ಪ್ರೀತಿ, ಸುಖಶಾಂತಿಯ ಸಂದೇಶ ಕ್ರಿಸ್‌ಮಸ್ ಹಬ್ಬ

ಕಿನ್ನಿಗೋಳಿ: ಪ್ರೀತಿ, ಸುಖಶಾಂತಿಯ ಸಂದೇಶ ಸಾರುವ ಕ್ರಿಸ್‌ಮಸ್ ಹಬ್ಬ ತ್ಯಾಗ, ನಿಸ್ವಾರ್ಥಿಗಳಾಗಲು, ಸಕುಲ ಸದ್ಗುಣಗಳನ್ನು ಮೈಗೂಡಿಸಿಕೊಂಡು, ಪ್ರೀತಿಯ ವಕ್ತಾರರಾಗಲು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಕಿನ್ನಿಗೋಳಿ ಮೇರಿವೆಲ್ ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ವಿತಾಲಿಸ್ ಹೇಳಿದರು.
ಪ್ರೀತಿ-ನೀತಿ ನಡುಗೋಡು ಟ್ರಸ್ಟ್, ಸಂಜೀವಿನಿ ಮತ್ತು ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ಸಹಯೋಗದೊಂದಿಗೆ ಐಕಳದ ನೀತಿಸದನದಲ್ಲಿ ಸೋಮವಾರ ನಡೆದ ಕ್ರಿಸ್‌ಮಸ್ ಹಾಗೂ ಹೊಸವರ್ಷ ಆಚರಣೆಯ ಸೌಹಾರ್ಧ ಕೂಟದಲ್ಲಿ ಕ್ರಿಸ್‌ಮಸ್ ಗೋದಲಿ ಉದ್ಘಾಟಿಸಿ ಮಾತನಾಡಿದರು.
ಕನ್ಸೆಟ್ಟಾ ಆಸ್ಪತ್ರೆ ದಾದಿಯರ ಮೇಲ್ವಿಚಾರಕಿ ಭಗಿನಿ ಸೋಫಿಯಾ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭ ಐಕಳ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಪ್ರೀತಿ-ನೀತಿ ಟ್ರಸ್ಟ್ ಮುಖ್ಯಸ್ಥೆ ಜೂಡಿತ್ ಮಸ್ಕರೇನ್ಹಸ್ ಪ್ರತಿನಿಧಿಗಳಾದ ಶ್ಯಾಮಲಾ, ಶಾಲೆಟ್, ವೇದ, ಸಂತೋಷ್, ಅರುಣ್, ಭಗಿನಿ ಅಮಿತಾ, ದಿನೇಶ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
ಸಂಜೀವಿನಿ ಸಂಸ್ಥೆ ಸಂಚಾಲಕಿ ಭಗಿನಿ ಹೋಪ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಂಜೀವಿನಿ ಸಂಸ್ಥೆಯ ಲಲಿತಾ ಭಾಸ್ಕರ್ ಶೆಟ್ಟಿಗಾರ್ ವಂದಿಸಿದರು. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು,
ಕನ್ಸೆಟ್ಟಾ ಆಸ್ಪತ್ರೆಯ ದಾದಿಯರು ಹಾಗೂ ಕ್ಯಾಂಡಿಡೇಸ್ ಅವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

Kinnigoli-21121509

Comments

comments

Comments are closed.

Read previous post:
Kinnigoli-21121508
58 ನೇ ವರ್ಷದ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ದಾಮಸ್‌ಕಟ್ಟೆ ಶ್ರೀ ರಾಮಕೃಷ್ಣ ಭಜನಾ ಮಂದಿರದ 58 ನೇ ವರ್ಷದ ಭಜನಾ ಮಂಗಲೋತ್ಸವ ಶನಿವಾರ ನಡೆಯಿತು. ಮಂದಿರದ ಅಧ್ಯಕ್ಷ ಐ. ರಾಮದಾಸ ಶೆಣೈ, ಪ್ರಧಾನ ಅರ್ಚಕ...

Close