ಶಿಸ್ತು ಮತ್ತು ಪ್ರಯತ್ನ ಕ್ರೀಡಾ ಸಾಧನೆಗೆ ಪೂರಕ

ಮೂಲ್ಕಿ: ಬೌದ್ಧಿಕ ಹಾಗೂ ಶಾರೀರಿಕ ವಿಕಾಸಕ್ಕೆ ಕ್ರೀಡೆ ಬಹಳ ಉತ್ತಮವಾಗಿದ್ದು ಕ್ರೀಡಾ ಸಾಧಕರು ಶೈಕ್ಷಣಿಕವಾಗಿ ಮುಂದುವರಿದರೆ ಜೀವನದಲ್ಲಿ ಉತ್ತಮ ಅವಕಾಶಗಳು ಲಭಿಸುತ್ತದೆ ಎಂದು ಚಾರ್ಟೆಡ್ ಇಂಜಿನಿಯರ್ ಜೀವನ್.ಕೆ.ಶೆಟ್ಟಿ ಹೇಳಿದರು. ಮೂಲ್ಕಿ ವಿಜಯಾ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟದ ಮುಖ್ಯ ಅತಿಥಿಯಾಗಿ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ ವಿಜಯಾ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್ ಮಾತನಾಡಿ, ಶಿಸ್ತು ಮತ್ತು ಪ್ರಯತ್ನ ಕ್ರೀಡಾ ಸಾಧನೆಗೆ ಪೂರಕವಾಗಿದ್ದು ಸೋಲು ಗೆಲುವಿನ ಮೆಟ್ಟಿಲು ಎಂಬ ಸ್ಪರ್ದಾತ್ಮಕ ಮನೋಭಾವನೆ ವಿದ್ಯಾರ್ಥಿಗಳ ಭವಿಷ್ಯ ಜೀವನದ ಉನ್ನತಿ ಸಾಧಿಸಲು ಸಹಕಾರಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಿಜಯಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ ವಹಿಸಿದ್ದರು.ಕಾಲೇಜು ಕ್ರೀಡಾ ಶಿಕ್ಷಕ ಸಿದ್ದರಾಮಣ್ಣ ಕೆಎಲ್, ವಿದ್ಯಾರ್ಥಿ ಸಂಘಗಳ ಅಧ್ಯಕ್ಷ ಶೋಧನ್ ಶೆಟ್ಟಿ ಅತಿಥಿಗಳಾಗಿದ್ದರು. ಸಮೀಕ್ಷಾ ಹೆಗ್ಡೆ ಸ್ವಾಗತಿಸಿದರು. ಅಮಿತಾ ಮಾಬೆನ್ ನಿರೂಪಿಸಿದರು, ತಿವಿಕ್ರಮ್ ವಂದಿಸಿದರು.

Mulki-17121501

Comments

comments

Comments are closed.

Read previous post:
Kinnigoli-16121505
ಕಟೀಲು ಪಂಚಾಯಿತಿ ಸ್ಥಳಾಂತರ

ಕಿನ್ನಿಗೋಳಿ: ನೂತನವಾಗಿ ಪ್ರಾರಂಭವಾದ ಕಟೀಲು ಪಂಚಾಯಿತಿ ಕಛೇರಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಆವರಣದಿಂದ ತಾತ್ಕಲಿಕವಾಗಿ ಕಟೀಲಿಗೆ ಬುಧವಾರ ಸ್ಥಳಾಂತರಗೊಂಡಿತು. ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಪಂಚಾಯಿತಿ ಕಛೇರಿ...

Close