ಆಕಾಂಕ್ಷೆಗಳನ್ನು ಅರಿತು ಶಿಕ್ಷಣ ನೀಡಬೇಕು

ಕಿನ್ನಿಗೋಳಿ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಅವರ ಭವಿಷ್ಯದ ಆಕಾಂಕ್ಷೆಗಳನ್ನು ಅರಿತು ಮೌಲ್ಯಾಧರಿತ ಶಿಕ್ಷಣ ನೀಡಬೇಕಾಗಿದೆ. ಎಂದು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಲಿಟ್ಲ್‌ಫ್ಲವರ್ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಲಿಟ್ಲ್‌ಫ್ಲವರ್ ಸಮೂಹ ಸಂಸ್ಥೆಗಳ ಶಾಲಾ ಸಂಚಾಲಕಿ ಭಗಿನಿ ಸಿಬಲ್ ಬಿ. ಎಸ್. ಅಧ್ಯಕ್ಷತೆ ವಹಿಸಿದ್ದರು.
ಮೇರಿವೆಲ್ ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ವಿತಾಲಿಸ್ ಲೋಬೊ, ಪದ್ಮನೂರು ಕ್ಲಸ್ಟರ್ ಸಿಆರ್‌ಪಿ ಜಗದೀಶ ನಾವಡ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಕಿನ್ನಿಗೋಳಿ ರೋಟರ‍್ಯಾಕ್ಟ್ ಅಧ್ಯಕ್ಷ ಜಾಕ್ಸನ್ ಸಲ್ದಾನ್ಹ, ಉದ್ಯಮಿ ಫೆಡ್ರಿಕ್ ಲೋಬೋ, ಶಿಕ್ಷಕ ರಕಕ ಸಂಘದ ಉಪಾಧ್ಯಕ್ಷೆ ಸಿಂತಿಯಾ ಡಿಸೋಜ, ಶಾಲಾ ನಾಯಕಿ ಕ್ರಿಸ್ಟಲ್ ರೇಶ್ಮಾ ಡಿಸೋಜ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಭಗಿನಿ ಅರುಣಾ ಬಿ. ಎಸ್ ಸ್ವಾಗತಿಸಿದರು. ಶಿಕ್ಷಕ ಅಬ್ದುಲ್ ರೆಹಮಾನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-161215011 Kinnigoli-161215012

Kinnigoli-16121502

Comments

comments

Comments are closed.

Read previous post:
Kinnigoli-16121501
ಬಳ್ಕುಂಜೆ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಸೋಮವಾರ ಬಳ್ಕುಂಜೆ ಶ್ರೀ ವಿಠೋಬ ರಖುಮಾಯಿ ಭಜನಾ ಮಂದಿರದಲ್ಲಿ ವಿವಿಧ ಭಜನಾ ಮಂಡಳಿಗಳ ಸಹಭಾಗಿತ್ವದಲ್ಲಿ 67 ನೇ ವರ್ಷದ ಭಜನಾ ಮಂಗಲೋತ್ಸವ ನಡೆಯಿತು.

Close