ಶ್ರೀ ವ್ಯಾಸಮಹರ್ಷಿ ಶಾಲಾ ವಾರ್ಷಿ ಕೋತ್ಸವ

ಮೂಲ್ಕಿ: ವಿದ್ಯಾರ್ಥಿಗಳು ಅದ್ಯಯನಶೀಲರಾಗುವ ಜೊತೆಗೆ ಸಂಶೋಧನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ಭವಿಷ್ಯದ ವಿಜ್ಞಾನಿಗಳಾಗಿ ದೇಶದ ಹೆಸರನ್ನು ಉತ್ತುಂಗಕ್ಕೇರಿಸಲು ಸಾಧ್ಯವಿದೆ ಎಂದು ಬೆಥನಿ ಶಾಲೆಯ ಮುಖ್ಯಸ್ಥೆ ಸಿ.ವಿಲ್ಮಾ ಬಿಎಸ್ ಹೇಳಿದರು.
ಮೂಲ್ಕಿ ಕಿಲ್ಪಾಡಿ ಶ್ರೀ ವ್ಯಾಸಮಹರ್ಷಿ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿ ಕೋತ್ಸವ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನಗಳನ್ನು ಉದ್ಘಾಟಿಸಿ ಮಾತನಾಡಿದರು.
ನಿದ್ಯಾರ್ಥಿಗಳ ಶೃಜನಶೀಲತೆಯಲ್ಲಿ ಸಂಶೋಧನಾತ್ಮಕ ಭೂಮಿಕೆಯನ್ನು ಶಿಕ್ಷಕರು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಹಾಗೂ ಪೋಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಗಳಾಗಿರಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಮೂಲ್ಕಿ ವಿಜಯಾ ಕಾಲೇಜು ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ವೆಂಕಟೇಶ ಭಟ್ ಮಾತನಾಡಿ,ಭಾರತ ದೇಶವು ಜ್ಞಾನ ತಂತ್ರಜ್ಞಾನಗಳಲ್ಲಿ ವಿಶ್ವ ಮಾನ್ಯತೆ ಪಡೆದಿದ್ದು ನಮ್ಮ ದೇಶದ ಆರ್ಯಭಟ, ಡಾ.ಸಿವಿ ರಾಮನ್, ಡಾ.ಎಪಿಜೆ ಅಬ್ದುಲ್ ಕಲಾಂರವರಂತಹಾ ಮಹಾನ್ ವಿಜ್ಞಾನಿಗಳನ್ನು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದ ಆದರ್ಶವಾಗಿಸಿಕೊಂಡು ತಾವೂ ಸಂಶೋಧನಾತ್ಮಕ ಚಿಂತನೆಗಳನ್ನು ಬೆಳೆಸಿ ಭವಿಷ್ಯದ ವಿಜ್ಞಾನಿಗಳಾಗ ಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಜಿ.ಜಿ.ಕಾಮತ್ ವಹಿಸಿದ್ದರು.
ಶಾಲಾಡಳಿತ ಮಂಡಳಿಯ ಪ್ರೊ.ಯು.ನಾಗೇಶ್ ಶೆಣೈ, ಎಚ್.ರಾಮದಾಸ್ ಕಾಮತ್, ಮುಖ್ಯೋಪಾದ್ಯಾಯಿನಿ ಚಂದ್ರಿಕಾ ಭಂಡಾರಿ ಅತಿಥಿಗಳಾಗಿದ್ದರು. ಆಕಾಶ್‌ರಾಜ್ ಭಟ್ ಸ್ವಾಗತಿಸಿದರು, ರಕ್ಷಾ ಶೆಣೈ ನಿರೂಪಿಸಿದರು, ಅನನ್ಯ ಎಕೆ ವಂದಿಸಿದರು.

Bhagyavan Sanil

Kinnigoli-19121508

Comments

comments

Comments are closed.

Read previous post:
Kinnigoli-19121503
ಎಕ್ಕಾರು ಸುಟ್ಟ ರೀತಿಯಲ್ಲಿ ಮಹಿಳೆಯ ಶವ ಪತ್ತೆ

ಎಕ್ಕಾರು: ಬಜಪೆ ಸಮೀಪದ ಎಕ್ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೋಬ್ಬರ ದೇಹ ಪತ್ತೆಯಾಗಿದೆ, ಮಹಿಳೆಯನ್ನು ಮಂಗಳೂರು ಜಪ್ಪಿನ ಮೊಗರು ನಿವಾಸಿ ಉಷಾ ಶೆಟ್ಟಿ ಎಂದು ಗುರುತಿಸಲಾಗಿದ್ದು, ಮಂಗಳೂರಿನ ಮಾಂಡೋವಿ...

Close