ಗುತ್ತಕಾಡು ವಾರ್ಷಿಕೋತ್ಸವ

ಕಿನ್ನಿಗೋಳಿ: ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯ ಪಠ್ಯೇತರ ಚಟುವಟಿಕೆಗಳ ಜೊತೆಗೆ ಮೌಲ್ಯಯುತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಕಿನ್ನಿಗೋಳಿ ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ಹೇಳಿದರು.
ಶುಕ್ರವಾರ ಗುತ್ತಕಾಡು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ತಾ. ಪಂ. ಸದಸ್ಯ ರಾಜು ಕುಂದರ್, ಕಿನ್ನಿಗೋಳಿ ಗ್ರಾ. ಪಂ. ಸದಸ್ಯರಾದ ಶ್ಯಾಮಲ ಪಿ. ಹೆಗ್ಡೆ , ವಾಣಿ, ಟಿ. ಎಚ್. ಮಯ್ಯದ್ದಿ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಗುತ್ತಕಾಡು ಮಸೀದಿಯ ಪಿ. ಜೆ.ಅಹಮ್ಮದ್ ಮದನಿ, ನಾರಾಯಣ ಗುರು ಸಮಿತಿಯ ಬಾಲಕೃಷ್ಣ ಡಿ. ಸಾಲ್ಯಾನ್, ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ, ಮೀರಾ ಸಾಬ್, ಪಶುಪಾಲನಾ ಇಲಾಖೆಯ ಚಂದ್ರಶೇಖರ್, ಲಯನ್ಸ್ ಅಧ್ಯಕ್ಷ ಸುಧಾಕರ ಶೆಟ್ಟಿ , ರೋಟರಿ ಗ್ರಾಮೀಣ ದಳದ ಅಧ್ಯಕ್ಷ ಟಿ. ಎ. ನಝೀರ್, ಸಿಆರ್‌ಪಿ ಜಗದೀಶ ನಾವಡ ಮತ್ತಿತರರು ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ರೀಟಾ ಡೇಸಾ ವರದಿ ವಾಚಿಸಿದರು. ಶಿಕ್ಷಕಿ ಅನುರಾಧ , ಶಶಿಕಲಾ ಸುಶ್ಮಿತಾ ಬಹುಮಾನ ವಿಜೇತರ ವಿವರ ಸಲ್ಲಿಸಿದರು. ಹರಿ ಭಟ್ ವಂದಿಸಿದರು.

Kinnigoli-21121504

Comments

comments

Comments are closed.

Read previous post:
Kinnigoli-21121503
ಗಿಡಿಗೆರೆ ರಾಮಕ್ಕನವರು ವಿಶ್ವ ಕೋಶವಿದ್ದಂತೆ

ಕಿನ್ನಿಗೋಳಿ: ಕಿನ್ನಿಗೋಳಿ ಗಿಡಿಗೆರೆ ರಾಮಕ್ಕನವರು ವಿಶ್ವ ಕೋಶವಿದ್ದಂತೆ, ರನ್ನ ಪಂಪನಂತಹ ಕವಿಗಳಿಗೆ ಸಮಾನರು, ಯಾವುದೇ ಒಂದು ಶಿಫಾರಸಿಲ್ಲದೆ ರಾಜ್ಯೋತ್ಸವ ಪ್ರಶಸ್ತಿ ಸಂದಿದ್ದು ಅದಕ್ಕೆ ಉದಾಹರಣೆ ಎಂದು ಡಾ. ಗಣನಾಥ...

Close