ಕೋಟಾ ಶ್ರೀನಿವಾಸ ಪೂಜಾರಿ ಸುದ್ದಿ ಗೋಷ್ಠಿ

ಕಿನ್ನಿಗೋಳಿ: ನಮ್ಮನ್ನು ಬೆಂಬಲಿಸುವ ಮತದಾರರು ಪ್ರಥಮ ಪ್ರಾಶಸ್ತ್ಯ ಮತವನ್ನು ಬಿಜೆಪಿಗೆ ಮಾತ್ರ ಚಲಾಯಿಸಲಿದ್ದಾರೆ. ಬಿಜೆಪಿ ಉನ್ನತ ವಲಯದಿಂದ ಎರಡನೇ ಮತವನ್ನು ಚಲಾಯಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ ಕಾಂಗ್ರೆಸ್‌ನ ಆಂತರಿಕ ಕಚ್ಚಾಟದಿಂದಾಗಿಯೇ ಬಂಡಾಯ ಸ್ಪರ್ಧೆ ನಡೆಯುತ್ತಿದ್ದು ಬಂಡಾಯ ರ್ಸ್ಪಗಳಿಗೆ ಬಿಜೆಪಿ ಬೆಂಬಲ ನೀಡುತ್ತಿಲ್ಲ ಕಾಂಗ್ರೇಸ್ ಅಪಪ್ರಚಾರ ಮತ್ತು ಹತಾಶ ಪೊಳ್ಳು ಹೇಳಿಕೆಗಳನ್ನು ನೀಡುತ್ತದೆ. ನಾವು ಅಭೂತಪೂರ್ವ ಜಯಗಳಿಸಲಿದ್ದೇವೆ ಎಂದು ವಿಧಾನಪರಿಷತ್ ಚುನಾವಣೆಯ ಬಿಜೆಪಿಯ ಜಿಲ್ಲಾ ಪ್ರಮುಖರಾದ ಮಾಜಿ ಶಾಸಕ ಮೋನಪ್ಪ ಭಂಡಾರಿ ಹೇಳಿದರು.
ಕಿನ್ನಿಗೋಳಿಯ ಯುಗಪುರುಷದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಿಧಾನ ಪರಿಷತ್ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯ ಬಿಜೆಪಿಯ ನಾಯಕರ ತೀರ್ಮಾನದಂತೆ ಮತವು ವಿಭಜನೆ ಆಗಬಾರದು ಎಂಬ ಸದುದ್ದೇಶದಿಂದ ಎರಡು ಸ್ಥಾನದ ಅವಕಾಶ ಇದ್ದರೂ ಒಂದೇ ಸ್ಥಾನಕ್ಕೆ ಸ್ಪರ್ಧೆ ನಡೆಯುತ್ತಿದೆ. ಗ್ರಾ.ಪಂ., ತಾ.ಪಂ. ಜಿ.ಪಂ.ನ ಸದಸ್ಯರ ಅಕಾರವನ್ನು ಎತ್ತರಕ್ಕೇರಲು ಸದನದ ಒಳಗಡೆ ನಡೆದ ಹೋರಾಟದ ಫಲವಾಗಿ ಇಂದು ಗ್ರಾಮ ಪಂಚಾಯತ್‌ಗಳು ಸಧೃಢವಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಪಂಚಾಯತ್‌ಗಳ ಸಬಲೀಕರಣದಿಂದಾಗಿ ಗ್ರಾಮ ಮಟ್ಟದಲ್ಲಿ ಸೌಲಭ್ಯಗಳು ಹೆಚ್ಚಾಗಿ ಅಭಿವೃದ್ದಿ ಕಾರ್ಯಗಳಾಗಿದೆ. ಎಂದರು.
೧೪ನೇ ಹಣಕಾಸು ಯೋಜನೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಮೆಸ್ಕಾಂ ಬಿಲ್ಲಿಗೆ ಸರಿದೂಗಿಸುವ ಸುತ್ತೋಲೆಯನ್ನು ನೀಡಿ ಪಂಚಾಯಿತಿಗಳ ಅಭಿವೃದ್ದಿಯನ್ನು ಗೊಂದಲಮಯವನ್ನಾಗಿಸಿದೆ. ಜಾತಿ ಸಂಘಟನೆಗಳು ಬಂಡಾಯ ರ್ಸ್ಪಗೆ ಬೆಂಬಲ ನೀಡುವುದು ಸಂಘಟನೆಗಳ ಆಂತರಿಕ ವಿಷಯವಾಗಿದೆ. ಸೈದ್ದಾಂತಿಕ ತತ್ವದ ಬಿಜೆಪಿ ಎಂದಿಗೂ ಜಾತಿ-ಧರ್ಮದ ಮತಗಳಲ್ಲಿ ವಿಭಜನೆ ಕಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂದರ್ಭ ಶಾಸಕರಾದ ಗಣೇಶ್ ಕಾರ್ಣಿಕ್, ಬಿಜೆಪಿ ಮುಖಂಡರಾದ ಉಮಾನಾಥ ಕೋಟ್ಯಾನ್, ಕೆ.ಪಿ.ಜಗದೀಶ್ ಅಕಾರಿ, ಕೆ.ಆರ್.ಪಂಡಿತ್, ಈಶ್ವರ ಕಟೀಲು, ಕಸ್ತೂರಿ ಪಂಜ, ಭುವನಾಭಿರಾಮ ಉಡುಪ, ಸುದರ್ಶನ್, ದೇವಪ್ರಸಾದ ಪುನರೂರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-19121502
ಯಕ್ಷಗಾನ ಕೊಳ್ತಿಗೆ ನಾರಾಯಣ ಗೌಡ ಸನ್ಮಾನ

ಕಿನ್ನಿಗೋಳಿ: ನಿಡ್ಡೋಡಿ ಭಟ್ರಬೈಲ್ ಹತ್ತು ಸಮಸ್ತರ ವತಿಯಿಂದ ಜರಗಿದ ಶ್ರೀ ಭಗವತಿ ಪ್ರಸಾದಿತ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರ ಯಕ್ಷಗಾನ ಪ್ರದರ್ಶನ ಸಂದರ್ಭ ನಿಡ್ಡೋಡಿ ಬಸಲಡ್ಕ ದೊಡ್ಡಯ್ಯ ಬಂಗೇರ...

Close