ನಿಡ್ಡೋಡಿ ಬಂಟರ ಸಂಘದ ಬೆಳ್ಳಿ ಹಬ್ಬ

ಕಿನ್ನಿಗೋಳಿ: ಸಮಾಜದ ಸರ್ವಾಂಗೀಣ ಅಭಿವೃದ್ದಿಗಾಗಿ ದುಡಿದಾಗ ಸಂಘಟನೆ ಸಮರ್ಥವಾಗಿ ಕಾರ್ಯ ನಿವರ್ಹಿಸಬಲ್ಲದು ಎಂದು ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಿಡ್ಡೋಡಿ ಶುಂಠಿಲಪದವು ಬಾಪೂಜಿ ಶಾಲಾ ವಠಾರದಲ್ಲಿ ನಡೆದ ನಿಡ್ಡೋಡಿ ಬಂಟರ ಸಂಘದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮಾತನಾಡಿದರು.
ಉಳುವವನೆ ಹೊಲದೊಡೆಯ ಕಾನೂನು ಬಂದಾಗ ಈ ಸಮಾಜ ಅಘಾತಕೊಳಗಾಗಿತ್ತು. ಆದರೆ ಸಮಾಜ ಭಾಂದವರ ಸಾಧನೆಯ ಮೂಲಕ ಮೇಲೆದ್ದು ಬಂದು ಜಗತ್ತಿನಲ್ಲೇ ಗುರುತಿಸುವಂತಹ ಸಮಾಜವಾಗಿ ಮೂಡಿ ಬಂದಿದೆ. ಎಂದರು
ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಸಂಘದ ಹಿರಿಯರಾದ ಶಶಿಕರ್ ಶೆಟ್ಟಿ ಪಾತ್ರಬೈಲು ಮತ್ತು ಅರುಣ್ ಶೆಟ್ಟಿ ಪಾತ್ರಬೈಲು ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಚಿವ ಅಭಯಚಂದ್ರ ಜೈನ್, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ದೇವಿ ಚರಣ್ ಶೆಟ್ಟಿ, ನಿಡ್ಡೋಡಿ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ ಕುಮಾರ್ ಹೆಗ್ಡೆ, ಕಟೀಲು ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಎಂ.ಬಾಲಕ್ರೃಷ್ಣ ಶೆಟ್ಟಿ, ಅಮ್ಮನಡೆಗೆ ನಮ್ಮ ನಡೆ ಪಾದಯಾತ್ರೆ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಮರವೂರು ಬೀಡು, ಜ್ಞಾನ ರತ್ನ ಎಜುಕೇಶನ್ ಚಾರಿಟೇಬಲ್ ಟಸ್ಟ್‌ನ ಬಾಸ್ಕರ ದೇವಸ್ಯ, ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಶೆಟ್ಟಿ ಹೊಸ ಮನೆ ಕೊಡೆತ್ತೂರು, ಶ್ರೀ ಡೆವಲಪ್ ನ ಗಿರೀಶ್ ಎಂ ಶೆಟ್ಟಿ, ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕಿ ಉಷಾ ಸಿ ಆಳ್ವ, ಮುಖ್ಯ ಶಿಕ್ಷಕಿ ಸುಮಿತ್ರ ಆರ್ ಶೆಟ್ಟಿ, ನಿಡ್ಡೊಡಿ ಬಿಲ್ಲವ ಸಂಘ ಅದ್ಯಕ್ಷ ಜಯ ಪೂಜಾರಿ, ಕುಡುಬಿ ಮಾತೃ ಸಂಘದ ಸಂಚಾಲಕ ಜನಾರ್ಧನ ಗೌಡ, ನಿಡ್ಡೋಡಿ ಮಲಿಯಾಳಿ ಬಿಲ್ಲವ ಸಂಘ ಅಧ್ಯಕ್ಷ ಯಾದವ ಬೆಲ್ಚಡ, ನಿಡ್ಡೋಡಿ ಸಾರಮಾನಿ ದೈವಸ್ಥಾನ ಸಮಿತಿ ಅಧ್ಯಕ್ಷ ಜಯ ಸಿ, ನಿಡ್ಡೋಡಿ ಬಂಟರ ಸಂಘದ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಮುದಲಾಡಿಗುತ್ತು, ಕೋಶಾಕಾರಿ ಸಂತೋಷ್ ಶೆಟ್ಟಿ ಮಚ್ಚಾರ್ ಗುತ್ತು, ಯುವ ಘಟಕದ ಅಧ್ಯಕ್ಷ ಯಶವಂತ ಶೆಟ್ಟಿ ಸುಬ್ಬು ಮನೆ, ಮಹಿಳಾ ಘಟಕದ ಅಧ್ಯಕ್ಷೆ ಜಯಮಾಲ ಎಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಗೌರವ ಅಧ್ಯಕ್ಷ ಬಿ ಆರ್ ಪ್ರಸಾದ್ ಸ್ವಾಗತಿಸಿ, ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-211215010

Comments

comments

Comments are closed.

Read previous post:
Mulki-21121508
ಕಂಬಳ ಕೃಷಿ ಬದುಕಿನ ಕೊಂಡಿ: ನಿತ್ಯಾನಂದ

ಮೂಲ್ಕಿ: ಕೃಷಿ ಬದುಕಿನ ಜೀವನದ ಕೊಂಡಿಯಾಗಿರುವ ಕಂಬಳವನ್ನು ಕ್ರೀಡಾ ಮಣೋಭಾವನೆಯಿಂದ ಕಾಣದೇ ಅದು ನಮ್ಮ ಪರಂಪರೆ, ಸಂಸ್ಕೃತಿ, ಸಂಸ್ಕಾರದ ಮೂಲ ಆಧಾರ ಸ್ತಂಭವಾಗಿರುವಂತೆ ಕಾಣಬೇಕು, ಹಿರಿಯರು ಶ್ರದ್ಧೆಯಿಂದ ಪ್ರಾರಂಭಿಸಿದ...

Close