ಗಿಡಿಗೆರೆ ರಾಮಕ್ಕನವರು ವಿಶ್ವ ಕೋಶವಿದ್ದಂತೆ

ಕಿನ್ನಿಗೋಳಿ: ಕಿನ್ನಿಗೋಳಿ ಗಿಡಿಗೆರೆ ರಾಮಕ್ಕನವರು ವಿಶ್ವ ಕೋಶವಿದ್ದಂತೆ, ರನ್ನ ಪಂಪನಂತಹ ಕವಿಗಳಿಗೆ ಸಮಾನರು, ಯಾವುದೇ ಒಂದು ಶಿಫಾರಸಿಲ್ಲದೆ ರಾಜ್ಯೋತ್ಸವ ಪ್ರಶಸ್ತಿ ಸಂದಿದ್ದು ಅದಕ್ಕೆ ಉದಾಹರಣೆ ಎಂದು ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.
ಮುಲ್ಕಿ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್ (ರಿ) ನ ವಾರ್ಷಿಕೋತ್ಸವ ಸಂದರ್ಭ ಗಿಡಿಗೆರೆ ರಾಮಕ್ಕ ಅವರ ಸನ್ಮಾನ ನೆರೆವೇರಿಸಿ ಮಾತನಾಡಿದರು.
ಈ ಸಂದರ್ಭ ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು, ಉಪನ್ಯಾಸಕಿ ನಿಕೇತನ, ಕ್ಲಬ್ ಅಧ್ಯಕ್ಷ ಜಗದೀಶ್ ಕುಮಾರ್, ಕೋಶಾಧಿಕಾರಿ ಪ್ರಶಾಂತ್ ಕುಮಾರ್ ಬೇಕಾಲ್, ಕಾರ್ಯದರ್ಶಿ ಜಗದೀಶ್ ಕುಲಾಲ್ ಮತ್ತು ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

Kinnigoli-21121503

Comments

comments

Comments are closed.

Read previous post:
Mulki-21121503
ಮೂಲ್ಕಿ ಸೀಮೆಯ ಅರಸು ಕಂಬಳ 

ಮೂಲ್ಕಿ: ಕಂಬಳದ ಕ್ರೀಡೆಯಲ್ಲಿ ಸಾಮರಸ್ಯದ ತುಳುನಾಡಿನ ಬದುಕನ್ನು ಕಾಣಬಹುದು, ಮೂಲ್ಕಿ ಸೀಮೆಯ ಅರಸು ಕಂಬಳದ ಗತವೈಭವವನ್ನು ಭವಿಷ್ಯದಲ್ಲಿ ತಿಳಿಹೇಳಲು ಎಲ್ಲರೂ ಪ್ರಯತ್ನಿಸಬೇಕು, ನಮ್ಮ ತುಳುನಾಡ ಪರಂಪರೆಯನ್ನು ಕಂಬಳ...

Close