ಕಿನ್ನಿಗೋಳಿಯಲ್ಲಿ ಸಿಸಿಕ್ಯಾಮರ ಅಳವಡಿಕೆ

ಕಿನ್ನಿಗೋಳಿ: ಕಿನ್ನಿಗೋಳಿ ನಾಗರಿಕ ಹಿತರಕ್ಷಣಾ ವೇದಿಕೆ, ಕಿನ್ನಿಗೋಳಿಯ ಎಲ್ಲಾ ಬ್ಯಾಂಕ್ ಶಾಖಾಧಿಕಾರಿಗಳು, ಚಿನ್ನದ ವ್ಯಾಪಾರಸ್ಥರು ಹಾಗೂ ಸಂಚಾರಿ ಪೋಲೀಸ್ ಇಲಾಖೆ ಸಂಯೋಜನೆಯಲ್ಲಿ ನಡೆದ ಸಭೆಯಲ್ಲಿ ಕಿನ್ನಿಗೋಳಿ ಪೇಟೆಯ ಮುಖ್ಯರಸ್ತೆಯಲ್ಲಿ ಸಿಸಿ ಕೆಮೆರಾ ಅಳವಡಿಕೆಗೆ ತೀರ್ಮಾನ ಮಾಡಲಾಗಿದ್ದು ಆ ಪ್ರಯುಕ್ತ ಕಿನ್ನಿಗೋಳಿಯ ಚಿನ್ನದ ವ್ಯಾಪಾರಸ್ಥರು, ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಈಶ್ವರ ಕಟೀಲು, ಬಸ್ಸು ಚಾಲಕ, ನಿರ್ವಾಹಕರ ಸಂಘ, ಬಸ್ಸು ಮಾಲಕರ ಸಂಘ, ಪಿಡಬ್ಲ್ಯುಡಿ ಗುತ್ತಗೆದಾರ ಸಂತೋಷ್‌ಕುಮಾರ್ ಹೆಗ್ಡೆ ಅವರು ನೀಡಿದ ರೂ.1,00,000/- ಮುಂಗಡ ಹಣವನ್ನು ಫ್ಯಾಬ್‌ಕೋನ್ ಟೆಕ್ನಿಕಲ್ ಸಿಸ್ಟಮ್‌ನವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಬಸ್ಸು ಚಾಲಕ, ನಿರ್ವಾಹಕರ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ, ಕಾರ್ಯದರ್ಶಿ ರಮೇಶ್ ಪಕ್ಷಿಕೆರೆ, ಸಂಚಾರಿ ಪೋಲೀಸ್ ಹರಿಶೇಖರ್, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖಾ ಪ್ರಬಂಧಕ ಶೇಖರ ಮಾಡ, ನ್ಯಾಯವಾದಿ ಶಶಿಧರ ಅಡ್ಕತ್ತಾಯ, ಈಶ್ವರ ಕಟೀಲು, ಪೃಥ್ವಿರಾಜ್ ಆಚಾರ್ಯ, ಉದಯ ಕುಮಾರ್, ಬಸ್ಸು ಮಾಲಕರ ಸಂಘದ ವೇಣುಗೋಪಾಲ ಹೆಗ್ಡೆ, ಕೇಶವ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

Kinnigoli-21121505

Comments

comments

Comments are closed.

Read previous post:
Kinnigoli-21121504
ಗುತ್ತಕಾಡು ವಾರ್ಷಿಕೋತ್ಸವ

ಕಿನ್ನಿಗೋಳಿ: ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯ ಪಠ್ಯೇತರ ಚಟುವಟಿಕೆಗಳ ಜೊತೆಗೆ ಮೌಲ್ಯಯುತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಕಿನ್ನಿಗೋಳಿ ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ಹೇಳಿದರು. ಶುಕ್ರವಾರ...

Close