ಎಕ್ಕಾರು ಸುಟ್ಟ ರೀತಿಯಲ್ಲಿ ಮಹಿಳೆಯ ಶವ ಪತ್ತೆ

ಎಕ್ಕಾರು: ಬಜಪೆ ಸಮೀಪದ ಎಕ್ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೋಬ್ಬರ ದೇಹ ಪತ್ತೆಯಾಗಿದೆ, ಮಹಿಳೆಯನ್ನು ಮಂಗಳೂರು ಜಪ್ಪಿನ ಮೊಗರು ನಿವಾಸಿ ಉಷಾ ಶೆಟ್ಟಿ ಎಂದು ಗುರುತಿಸಲಾಗಿದ್ದು, ಮಂಗಳೂರಿನ ಮಾಂಡೋವಿ ಶೋರೋಂ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ನಿನ್ನೆ ಮದ್ಯಾಹ್ನದಿಂದ ನಾಪತ್ತೆಯಾಗಿದ್ದ ಅವರನ್ನು ಪತಿ ಅಶ್ವಿನ್ ಶೆಟ್ಟಿಯವರು ಮಂಗಳೂರು ಪೂಲೀಸರಿಗೆ ದೂರು ನೀಡಿದ್ದು, ಮೋಬೆಲ್ ಟವರ್ ಲೊಕೇಶನ್ ಎಕ್ಕಾರಿನಲ್ಲಿ ತೋರಿಸುತ್ತಿದ್ದ ಕಾರಣ, ಪೋಲಿಸರು ಮತ್ತು ಎಕ್ಕಾರಿನ ಸ್ಥಳೀಯರು ಮಹಿಳೆಗಾಗಿ ಹುಡುಕಾಟ ನಡೆಸಿದ್ದರು, ಇಂದು ಸಂಜೆ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಹೋಗುವ ರಸ್ತೆ ಬದಿಯಲ್ಲಿ ಸುಟ್ಟ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಶವದ ಜೊತೆ ಪೆಟ್ರೋಲ್ ಬಾಟಲ್, ಬ್ಯಾಗ್, ಮದ್ದಿನ ಚೀಟಿ ಪತ್ತೆಯಾಗಿದೆ. ನಿನ್ನೆ ಸಂಜೆ ಸುಮಾರು 3 ಗಂಟೆಯ ಹೊತ್ತಿಗೆ ಎಕ್ಕಾರಿನ ಅಂಗಡಿಯೊಂದರಲ್ಲಿ ಚಕ್ಕುಲಿಯ ಬೆಲೆ ಕೇಳಿ ವಾಪಾಸಾಗಿದ್ದು ಆ ಸಮಯದಲ್ಲಿ ಕಟೀಲು ಕಡೆಯಿಂದ ಬಂದ ಕಾರನ್ನು ಹತ್ತಿ ಹೋಗಿದ್ದರು ಎಂದು ಸ್ಥಳಿಯರು ಸಂಶಯ ಪಟ್ಟಿದ್ದಾರೆ, ಮ್ರತ ಮಹಿಳೆ ಇಬ್ಬರು ಮಕ್ಕಳನ್ನು ಹೊಂದಿದ್ದು. ಬಜಪೆ ಪೋಲಿಸರು ಪ್ರಕರಣ ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.

Poto: Arun Ullanje

Kinnigoli-19121503 Kinnigoli-19121504 Kinnigoli-19121505 Kinnigoli-19121506 Kinnigoli-19121507

Comments

comments

Comments are closed.

Read previous post:
ಕೋಟಾ ಶ್ರೀನಿವಾಸ ಪೂಜಾರಿ ಸುದ್ದಿ ಗೋಷ್ಠಿ

ಕಿನ್ನಿಗೋಳಿ: ನಮ್ಮನ್ನು ಬೆಂಬಲಿಸುವ ಮತದಾರರು ಪ್ರಥಮ ಪ್ರಾಶಸ್ತ್ಯ ಮತವನ್ನು ಬಿಜೆಪಿಗೆ ಮಾತ್ರ ಚಲಾಯಿಸಲಿದ್ದಾರೆ. ಬಿಜೆಪಿ ಉನ್ನತ ವಲಯದಿಂದ ಎರಡನೇ ಮತವನ್ನು ಚಲಾಯಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ ಕಾಂಗ್ರೆಸ್‌ನ...

Close