿ ಶಾಲೆಗಳ ಉಳಿವು ಸಾಧ್ಯವಿದೆ ಎಂದರು.
ಈ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಆಟೋಟ ಸ್ಪರ್ದಾ ವಿಜೇತ ಪೋಷಕರಿಗೆ ಬಹುಮಾನ ನೀಡಲಾಯಿತು.
ಮೂಲ್ಕಿ ನಗರ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ ವಾರ್ಷಿಕೋತ್ಸವ ಉದ್ಘಾಟಿಸಿದರು. ಉದ್ಯಮಿ ರಮೇಶ್ ಪುಂಡಲೀಕ ಕಾಮತ್, ಹಳೆ ವಿದ್ಯಾರ್ಥಿ ದಿನೇಶ್ ಶೆಣೈ, ಮುಖ್ಯೋಪಾದ್ಯಾಯಿನಿ ಜ್ಯೋತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವಸಂತಿ ಅತಿಥಿಗಳಾಗಿದ್ದರು. ಶಿಕ್ಷಕಿ ಲಲಿತಾಂಬ ಸ್ವಾಗತಿಸಿದರು.ಸುಗಂಧಿ ನಿರೂಪಿಸಿದರು. ರಾಜೀವಿ ವಂದಿಸಿದರು.

Bhagyavan Sanil

Mulki-15121501

Comments

comments

Comments are closed.

Read previous post:
Kinnigoli-141215010
ಮೌಲ್ಯಾಧಾರಿತ ಜ್ಞಾನಾರ್ಜನೆ ಮಕ್ಕಳ ಭವಿಷ್ಯ

ಕಿನ್ನಿಗೋಳಿ: ಮೌಲ್ಯಾಧಾರಿತ ಜ್ಞಾನಾರ್ಜನೆ ಮಕ್ಕಳ ಭವಿಷ್ಯದ ತಳಹದಿಯಾಗಿ ಪ್ರಭುದ್ಧ ನಾಗರಿಕರನ್ನಾಗಿ ಮಾಡುತ್ತದೆ ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರ ಹೇಳಿದರು. ಸೋಮವಾರ ಕಿನ್ನಿಗೋಳಿ ಸಮೀಪದ ತಾಳಿಪಾಡಿ...

Close