ಕಂಬಳ ಕೃಷಿ ಬದುಕಿನ ಕೊಂಡಿ: ನಿತ್ಯಾನಂದ

ಮೂಲ್ಕಿ: ಕೃಷಿ ಬದುಕಿನ ಜೀವನದ ಕೊಂಡಿಯಾಗಿರುವ ಕಂಬಳವನ್ನು ಕ್ರೀಡಾ ಮಣೋಭಾವನೆಯಿಂದ ಕಾಣದೇ ಅದು ನಮ್ಮ ಪರಂಪರೆ, ಸಂಸ್ಕೃತಿ, ಸಂಸ್ಕಾರದ ಮೂಲ ಆಧಾರ ಸ್ತಂಭವಾಗಿರುವಂತೆ ಕಾಣಬೇಕು, ಹಿರಿಯರು ಶ್ರದ್ಧೆಯಿಂದ ಪ್ರಾರಂಭಿಸಿದ ಕಂಬಳ ಸಮಸ್ಯೆಗಳನ್ನು ಎದುರಿಸುತ್ತಿರುವ ದಿನಗಳಲ್ಲಿ ಸಂಘಟನಾತ್ಮಕ ಶಕ್ತಿ ಸಿಗಬೇಕು ಎಂದು ಮುಂಬಯಿ ಬಿಲ್ಲವ ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಹೇಳಿದರು.
ಅವರು ಹಳೆಯಂಗಡಿಯ ಪಡುಪಣಂಬೂರಿನಲ್ಲಿ ನಡೆದ ಐತಿಹಾಸಿಕ ಮೂಲ್ಕಿ ಸೀಮೆಯ ಅರಸು ಕಂಬಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕರ್ನಾಟಕ ಬ್ಯಾಂಕ್‌ನ ಮಂಗಳೂರಿನ ಡಿಜಿಎಂ ವಿಜಯಶಂಕರ್ ರೈ ಅಧ್ಯಕ್ಷತೆಯನ್ನು ವಹಿಸಿದ್ದರು.
ಎರ್ಮಾಳ್ ರೋಹಿತ್ ಹೆಗ್ಡೆ, ಡಾ.ಐಕಳಬಾವ ದೇವಿಪ್ರಸಾದ ಶೆಟ್ಟಿ ಬೆಳಪು, ರುಕ್ಕಯ್ಯ ಮೂಲ್ಯ ಪಾವಂಜೆ, ಲೋಕೇಶ್ ಸುರತ್ಕಲ್‌ರನ್ನು ಸನ್ಮಾನಿಸಲಾಯಿತು.
ಯದುನಾರಾಯಣ ಎಂ. ಶೆಟ್ಟಿ, ಮೋಹನ್‌ದಾಸ್ ಶೆಟ್ಟಿ, ರತ್ನಾಕರ ಸಾಲ್ಯಾನ್, ಡಾ.ಸುನಿಲ್ ಮುರ್ಡೆಶ್ವರ, ಪ್ರಕಾಶ್ ಶೆಟ್ಟಿ ಮುಂಬಯಿ, ನಾಗೇಶ್, ಭುಜಂಗ ಎಂ. ಶೆಟ್ಟಿ , ಬಾಬು ಎನ್. ಶೆಟ್ಟಿ, ಅರಮನೆಯ ಎಂ. ಗೌತಮ್ ಜೈನ್, ಪ್ರವೀಣ್ ಬಿ. ಶೆಟ್ಟಿ, ಎಂ.ಎಚ್.ಅರವಿಂದ ಪೂಂಜಾ, ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್, ಬಾರ್ಕೂರು ಶಾಂತರಾಮ ಶೆಟ್ಟಿ, ರಾಮಚಂದ್ರ ನಾಯಕ್, ಮೋಹನ್‌ದಾಸ್, ಶಾಂತರಾಮ ಶೆಟ್ಟಿ, ವಿನೋದ್ ಎಸ್.ಸಾಲ್ಯಾನ್ ಬೆಳ್ಳಾಯರು, ಚಂದ್ರಶೇಖರ್ ಜಿ. ಶಶೀಂದ್ರ ಎಂ. ಸಾಲ್ಯಾನ್, ನವೀನ್‌ಕುಮಾರ್ ಶೆಟ್ಟಿ, ಕೆ.ವಿಜಯ್‌ಕುಮಾರ್ ಶೆಟ್ಟಿ ಕೊಲ್ನಾಡು, ಎಂ.ಕೆ. ಹೆಬ್ಬಾರ್, ರಮೇಶ್ ಸುವರ್ಣ, ನವೀನ್‌ಕುಮಾರ್ ಪಡುಪಣಂಬೂರು, ರಂಜೀತ್ ಕೆ. ಪುತ್ರನ್ ಪಡುತೋಟ, ಚಂದ್ರಹಾಸ್, ಶ್ಯಾಮ್ ಪಡುಪಣಂಬೂರು, ಉಮೇಶ್ ಪೂಜಾರಿ,ಅಜಿತ್‌ಕುಮಾರ್ ಬೇಕಲ್, ವಸಂತ ಸುವರ್ಣ ಇನ್ನಿತರರು ಉಪಸ್ಥಿತರಿದ್ದರು.

Mulki-21121508

Comments

comments

Comments are closed.

Read previous post:
Kinnigoli-21121509
ಪ್ರೀತಿ, ಸುಖಶಾಂತಿಯ ಸಂದೇಶ ಕ್ರಿಸ್‌ಮಸ್ ಹಬ್ಬ

ಕಿನ್ನಿಗೋಳಿ: ಪ್ರೀತಿ, ಸುಖಶಾಂತಿಯ ಸಂದೇಶ ಸಾರುವ ಕ್ರಿಸ್‌ಮಸ್ ಹಬ್ಬ ತ್ಯಾಗ, ನಿಸ್ವಾರ್ಥಿಗಳಾಗಲು, ಸಕುಲ ಸದ್ಗುಣಗಳನ್ನು ಮೈಗೂಡಿಸಿಕೊಂಡು, ಪ್ರೀತಿಯ ವಕ್ತಾರರಾಗಲು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಕಿನ್ನಿಗೋಳಿ ಮೇರಿವೆಲ್ ಕಾನ್ವೆಂಟ್ ಮುಖ್ಯಸ್ಥೆ...

Close